ಭದ್ರಾವತಿ ವಕೀಲರ ಸಂಘಕ್ಕೆ ಉಮೇಶ್ ಅಧ್ಯಕ್ಷ

ಭದ್ರಾವತಿ ವಕೀಲರ ಸಂಘಕ್ಕೆ ಉಮೇಶ್ ಅಧ್ಯಕ್ಷ

ಭದ್ರಾವತಿ,ಅ.27:ಭದ್ರಾವತಿ ತಾಲೂಕು ವಕೀಲರ ಸಂಘಕ್ಕೆ  ಶುಕ್ರವಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ  ಅಧ್ಯಕ್ಷರಾಗಿ ಎಂ.ಹೆಚ್.ಉಮೇಶ್ ಆಯ್ಕೆಯಾಗಿದ್ದಾರೆ.  

ವಿಜೇತ ಅಭ್ಯರ್ಥಿಗಳು

ಇಂದು ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ನಡೆದ ಚುನಾವಣೆಯಲ್ಲಿ ಸಂಘದ ಒಟ್ಟು 188  ಸದಸ್ಯರ ಪೈಕಿ 183  ಸದಸ್ಯರು ಮತ ಚಲಾಯಿಸಿದರು. 5 ಗಂಟೆಗೆ ನಡೆದ ಮತ ಎಣಿಕೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಉಮೇಶ್.ಎಂ.ಹೆಚ್ 61 ಮತಗಳನ್ನು, ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಎಸ್.ನಾಗರಾಜ 97 ಮತಗಳನ್ನು, ಖಜಾಂಚಿ ಸ್ಥಾನಕ್ಕೆ ಎಂ.ಎನ್.ಆಶಾ 101 ಮತಗಳನ್ನು ಗಳಿಸಿ  ಆಯ್ಕೆಯಾದರು. 

ಕಾರ್ಯದರ್ಶಿ ಸ್ಥಾನಕ್ಕೆ ಕೆ.ರಾಜೇಶ್ ಹಾಗೂ ಸಹ ಕಾರ್ಯದರ್ಶಿ ಸ್ಥಾನಕ್ಕೆ ಹರೀಶ್ ಬರ್ಗೆ ಅವಿರೋಧ ವಾಗಿ ಆಯ್ಕೆಯಾದರು.

ಪರಾಜಿತ ಅಭ್ಯರ್ಥಿಗಳು: 

ಅಧ್ಯಕ್ಷ ಸ್ಥಾನಕ್ಕೆ ರ್ಸ್ಪಸಿದ್ದ ಬಿ.ಸಿ.ಕೇಶವಮೂರ್ತಿ 58 ಮತಗಳನ್ನು,ಆರ್.ವಿ.ಮೊಹಮದ್ ಇಲಿಯಾಸ್ 56 ಮತಗಳನ್ನು, ಜಿ.ವೈ.ಯೋಗೇಶ್ 8 ಮತಗಳನ್ನು, ಉಪಾಧ್ಯಕ್ಷ ಸ್ಥಾನಕ್ಕೆ ರ್ಸ್ಪಸಿದ್ದ ಆರ್.ಎಸ್.ಶೋಭಾ 85 ಮತಗಳನ್ನು, ಖಜಾಂಚಿ ಸ್ಥಾನಕ್ಕೆ ರ್ಸ್ಪಸಿದ್ದ ಡಿ.ವಿ.ವೇಣು 79 ಮತಗಳನ್ನು ಗಳಿಸಿ ಪರಾಭವ ಗೊಂಡಿದ್ದಾರೆ.

ಚುನಾವಣಾಕಾರಿಗಾಳಾಗಿ ಹೆಚ್. ವಿನಾಯಕ್,ಸಹಾಯಕ ಚುನಾವಣಾಕಾರಿಗಳಾಗಿ ಉಮಾಶಂಕರ್, ಕೂಡ್ಲಿಗೆರೆ ಮಂಜುನಾಥ್, ರಮೇಶ್‌ಬಾಬು ಕಾರ್ಯನಿರ್ವಹಿಸಿದರು. 

ದ್ವೈವಾರ್ಷಿಕವಾಗಿ ನಡೆಯುವ ಈ ಚುನಾವಣೆಯಲ್ಲಿ ವಿಜೇತರಾದವರು ಮುಂದಿನ ಎರಡು ವರ್ಷಗಳವರೆಗೆ ಸಂಘದ ಅಕಾರವನ್ನು ನಡೆಸಲಿದ್ದಾರೆ.  ಚುನಾವಣೆ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ವಿಜೇತರ ಅಭಿಮಾನಿಗಳು ವಿಜೇತರಿಗೆ  ಹಾರ ಹಾಕಿ, ಸಿಹಿ ಹಂಚಿ  ಸಂಭ್ರಮಿಸಿದರು.