ಸೌಲಭ್ಯ ಸಾಮಾನ್ಯ ಜನರಿಗೂ ತಲುಪಲಿ: ಮಧು ಬಂಗಾರಪ್ಪ

ಶಿವಮೊಗ್ಗ,ಸೆ.25 : ಜನರ ಸಮಸ್ಯೆ ಅರಿತಾಗ ಮಾತ್ರ ನಮಗೆ ಗೊತ್ತಾಗುತ್ತದೆ. ಅಹವಾಲು ತಗೊಳ್ಳೋದು ಮುಖ್ಯವಲ್ಲ. ಉತ್ತರ ಕೊಡೋದು ಮುಖ್ಯ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನತಾದರ್ಶನದಿಂದ ಜನರಿಗೆ ಅನುಕೂಲ ಆಗಲಿದೆ. ಮುಂಚೆ ಅಕಾರ ಮಾಡಿದವರ ಹಣೆಬರಹ ಏನು ಅಂತಾ ಇವತ್ತು ಗೊತ್ತಾಗುತ್ತದೆ. ಆಡಳಿತವನ್ನು ಹಿಡಿತಕ್ಕೆ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಈ ಕೆಲಸ ಮಾಡಿದ್ದಾರೆ. ಜನರ ಸಮಸ್ಯೆ ನಡುವೆ ಇದ್ದು ಪರಿಹಾರ ಕಂಡು ಕೊಳ್ಳೋದು ಒಳ್ಳೆಯದು ಎಂದರು.
ಕಾವೇರಿ ಹೋರಾಟ ವಿಚಾರ ಕುರಿತು ಪ್ರತಿಕ್ರಿಯೆ
ನೀಡಿದ ಸಚಿವರು, ಬಂದ್ ಮಾಡೋದು ಅವರ ಹಕ್ಕು. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಆಗದ ಹಾಗೆ ಪ್ರತಿಭಟನೆ ಮಾಡಲಿ. ಇಂದು ಈ ವಿಷಯ ಸುಪ್ರೀಂ ಕೋರ್ಟ್ ನಲ್ಲಿದೆ. ಕೇಂದ್ರ ಸರ್ಕಾರ ವಸ್ತು ಸ್ಥಿತಿ ಅರಿತರೇ ಒಳ್ಳೆಯದು. ಕಾವೇರಿ ನದಿ ವಿಚಾರದಲ್ಲಿ ರಾಜ್ಯ ರಾಜ್ಯಗಳ ನಡುವೆ ಸಮಸ್ಯೆ ಆಗುತ್ತಿದೆ ಎಂದರು.
ಈ ಲಿಂಕ್ ಅನ್ನು ಕ್ಲಿಕ್ ಮಾಡಿ http://www.krantideepa.com/
ಹೊಸ ಮದ್ಯದ ಅಂಗಡಿ ತೆರೆಯುವ ವಿಚಾರ ಕುರಿತು ಮದ್ಯ ಭಾಗ್ಯ ಕರುಣಿಸಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಲೇವಡಿ ವಿಚಾರಕ್ಕೆ ಪ್ರತಿಕ್ರಿಸಿದ ಮಧು ಬಂಗಾರಪ್ಪ, ಇಂತಹ ಹೇಳಿಕೆಗಳಿಗೆ ಎಲ್ಲಾ ಪ್ರತಿಕ್ರಿಯೆ ನೀಡಲ್ಲ. ಮಾಜಿ ಸಿಎಂ ಆದವರು ಟೀಕೆ ಮಾಡುವ ಮೊದಲು ಯೋಚನೆ ಮಾಡಲಿ. ನಮ್ಮ ಸರ್ಕಾರದ ಅಭಿವೃದ್ಧಿ ನೋಡಿ ಅವರಿಗೆ ಸಹಿಸಲಾಗುತ್ತಿಲ್ಲ. ವಿರೋಧ ಪಕ್ಷಗಳು ಜನರ ದಾರಿ ತಪ್ಪಿಸುವ ಹೇಳಿಕೆ ಕೊಟ್ಟರೆ ಅದು ನಿಮ್ಮ ಹಣೆ ಬರಹ, ನಮ್ಮ ಹಣೆಬರಹ ಅಲ್ಲ ಎಂದು ತಿರುಗೇಟು ನೀಡಿದರು. ಶಿವಮೊಗ್ಗ ಸ್ಮಾರ್ಟ್ ಸಿಟಿ ಅವ್ಯವಹಾರ ತನಿಖೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಈಗಾಗಲೇ ಸ್ಮಾರ್ಟ್ ಸಿಟಿ ಅವ್ಯವಹಾರದ ಬಗ್ಗೆ ತನಿಖೆಗೆ ಸೂಚಿಸಲಾಗಿದೆ. ತನಿಖೆ ನಡೆಸಲು ನಮ್ಮಲ್ಲಿ ಸೂಕ್ತ ತನಿಖೆ ವ್ಯವಸ್ಥೆ ಇದೆ ಎಂದರು.
ನಮ್ಮದೇ ಸರ್ಕಾರ ಇದೆ, ದಾವಣಗೆರೆಯಲ್ಲಿ ರೈತರು ಪ್ರತಿಭಟನೆ ಮಾಡ್ತಿದ್ದಾರೆ. ಅವರು ರೈತರೇ, ನಮ್ಮ ಜಿಲ್ಲೆಯವರೂ ರೈತರೇ ಆಸೆಯಿಂದ ಭತ್ತ ನಾಟಿ ಮಾಡಿದ್ದಾರೆ. ದುಡಿಮೆ ಮಾಡಲು ಬೇಡ ಎನ್ನಲಾಗದು. ನಾಳೆಯಿಂದ ನೀರು ಬಿಡಲೇ ಬೇಕಾಗುತ್ತದೆ.
-ಮಧುಬಂಗಾರಪ್ಪ, ಸಚಿವ