ಶಾಂತಕುಮಾರ್ ಪಿಟಿಐ ಅಧ್ಯಕ್ಷ

ಶಾಂತಕುಮಾರ್ ಪಿಟಿಐ ಅಧ್ಯಕ್ಷ

ನವದೆಹಲಿ,ಸೆ.29: ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ಅಧ್ಯಕ್ಷರಾಗಿ ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್ (ಟಿಪಿಎಂಎಲ್) ನಿರ್ದೇಶಕ ಕೆ.ಎನ್.ಶಾಂತಕುಮಾರ್ ಅವರು ಆಯ್ಕೆಯಾಗಿದ್ದಾರೆ. 

ಶುಕ್ರವಾರ ಪಿಟಿಐನ ಆಡಳಿತ ಮಂಡಳಿ ನಿರ್ದೇಶಕರ ವಾರ್ಷಿಕ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಉಪಾಧ್ಯಕ್ಷ ರಾಗಿ ಹಿಂದೂಸ್ಥಾನ್ ಟೈಮ್ಸ್ನ ಸಿಇಒ ಪ್ರವೀಣ್ ಸೋಮೇಶ್ವರ್ ಆಯ್ಕೆಯಾದರು. ಇವರ ಅಕಾರಾವ ಒಂದು ವರ್ಷದ್ದಾಗಿರಲಿದೆ.

ಈ ಲಿಂಕ್ ಅನ್ನು ಕ್ಲಿಕ್ ಮಾಡಿ  http://www.krantideepa.com/

ಈ ಮೊದಲು ಅವೀಕ್ ಸರ್ಕಾರ್ ಅವರು ಎರಡು ಸತತ ಅವಗೆ ಅಧ್ಯಕ್ಷರಾಗಿ ದ್ದರು. ಪಿಟಿಐ ಅಧ್ಯಕ್ಷರಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿ ರುವ ಶಾಂತಕುಮಾರ್, ಸುದ್ದಿಯ ಜತೆಗೆ ಇತ್ತೀಚೆಗೆ ವಿಡಿಯೊ ಸುದ್ದಿಗಳನ್ನು ನೀಡಲು ಆರಂಭಿಸುವ ಮೂಲಕ ಪರಿವರ್ತನೆಯ ಕಾಲಘಟ್ಟದಲ್ಲಿರುವ ಸುದ್ದಿ ಸಂಸ್ಥೆ ಪಿಟಿಐನ ಅಧ್ಯಕ್ಷನಾಗಿ ನೇಮಕಗೊಂಡಿರುವುದು ಅತ್ಯಂತ ಸಂತಸ ತಂದಿದೆ ಎಂದಿದ್ದಾರೆ.