ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ

ಶಿವಮೊಗ್ಗ,ಸೆ.26 : ಭದ್ರಾವತಿಯ ಪ್ರಮುಖ ಗಣಪತಿಯಾದ ಹಿಂದೂ ಮಹಾ ಸಭಾ ಗಣ ಪತಿಯ ಅದ್ದೂರಿ ರಾಜಬೀದಿ ಉತ್ಸವ ಮಂಗಳವಾರ ನಡೆಯಿತು.
ಬೆಳಗ್ಗೆ ವಾದ್ಯಮೇಳದೊಂದಿಗೆ ಜೈಕಾರದ ಸಮೇತ ವಿನಾಯಕ ಮೂರ್ತಿಯನ್ನು ಪ್ರತಿಷ್ಟಾಪಿ ಸಿದ ಸ್ಥಳದಿಂದ ಅಲಂಕೃತವಾಹ ನದಲ್ಲಿ ತಂದು ಕೂರಿಸಿದ ನಂತರ ರಾಜಬೀದಿ ಉತ್ಸವವು ಆರಂಭವಾಯಿತು. ಇದಕ್ಕೂ ಮೊದಲು ಸಚಿವ ಮಧು ಬಂಗಾರಪ್ಪ, ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ , ಆರ್. ಎಂ ಮಂಜು ನಾಥ್ ಗೌಡ ಸೇರಿದಂತೆ ವಿವಿಧ ಮುಖಂಡರು ವಿನಾಯಕನಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಸಂಘಟನೆಯ ವತಿಯಿಂದ ಹಾರ ಹಾಕಿ ಗೌರವ ಸಲ್ಲಿಸಲಾಯಿತು.
ಮಂಟಪದಿಂದ ಹೊರಟ ಮೆರವಣಿಗೆ ಶಿವಾಜಿ ವೃತ್ತದ ಮೂಲಕ ರಂಗಪ್ಪ ವೃತ್ತದ ಮಾರ್ಗವಾಗಿ ಸಾಗಿತು. ವಿನಾಯಕನ ಮೆರವಣಿಗೆ ವೇಳೆ ಭಕ್ತರು ಹೂವು-ಹಣ್ಣು ಹಾಗೂ ಹಣದ ಹಾರ ಸಲ್ಲಿಸಿ ಪೂಜೆ ಸಲ್ಲಿಸಿದರು. ರಾಜಬೀದಿ ಉತ್ಸವದಲ್ಲಿ ನೆರೆದ ಭಕ್ತಾದಿಗಳಿಗಾಗಿ ವಿವಿಧೆಡೆ ತಂಪು ಪಾನೀಯ, ಉಪಹಾರ ವಿತರಣೆ ಹಾಗೂ ಅನ್ನಸಂತರ್ಪಣೆ ಮಾಡಲಾಗಿತ್ತು.
ಮೆರವಣಿಗೆಯಲ್ಲಿ ಶಾಸಕ ಬಿ.ಕೆ.ಸಂಗ ಮೇಶ್ವರ್, ನಗರಸಭೆ ಅಧ್ಯಕ್ಷೆ ಶೃತಿ ವಸಂತ ಕುಮಾರ್, ಸದಸ್ಯರಾದ ಬಿ.ಕೆ.ಮೋಹನ್, ಮಣಿ, ಕದಿರೇಶ್, ಆರ್.ಕರುಣಾಮೂರ್ತಿ, ಎಸ್. ಕುಮಾರ್, ಮಂಗೋಟೆ ರುದ್ರೇಶ್, ಮಂಜುನಾಥ್ ಪ್ರಮುಖರು ಪಾಲ್ಗೊಂಡಿದ್ದರು.
ಪೊಲೀಸ್ ಇಲಾಖೆಯಿಂದ ಬಿಗಿಬಂದೋ ಬಸ್ತ್ ಆಯೋಜಿಸಲಾಗಿದ್ದು, ಹೆಚ್ಚುವರಿ ರಕ್ಷಣಾಕಾರಿ-1, ಡಿ.ವೈ.ಎಸ್.ಪಿ-10, ವೃತ್ತ ನಿರೀಕ್ಷಕರು-20, ಪೊಲೀಸ್ ನಿರೀಕ್ಷರು -50, ಸಹಾಯಕ ಪೊಲೀಸ್ ನಿರೀಕ್ಷಕರು-85, ಆರಕ್ಷಕ ಸಿಬ್ಬಂದಿಗಳು-500, ಗೃಹ ರಕ್ಷಕ ದಳ-250, ಕ್ಷಿಪ್ರ ಕಾರ್ಯಪಡೆ ತುಕಡಿ-1, ಸಶಸ್ತ್ರ ಮೀಸಲು ಪಡೆ ತುಕಡಿ-6 ಮತ್ತು ಸಂಚಾರಿ ಪೊಲೀಸ್ ದಳ-1 ಬಂದೋಬಸ್ತ್ ನಲ್ಲಿದ್ದರು.