ಕರ್ನಾಟಕ ಬಂದ್ ನೀರಸ

ಕಾವೇರಿಗಾಗಿ ಮಿಡಿದ ಚಲನಚಿತ್ರ ಕಲಾವಿದರು

ಕರ್ನಾಟಕ ಬಂದ್ ನೀರಸ

ಬೆಂಗಳೂರು,ಸೆ.29 : ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಸಿ ವಿವಿಧ ಸಂಘಟನೆಗಳು ನೀಡಿದ್ದ ಕರ್ನಾಟಕ ಬಂದ್ ಕರೆಗೆ ದಕ್ಷಿಣದಲ್ಲಿ ಉತ್ತಮ, ಉತ್ತರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ, ಚಾಮಗರಾಜನಗರ, ಹಾಸನ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಪ್ರತಿ ಭಟನೆಗೆ ಭಾರೀ ಬೆಂಬಲ ವ್ಯಕ್ತವಾಯಿತು. ವಿವಿಧ ಸಂಘಟನೆಗಳು ಬೀದಿಗಿಳಿದು ತಮ್ಮ ಆಕ್ರೋಶ ಹೊರಹಾಕಿದರು. ಖಾಲಿ ಕೊಡ ಹಿಡಿದು, ಉರುಳು ಸೇವೆ ಮಾಡಿ, ಸಂಸದ ಅಣಕು ಶವಯಾತ್ರೆ ನಡೆಸಿ, ತಮಿಳು ಸಿನಿಮಾಗಳ ಪೋಸ್ಟರ್ ಹರಿದು ಪ್ರತಿಭಟನೆ ನಡೆಸಿದರು.

ಬೆಂಗಳೂರಿನಲ್ಲಿ ಸಿನಿಮಾ ನಟರು, ನಿರ್ಮಾಕರು ಹಾಗೂ ತಂತ್ರಜ್ಞರು ಕಾವೇರಿ ಗಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿ ದರು. ನಟ ಶಿವರಾಜ್‌ಕುಮಾರ್, ದರ್ಶನ್, ದುನಿಯಾ ವಿಜಯ್, ವಿಜಯರಾಘ ವೇಂದ್ರ, ಮುರುಳಿ, ಉಮಾಶ್ರೀ,  ಮಾಲಾಶ್ರೀ,  ಪೂಜಾಗಾಂ, ಭಾವನಾ, ಶ್ರುತಿ, ಪ್ರಮೀಳಾ ಜೋಶಾಯ್, ಸುಂದರ್‌ರಾಜ್, ಸಾಯಿಪ್ರಕಾಶ್, ವಸಿಷ್ಠಸಿಂಹ ಹಾಗೂ ಇತರರು ಪಾಲ್ಗೊಂಡು ಕನ್ನಡ ನಾಡು, ನುಡಿ, ನೆಲ ಹಾಗೂ ಜಲಕ್ಕೆ ತಮ್ಮ ಬೆಂಬಲ ಘೋಷಿಸಿದರು.

ಈ ಲಿಂಕ್ ಅನ್ನು ಕ್ಲಿಕ್ ಮಾಡಿ  http://www.krantideepa.com/

ಬೆಂಗಳೂರಿನ ಪುರಭವನ ಎದುರು ಪ್ರತಿಭಟನೆ ನಡೆಸಲು ಮುಂದಾದ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದರು. ಈ ಸಂದರ್ಭದಲ್ಲಿ ಬಿಎಂಟಿಸಿ ಬಸ್ ಗಾಜು ಒಡೆಯಲಾಗಿದೆ. ಈ ಘಟನೆ ಹೊರತುಪಡಿಸಿದರೆ ಬಂದ್ ಬಹುತೇಕ ಶಾಂತಿಯುತವಾಗಿತ್ತು. 

ನಗರದ ಬಹುತೇಕ ಅಂಗಡಿಗಳು, ಹೊಟೇಲ್‌ಗಳು, ಮಾಲ್‌ಗಳು ಬಾಗಿಲು ಹಾಕಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದವು. ಆಟೋ ಹಾಗೂ ಟ್ಯಾಕ್ಸಿಗಳು ಬೀದಿಗಿಳಿಯ ಲಿಲ್ಲ. ಇದರಿಂದಾಗಿ ಪ್ರಯಾಣಿಕರು ಪರದಾ ಡಿದರು. ಮೆಟ್ರೊ ಸಂಚಾರ ಎಂದಿನಂತೆಯೇ ಇತ್ತು. ಬಿಎಂಟಿಸಿ ಸಂಚಾರ ಇತ್ತಾದರೂ ಎರಡು ಸಾವಿರಕ್ಕೂ ಹೆಚ್ಚು ಟ್ರಿಪ್‌ಗಳು ನಡೆಯಲಿಲ್ಲ. 

ಹೋರಾಟಗಾರರ ಆಕ್ರೋಶ ಮುಗಿಲು ಮುಟ್ಟಿತ್ತು. ಹೋರಾಟಗಾರರೊಬ್ಬರು ಮೈಮೇಲೆ ಪೆಟ್ರೋಲ್ ಸುರಿದುಕೊಳ್ಳಲು ಯತ್ನಿಸಿದರು. ಮತ್ತೊಂದೆಡೆ ಟೈಯರ್‌ಗೆ ಬೆಂಕಿ ಹಚ್ಚುವ ಪ್ರಯತ್ನವೂ ನಡೆಯಿತು. ಆದರೆ ಪೊಲೀಸರು ಅವರನ್ನು ತಡೆದರು. ಕುತ್ತಿಗೆಗೆ ಟವಲ್ ಬಿಗಿದುಕೊಂಡ ಪರಿಣಾಮ ವ್ಯಕ್ತಿಯೊಬ್ಬರು ಅಸ್ವಸ್ತಗೊಂಡರು.