ಎನ್‌ಯು ಆಸ್ಪತ್ರೆಯಲ್ಲಿ ಇಬ್ಬರಿಗೆ ಯಶಸ್ವಿ ಕಿಡ್ನಿ ಕಸಿ ಚಿಕಿತ್ಸೆ

ಎನ್‌ಯು ಆಸ್ಪತ್ರೆಯಲ್ಲಿ ಇಬ್ಬರಿಗೆ ಯಶಸ್ವಿ ಕಿಡ್ನಿ ಕಸಿ ಚಿಕಿತ್ಸೆ

ಶಿವಮೊಗ್ಗ:  "ಹುಟ್ಟಿನಿಂದಲೇ ಒಂದೇ ಕಿಡ್ನಿ ಮತ್ತು ಮೆಗಾಯುರೆಟರ್‌ನೊಂದಿಗೆ ಜನಿಸಿದ್ದ ಬಾಲಕನಿಗೆ ೧೧ ವರ್ಷವಿದ್ದಾಗ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು ಆದರೆ ರೋಗಿಯ ಕಿಡ್ನಿ ಆರೋಗ್ಯವು ನಿಧಾನಕ್ಕೆ ಹದಗೆಟ್ಟಿದ್ದರಿಂದ ಡಯಾಲಿಸಿಸ್ ಪ್ರಾರಂಭವಾಯಿತು. ಆತಂಕದಿಂದ ರೋಗಿಯು ಎನ್‌ಯು ಆಸ್ಪತ್ರೆಗೆ ದಾಖಲಾಗಿದ್ದರು ಹಾಗೂ ತಾಯಿ ಕಿಡ್ನಿ ನೀಡಲು ಸಿದ್ಧರಾದರು. ಎನ್‌ಯು ಟ್ರಸ್ಟ್ ನ ಆರ್ಥಿಕ ಸಹಾಯದೊಂದಿಗೆ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಬಗ್ಗೆ ಸೂಚಿಸಲಾಯ್ತು. ಆ ನಂತರದಲ್ಲಿ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಪೂರ್ವ ಆರೈಕೆ ಮತ್ತು ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಅನ್ನು ಯಶಸ್ವಿಯಾಗಿ ನಡೆಸಲಾಯಿತು. ರೋಗಿಯು ಈಗ ಆರೋಗ್ಯಕರ ಹಾಗೂ ತೃಪ್ತಿಕರ ಜೀವನ ನಡೆಸುತ್ತಿದ್ದಾರೆ ಎಂದು ಟ್ರಾನ್ಸ್‌ಪ್ಲಾಂಟ್  ಹಾಗೂ ರೊಬೊಟಿಕ್ ಸರ್ಜನ್ ಡಾ|| ಪ್ರದೀಪ ಎಂ.ಜಿ ಹೇಳಿದರು.

 ಮಂಗಳವಾರ ಆಸ್ಪತ್ರೆಯಲ್ಲಿ ಸುದ್ದಿಗೋಷ್ಟಿಯಲ್ಲಿ ಅವರು ಈ ವಿವರ ನೀಡಿದರು.  

"16 ನೇ ವಯಸ್ಸಿನಿಂದಲೇ ಟೈಪ್ 1 ಡಯಾಬಿಟಿಸ್‌ನಿಂದ ಬಳಲುತ್ತಿದ್ದ 22 ವರ್ಷದವನಲ್ಲಿ ಕಿಡ್ನಿ ಕಾಯಿಲೆ ಕಾಣಿಸಿಕೊಂಡಿತ್ತು. ರೋಗಿಗೆ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಮಾಡಲಾಯಿತು. ಈ ಪ್ರಕರಣದಲ್ಲಿ ಖುದ್ದು ತಾಯಿಯೇ ಮಗನಿಗೆ ಕಿಡ್ನಿ ದಾನ ಮಾಡುವ ಮೂಲಕ ಮಗನಿಗೆ ಮರುಜನ್ಮ ನೀಡಿದ್ದಾರೆ. ಸುಧಾರಿತ ತಂತ್ರಜ್ಞಾನ ಬಳಸಿಕೊಂಡು ಎನ್‌ಯು ಆಸ್ಪತ್ರೆಯು ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಮಾಡಿದ್ದು, ಯುವಕನ ಬದುಕಿಗೆ ಹೊಸ ಭರವಸೆ ಮೂಡಿಸಲಾಗಿದೆ. ರೋಗಿಯು ಶೀಘ್ರವಾಗಿ ಚೇತರಿಸಿಕೊಂಡಿದ್ದು, ಕಿಡ್ನಿ ಸಹ ಉತ್ತಮವಾಗಿ ಕಾರ್ಯ ನಿರ್ವಹಿಸಲಾರಂಭಿಸಿದೆ ಎಂದು ಶಿವಮೊಗ್ಗದ ಎನ್‌ಯು ಆಸ್ಪತ್ರೆಯ  ಟ್ರಾನ್ಸ್‌ಪ್ಲಾಂಟ್ ಫಿಸಿಶಿಯನ್ ಡಾ|| ಪ್ರವೀಣ್ ಮಾಳವದೆ ಹೇಳಿದರು.

