ದಾವಣಗೆರೆಗೆ ಭದ್ರಾ ನೀರು ಬಿಡಲು ಮನವಿ

ಸೊರಬ,ಅ.12: ಭದ್ರಾ ಜಲಾಶಯದಿಂದ ದಾವಣಗೆರೆ ಭಾಗಕ್ಕೆ ನೀರು ಹರಿಸುವ ವಿಚಾರದಲ್ಲಿ ತಾರತಮ್ಯ ಧೋರಣೆ ಅನುಸರಿಸಲಾಗುತ್ತಿದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾ ಯಿಸಿ ಭದ್ರಾ ಜಲಾಶಯ ಯೋಜನಾ ಮಟ್ಟದ ನೀರು ಬಳಕೆ ದಾರರ ಸಹಕಾರ ಸಂಘಗಳ ಮಹಾಮಂಡಳಿ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಭದ್ರಾ ನೀರಾವರಿ ಸಲಹಾ ಸಮಿತಿ ಸೂಚನೆಯಂತೆ 20 ದಿನ ನೀರು ಹರಿಸಿ, 10 ದಿನ ತಡೆ ಹಿಡಿಯಲಾಗುತ್ತಿದೆ. ಆದರೆ 100 ದಿನಗಳವರೆಗೆ ನೀರು ಹರಿಸುವ ಒಪ್ಪಂದದಂತೆ ದಾವಣಗೆರೆ ಹಾಗೂ ಮಲೆಬೆನ್ನೂರು ಭಾಗದ ರೈತರು ಭತ್ತ ನಾಟಿ ಮಾಡಿದ್ದಾರೆ. ತೆನೆಕಟ್ಟುವ ವೇಳೆಗೆ ನೀರು ತಡೆ ಹಿಡಿಯಲಾಗಿದೆ ಎಂದು ರೈತರು ದೂರಿದರು.
ಈ ಲಿಂಕ್ ಅನ್ನು ಕ್ಲಿಕ್ ಮಾಡಿ http://www.krantideepa.com/
100 ದಿನದಲ್ಲಿ 2,700 ಕ್ಯುಸೆಕ್ ನೀರು ಹರಿಸುವಂತೆ ನೀರು ಬಳಕೆದಾರರ ಸಂಘ ಮಾಡಿದ್ದ ಮನವಿಯನ್ನು ನೀರಾ ವರಿ ಸಲಹಾ ಸಮಿತಿ ಒಪ್ಪಿತ್ತು. ಆದರೆ ಜಲಾಶಯಕ್ಕೆ ಒಳ ಹರಿವು ಇಳಿಕೆಯಾದ ಕಾರಣ ನದಿಗೆ ನೀರು ಹರಿಸುವುದನ್ನು ತಡೆ ಹಿಡಿಯಲಾಗಿದೆ. 100 ದಿನಗಳವರೆಗೆ ನಿರಂತರ ನೀರು ಹರಿಸಲು ಕೂಡಲೇ ಗಮನ ಹರಿಸಬೇಕು ಎಂದು ರೈತರು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಸಚಿವರು, ಅ.16 ರಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಅಕಾರಿಗಳ ಸಭೆ ಕರೆದು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಭದ್ರಾ ಜಲಾಶಯ ಯೋಜನಾ ಮಟ್ಟದ ನೀರು ಬಳಕೆ ದಾರರ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷ ವೈ. ದ್ಯಾವಪ್ಪ ರೆಡ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷ ನಾಗೇಶ್ವರರಾವ್, ಮಂಜುನಾಥ್ ಪಾಟೀಲ್, ಭಾರತೀಯ ರೈತ ಒಕ್ಕೂಟದ ಕಾರ್ಯದರ್ಶಿ ಲಿಂಗರಾಜ, ಮಂಜುನಾಥ್, ಮುರು ಗೇಂದ್ರಯ್ಯ, ತಿಪ್ಪೇರುದ್ರಪ್ಪ, ಮಹೇಂದ್ರಪ್ಪ, ಕುಂದವಾಡ ಹನುಮಂತಪ್ಪ, ಪುನೀತ್ ಕುಂದವಾಡ ಇದ್ದರು.