ಮಕ್ಕಳಿಗೆ ಪಾಲಕರು ಸಂಸ್ಕಾರ ಕಲಿಸಬೇಕು

ರಂಗದಸರಾ ಉದ್ಘಾಟಿಸಿ ಹಿರಿಯ ಚಿತ್ರನಟ ದೊಡ್ಡಣ್ಣ ಕರೆ

ಮಕ್ಕಳಿಗೆ ಪಾಲಕರು ಸಂಸ್ಕಾರ ಕಲಿಸಬೇಕು

ಶಿವಮೊಗ್ಗ ಅ. 17:   ಮಕ್ಕಳಿಗೆ ಮನೆಯಲ್ಲಿ ಪಾಲಕರು  ಸಂಸ್ಕಾರ ಕಲಿಸಬೇಕು ಎಂದು ಚಿತ್ರನಟ ದೊಡ್ಡಣ್ಣ ಹೇಳಿದರು. 

 ಅವರು ಮಂಗಳವಾರ ಶಿವಮೊಗ್ಗ ದಸರಾ ಕಾರ್ಯಕ್ರಮದಲ್ಲಿ ರಂಗ ದಸರಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

 ರಂಗದಸರಾಕ್ಕೆ  ಮಕ್ಕಳ ಸಂಖ್ಯೆ ಬಹಳ ಕಡಿಮೆ ಇದೆ. ಹೆಚ್ಚಿರಬೇಕಿತ್ತು. ರಂಗ ಕಲೆ ಒಂದು ಸಂಸ್ಕಾರವಿದ್ದಂತೆ. ಮಕ್ಕಳಿಗೆ ತಾಯಂದಿರು ಮೆನಯಲ್ಲಿ ಸಂಸ್ಕಾರ ಕಲಿಸಬೇಕು. ಇಲ್ಲದೇ ಹೋದಲ್ಲಿ ನಾವು ಮುಂದಿನ ದಿನಗಳಲ್ಲಿ ಸಭಾಂಗಣ ಖಾಲಿ ಯಾಗಿರುವುದನ್ನು ಕಾಣಬೇಕಾಗುತ್ತದೆ ಎಂದು ಎಚ್ಚರಿಸಿದರು.  

 ತಾನು ಭದ್ರಾವತಿಯ ವಿ ಐ ಎಸ್ ಎಲ್ ನಲ್ಲಿ 20 ವರ್ಷ ಕೆಲಸ ಮಾಡಿದ್ದನ್ನು ಸ್ಮರಿಸಿದ ಅವರು, ಆಗ ಅಲ್ಲಿ ನಾಟಕವಾಡಿದ ಅನುಭವದಿಂದ  ಮುಂದೆ ಚಿತ್ರರಂಗಕ್ಕೆ ಬಂದೆ. ನಾನು ಭದ್ರಾವತಿಯಲ್ಲಿ ನಾಟಕ ಆಡಿ ಮನೆಗೆ ಹೋದಾಗ ನನಗೆ ಮಗ ಹುಟ್ಟಿದ್ದ. ನನ್ನ ಖುಷಿ ಮತ್ತಷ್ಟು ಹೆಚ್ಚಿತು.  ನಾಟಕ ಅನ್ನ ಕೊಟ್ಟಿದೆ. ಕಾರ್ಖಾನೆ ಅನ್ನ ಕೊಪಟ್ಟಿದೆ. ಅನ್ನ ಕೊಟ್ಟವರನ್ನು ಎಂದೂ ಮರೆಯಬಾರದು ಎಂದರು. 

ಕಾವ್ಯೇಷು ನಾಟಕಂ ರಮ್ಯಂ ಅನ್ನುತ್ತಾರೆ. ನಿಜಕ್ಕೂ ಅದು ಸತ್ಯವಾದ ಮಾತು. ನಾವು ಸಂತೋಷ ಅನುಭವಿಸುವುದಕ್ಕೆ ನಾಟಕ ಹೆಚ್ಚು ಕಾರಣವಾಗಿದೆ. ಕರೆಂಟ್ ಇಲ್ಲದ ಕಾಲದಲ್ಲಿ ಲಾಂದ್ರ ಹಚ್ಚಿ ನಾಟಕ ಆಡುತ್ತಿದ್ದೆವು. ಎಲ್ಲವೂ ಕನ್ನಡ ನಾಟಕಗಳೇ ಆಗಿವೆ. ಕನ್ನಡವನ್ನು ಎಂದಿಗೂ  ಮರೆಯಬಾರದು. ಶ್ರೀವಿಜಯ ಬರೆದಂತೆ ಮಹಾರಾಷ್ಟ್ರದ ನಾಸಿಕ್ ನ ವರೆಗೆ ಕನ್ನಡ  ಇತ್ತು.ಕನ್ನಡದವರು ಜ್ಞಾನವಂತರು, ಮಾತುಗಾರರು, ಅವರು ಓದದಿದ್ದರೂ ಕಾವ್ಯ ಅರ್ಥಮಾಡಿಕೊಳ್ಳುತ್ತಿದ್ದರು ಎಂದ ಅವರು, ಕನ್ನಡ ಪುಸ್ತಕ ಓದಬೇಕು. ಯಯಾತಿ ಮತ್ತು  ಅಮೋಘವರ್ಷ ನೃಪತುಂಗ ನಾನು ಓದಿದ ಉತ್ತಮ ಪುಸ್ತಕಗಳು ಎಂದರು.

ಈ ಲಿಂಕ್ ಅನ್ನು ಕ್ಲಿಕ್ ಮಾಡಿ  http://www.krantideepa.com/

ಅನ್ನ ಮತ್ತು ತಾಯಿ ಜಗತ್ತಿನಲ್ಲಿ  ಅತ್ಯಂತ ಮೇಲ್ಮಟ್ಟದ್ದು. ನಾನು ಎನ್ನುವುದು ನಶ್ವರ.ಹಾಗಾಗಿ ತಾಯಿ, ತಾಯಿ ನಾಡು  ತಾಯಿ ಭಾಷೆ ಮುಖ್ಯವಾದದ್ದು. ನನಗೆ ಅನ್ನ ನೀಡಿದ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ನೂರು ವರ್ಷ ತುಂಬಿದೆ ಅದಕ್ಕಾಗಿ ನವೆಂಬರ್ ತಿಂಗಳಲ್ಲಿ ೩ ದಿನ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಚನ್ನಬಸಪ್ಪ ಮಾತನಾಡಿ, ರಂಗ ಭೂಮಿಗಾಗಿ ಶಿವಮೊಗ್ಗ ಪಾಲಿಕೆ ಇಪ್ಪತ್ತೈದು ಲಕ್ಷ ರುಪಾಯಿ ಹಣ ಇಟ್ಟಿದೆ ಎಂದರು.

 ವೇದಿಕೆಯಲ್ಲಿ ರಂಗದಸರಾ ಅಧ್ಯಕ್ಷ ರಾಜು ,ಕಾಂತೇಶ್ ಕದರಮಂಡಲಗಿ, ಕೆ.ಜಿ.ವೆಂಕಟೇಶ್ ಉಮೇಶ್ ಹಾಲಾಡಿ ,ಮಹಾ ನಗರಸಭಾ ಪಾಲಿಕೆ ಸದಸ್ಯರು  ಉಪಸ್ಥಿತರಿದ್ದರು.  ರಾಜಕುಮಾರ್ ನಿರೂಪಣೆ ಮಾಡಿದರು.