ಈ ಲಿಂಕ್ ಅನ್ನು ಕ್ಲಿಕ್ ಮಾಡಿ  http://www.krantideepa.com/

ಇಂತಹ ಹಲವಾರು ಅಪರೂಪದ ಮತ್ತು ಸಂಕೀರ್ಣ ಪ್ರಕರಣದಲ್ಲಿ ಎನ್‌ಯು ಆಸ್ಪತ್ರೆ ಚಿಕಿತ್ಸೆ ನೀಡಿದೆ. ಈ ತರಹದ ಪ್ರಕರಣದಲ್ಲಿ 3 ರಕ್ತನಾಳಗಳುಳ್ಳ ಕಿಡ್ನಿ ಹೊಂದಿದ್ದರಿಂದ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಶಸ್ತ್ರಚಿಕಿತ್ಸೆಯು ಸವಾಲಿನದಾಗಿತ್ತು ಆದರೆ ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿ ಈ ಸವಾಲನ್ನು ಎನ್‌ಯು ಆಸ್ಪತ್ರೆಯ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ತಂಡ ಯಶಸ್ವಿಯಾಗಿ ಮಾಡಿ ತೋರಿಸಿದೆ ಎಮದು ವಿವರಿಸಿದರು. "ರೋಗಿಯು ಆರಂಭದಲ್ಲಿ ನಿಧಾನಗತಿಯ ಚೇತರಿಕೆ ಕಂಡುಬಂದರೂ, ನಂತರ ಕಿಡ್ನಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸಾಮಾನ್ಯ ಕಿಡ್ನಿಯಂತೆ ಕಾರ್ಯ ನಿರ್ವಹಿಸುತ್ತಿದೆ’ ಎಂದು ಡಾ|| ಮಾಳವದೆ ಹೇಳಿದರು.

ಶಿವಮೊಗ್ಗದ ಎನ್‌ಯು ಆಸ್ಪತ್ರೆಯು ಉನ್ನತ ಶ್ರೇಣಿಯ ವೈದ್ಯಕೀಯ ಆರೈಕೆ ಮತ್ತು ಸುಧಾರಿತ ಚಿಕಿತ್ಸಾ ಆಯ್ಕೆಗಳನ್ನು ಒದಗಿಸಲು ಮೀಸಲಾಗಿರುವ ಹೆಸರಾಂತ ಆರೋಗ್ಯ ಸಂಸ್ಥೆಯಾಗಿದೆ. ನಿಪುಣ ವೈದ್ಯಕೀಯ ವೃತ್ತಿಪರರ ತಂಡ ಮತ್ತು ಅತ್ಯಾಧುನಿಕ ಸೌಲಭ್ಯಗಳೊಂದಿಗೆ, ಆಸ್ಪತ್ರೆಯು ತನ್ನ ರೋಗಿಗಳಿಗೆ ಸೂಕ್ತ ಚಿಕಿತ್ಸೆಯನ್ನು ವಿವಿಧ ವೈದ್ಯಕೀಯ ವಿಭಾಗಗಳಲ್ಲಿ ಪರಿಣತಿಯನ್ನು ಹೊಂದಿದ ನುರಿತ ವೈದ್ಯರಿಂದ ನೀಡುತ್ತಿದೆ ಎಮದು ವಿವರಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಟ್ರಾನ್ಸ್‌ಪ್ಲಾಂಟ್ ಅನಸ್ತೇಟಿಸ್ಟ್ ಡಾ||ಕಾರ್ತಿಕ್ ಎಸ್.ಎಲ್ ಮತ್ತು ಆಸ್ಪತ್ರೆಯ  ಅಡಳಿತಾಕಾರಿ ಮೊಹಮ್ಮದ್ ರಫಿ ಉಪಸ್ಥಿತರಿದ್ದರು.