ಮೀಸಲಾತಿ: ಮಹಿಳೆಯರಿಗೆ ದೇವಮಾನವನಿಂದ ಟೋಪಿ

ಬೆಂಗಳೂರು,ಸೆ.24 : ಮಹಿಳೆಯರಿಗೆ ಮೀಸಲಾತಿ ನೀಡಲು ದೇವರೇ ನನ್ನನ್ನು ಕಳುಹಿಸಿದ್ದಾನೆ ಎಂದು ಹೇಳಿಕೊಂಡಿರುವ ದೇವಮಾನವ, ಮಸೂದೆಯಲ್ಲಿ ಮಾತ್ರ ಹಲವು ಷರತ್ತುಗಳನ್ನು ಹಾಕಿ ಮಹಿಳೆಯರಿಗೆ ಟೋಪಿ ಹಾಕಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರು ಪ್ರಧಾನಿ ವಿರುದ್ಧ ಕಿಡಿಕಾರಿದರು.
ರಾಮ ಮನೋಹರ ಲೋಹಿಯಾ ಸಮತಾ ವಿದ್ಯಾಲಯ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮತ್ತು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಶನಿವಾರ ಹಮ್ಮಿಕೊಂಡಿದ್ದ ‘ಮಹಿಳಾ ಮೀಸಲಾತಿ’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರಿಗೆ ಮೀಸಲಾತಿ ನೀಡಬೇಕು ಎಂಬ ಪ್ರಾಮಾಣಿಕತೆ ಬಿಜೆಪಿಯಲ್ಲಿ ಕಾಣುತ್ತಿಲ್ಲ. ವೋಟಿ ಗಾಗಿ ತರಾತುರಿಯಲ್ಲಿ ಮಸೂದೆ ಮಂಡನೆ ಮಾಡಿ ದ್ದಾರೆ. ಮಸೂದೆಗೆ ರಾಷ್ಟ್ರಪತಿಯವರ ಅಂಕಿತ ಬಿದ್ದರೂ ಜಾರಿಯಾಗದಂತೆ ಷರತ್ತುಗಳಿವೆ ಎಂದರು.
ಈ ಲಿಂಕ್ ಅನ್ನು ಕ್ಲಿಕ್ ಮಾಡಿ http://www.krantideepa.com/
ಮಹಿಳಾ ಮೀಸಲಾತಿಗೆ 15 ವರ್ಷಗಳ ಕಾಲಮಿತಿ ನಿಗದಿ ಮಾಡಿರುವುದು ಯಾಕೆ? ಮಸೂದೆ ಅಂಗೀಕಾರ ಆದ ಮೇಲೆ ಜಾರಿಯಾಗಬೇಕು. ಆದರೆ, ಕ್ಷೇತ್ರ ಪುನರ್ವಿಂಗಡಣೆಯಾದ ಮೇಲೆ, ಜನಗಣತಿ ನಡೆದ ಮೇಲೆ, ಕೇಂದ್ರ ಸರ್ಕಾರ ಸೂಚಿಸಿದ ದಿನಾಂಕದ ಬಳಿಕ ಜಾರಿಯಾಗಬೇಕು ಎಂದು ಕೊಕ್ಕೆ ಗಳನ್ನು ಇಟ್ಟಿರುವುದು ಯಾಕೆ? ಇದು ಜಾರಿಯಾಗುವ ಹೊತ್ತಿಗೆ 15 ವರ್ಷ ಮುಗಿದಿರುತ್ತದೆ ಎಂದರು.
ಮಹಿಳಾ ಮೀಸಲಾತಿ ತರುವ ಅಕಾರ ರಾಜ್ಯ ಸರ್ಕಾರಕ್ಕೆ ಇದ್ದಿದ್ದರೆ ಇಷ್ಟೊತ್ತಿಗೆ ಜಾರಿಗೆ ತಂದು ಬಿಡುತ್ತಿದ್ದೆ. ಇವತ್ತಿಗೂ ಮಹಿಳೆಯರಿಗೆ ಟಿಕೆಟ್ ಹಂಚುವ ವಿಚಾರ ಬಂದಾಗ ಟಿಕೆಟ್ ನೀಡುವ ಮನ ಸ್ಸಿದ್ದರೂ ನೀಡಲಾಗುತ್ತಿಲ್ಲ. ಕ್ಷೇತ್ರಗಳಿಂದ ತರಿಸುವ ವರದಿಗಳು ಮಹಿಳಾ ಆಕಾಂಕ್ಷಿ ಪರ ಇರುವುದಿಲ್ಲ. ಅದಕ್ಕೆ ಮಹಿಳಾ ಮೀಸಲಾತಿ ಜಾರಿಯಾದರೆ ಪ್ರಾತಿ ನಿಧ್ಯ ನೀಡಲೇಬೇಕಾಗುತ್ತದೆ ಎಂದು ತಿಳಿಸಿದರು.
ನ್ಯಾಯವಾದಿ ರವಿವರ್ಮ ಕುಮಾರ್ ವಿಷಯ ಮಂಡನೆ ಮಾಡಿ, ನಾಡಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂವಾದ ನಡೆಸಿ ಬಳಿಕ ಯಾವುದೇ ಕಾಯ್ದೆಯನ್ನು ಜಾರಿಗೆ ತರುವುದು ಪ್ರಜಾಪ್ರಭುತ್ವ. ಆದರೆ, ಇತ್ತೀಚೆಗೆ ಎಲ್ಲವನ್ನು ರಹಸ್ಯವಾಗಿಟ್ಟು, ಕೊನೇ ಕ್ಷಣದಲ್ಲಿ ಒಂದು ಅಥವಾ ಎರಡೇ ದಿನಗಳಲ್ಲಿ ಲೋಕಸಭೆ, ರಾಜ್ಯಸಭೆಗಳಲ್ಲಿ ಅಂಗೀಕರಿಸುವುದು ಈಗಿನ ಮಾದರಿಯಾಗಿಬಿಟ್ಟಿದೆ ಎಂದು ಹೇಳಿದರು.