ನಾಳೆ ಮಲೆನಾಡು ಶೈರ್ ರೆಸಾರ್ಟ್ ಲೋಕಾರ್ಪಣೆ

ಸುದ್ದಿಗೋಷ್ಟಿಯಲ್ಲಿ ಸಂಸ್ಥೆಯ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ|| ಸ್ವರೂಪ್

ನಾಳೆ  ಮಲೆನಾಡು ಶೈರ್ ರೆಸಾರ್ಟ್ ಲೋಕಾರ್ಪಣೆ

ಶಿವಮೊಗ್ಗ,ಅ.17: ನಗರದ ವಿಮಾನ ನಿಲ್ದಾಣದ ಬಳಿ ಅತ್ಯಾಧುನಿಕ ಸೌಲಭ್ಯವುಳ್ಳ ಮಲೆನಾಡು ಶೈರ್ ಇಕೋ ರೆಸಾರ್ಟ್ ನಿರ್ಮಾಣಗೊಂಡಿದ್ದು, ಬುಧವಾರ ಲೋಕಾರ್ಪಣೆಗೊಳ್ಳಲಿದೆ.

ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಸಂಪೂರ್ಣ ಮಾಹಿತಿ ನೀಡಿದ ಮಲೆನಾಡು ಶೈರ್‌ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ||  ಸ್ವರೂಪ್ ಮಲ್ಲೇಶ್ 10 ಎಕರೆ ವಿಸ್ತೀರ್ಣದಲ್ಲಿ ಈ ರೆಸಾರ್ಟ್ ನಿಮಾರ್ಣಗೊಂಡಿದೆ. ಈ ಭಾಗದಲ್ಲಿ ಸಾರ್ವಜ ನಿಕರಿಗೆ ಉಪಯೋಗ ವಾಗುವಂತಹ ಹಾಗೂ ಪ್ರವಾಸಿಗರಿಗೆ ಉತ್ತಮ ಸೌಲಭ್ಯವನ್ನು ದೊರಕಿಸಿ ಕೊಡುವ ಸಲುವಾಗಿ ನಾಲ್ಕು ವರ್ಷದ ಹಿಂದೆ ಇದರ ಬಗ್ಗೆ ಕನಸು ಗರಿಗೆದರಿತ್ತು. ಅದು ಇಂದು ಸಾಕಾರಗೊಂಡಿದೆ ಎಂದು ತಿಳಿಸಿದರು.

ರೆಸಾರ್ಟ್‌ನಲ್ಲಿ 20 ಸೂಟ್ ಕಾಟೇಜ್, 42 ಡಿಲಕ್ಸ್ ಕೊಠಡಿಗಳು, 66 ಕೊಠಡಿಗಳು ನಿರ್ಮಾಣಗೊಂಡಿದ್ದು, ಪ್ರತಿ ಅಂತಸ್ತಿನಲ್ಲೂ ಪ್ರತ್ಯೇಕವಾದ 3 ಈಜು ಕೊಳಗಳಿವೆ. 250 ಆಸನ ವ್ಯವಸ್ಥೆಯುಳ್ಳ ಬ್ಯಾಂಕ್ವೆಟ್ ಹಾಲ್ , 14  ಆಸನದ ಬೋರ್ಡ್ ರೂಂ, ರೆಸ್ಟೋರೆಂಟ್, ಇದರ ಸುತ್ತಲೂ ಹುಲ್ಲು ಹಾಸಿನ ಲಾನ್, ಕ್ಲಬ್ ಇನ್ನೂ ಮುಂತಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು. 

ಈ ಲಿಂಕ್ ಅನ್ನು ಕ್ಲಿಕ್ ಮಾಡಿ  http://www.krantideepa.com/

 ಕುಟುಂಬದ ಸದಸ್ಯರು ನಮ್ಮ ರೆಸಾರ್ಟ್‌ನಲ್ಲಿ ಬಿಡುವಿನ ದಿನಗಳನ್ನು ಅತ್ಯಂತ ಸಂತೋಷದಿಂದ ಕಳೆಯುವ ಸಲುವಾಗಿ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಮಕ್ಕಳಿಗಾಗಿ ಔಟ್‌ಡೋರ್ ಗೇಮ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದ ಅವರು, ಈ ಭಾಗದಲ್ಲಿ ಈ ರೀತಿಯ ರೆಸಾರ್ಟ್ ಮೊದಲನೇಯದಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಮಲೆನಾಡು ಶೈರ್‌ಸಂಸ್ಥೆಯ ಛೇರ್‌ಮನ್  ಡಾ|| ಶಶಿಕಲಾ ಮಲ್ಲೇಶ್, ಯೋಜನಾ ಮುಖ್ಯಸ್ಥ ಕರಿಬಸವರಾಜ್ ಬೆನ್ನೂರು, ಸಂಸ್ಥೆಯ ನಿರ್ದೇಶಕರಾದ ಡಾ|| ಶ್ರೇಯಾ ಮಲ್ಲೇಶ್, ಜನರಲ್ ಮ್ಯಾನೇಜರ್ ರಾಜೇಶ್ ರಾವತ್, ರಾಮಚಂದ್ರರೆಡ್ಡಿ, ಮುಂತಾದವರು ಉಪಸ್ಥಿತರಿದ್ದರು.