ಶಿಮುಲ್‌ಗೆ ರೂ. 7.22 ಕೋಟಿಗಳ ನಿವ್ವಳ ಲಾಭ

ಶಿವಮೊಗ್ಗ,ಸೆ.25 : 2022-23 ನೇ ಸಾಲಿನಲ್ಲಿ ಶಿವಮೊಗ್ಗ ಹಾಲು ಒಕ್ಕೂಟವು ರೂ. 7.22 ಕೋಟಿಗಳ ನಿವ್ವಳ ಲಾಭ ಗಳಿಸಿದೆ. ನಿಯಮಾನುಸಾರ ಲಾಭವನ್ನು ಸದಸ್ಯ ಸಂಘಗಳಿಗೆ ಬೋನಸ್ ಮತ್ತು ಡಿವಿಡೆಂಡ್ ರೂಪದಲ್ಲಿ ವಿಲೇವಾರಿ ಮಾಡಲಾಗುವುದೆಂದು ಒಕ್ಕೂಟದ ಅಧ್ಯಕ್ಷ ಎನ್.ಹೆಚ್.ಶ್ರೀಪಾದರಾವ್ ತಿಳಿಸಿದ್ದಾರೆ.
ಪೆಸಿಟ್ ಕಾಲೇಜಿನ ಪ್ರೇರಣಾ ಸಭಾಂಗಣ ದಲ್ಲಿ ನಡೆದ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂ ಟದ (ಶಿಮುಲ್) ಸರ್ವಸದಸ್ಯರ ಸಭೆಯಲ್ಲಿ ಅವರು ಈ ವಿಷಯ ಪ್ರಕಟಿಸಿದರು.
2022-23 ನೇ ಸಾಲಿನ ಆಡಳಿತ ವರದಿ ಯನ್ನು ಹಾಗೂ ಒಕ್ಕೂಟವು 2023-24 ನೇ ಸಾಲಿಗೆ ಹಮ್ಮಿಕೊಂಡಿರುವ ಕಾರ್ಯ ಚಟುವಟಿಕೆ, ಯೋಜನೆಯ ವಿವರಗಳನ್ನು ವ್ಯವಸ್ಥಾಪಕ ನಿರ್ದೇಶಕ ಎಸ್.ಜಿ.ಶೇಖರ್ ಮಂಡಿಸಿದರು. 2023-24 ನೇ ಸಾಲಿನಲ್ಲಿ ಒಕ್ಕೂಟದಿಂದ ಸದಸ್ಯ ಸಂಘಗಳಿಗೆ, ಉತ್ಪಾದಕರಿಗೆ ಹೈನುಗಾರಿಕೆಯನ್ನು ಪ್ರೋತ್ಸಾ ಹಿಸುವ ಉದ್ದೇಶದಿಂದ ತಾಂತ್ರಿಕ ಪರಿಕರ ಗಳಿಗೆ, ತರಬೇತಿಗಳಿಗೆ ರೂ. 3297.66 ಲಕ್ಷ ಅನುದಾನವನ್ನು ನೀಡಲು ಯೋಜಿಸಲಾ ಗಿದ್ದು, ಪ್ರತಿ ಕೆ.ಜಿ ಶೇಖರಿಸುವ ಹಾಲಿಗೆ ರೂ. 1.14 ಅನುದಾನ ನೀಡಲಾಗುತ್ತಿದೆ ಎಂದು ತಿಳಿಸಿದರು.
ವಾರ್ಷಿಕ ಸಾಮಾನ್ಯ ಸಭೆಯು 2022-23 ನೇ ಸಾಲಿನ ಹಣಕಾಸಿನ ತಃಖ್ತೆಗಳನ್ನು ಮತ್ತು ಆಕ್ಷೇಪಣೆಗಳಿಗೆ ನೀಡಲಾದ ಸಮಜಾ ಯಿಷಿಗಳನ್ನು, ಮಂಜೂರಾದ ಆಯ- ವ್ಯಯಕ್ಕಿಂತ ಹೆಚ್ಚಾದ ಖರ್ಚಿನ ಮೊಬಲ ಗನ್ನು 2022-23 ನೇ ಸಾಲಿನ ಮುಂಗಡ ಆಯ-ವ್ಯಯವನ್ನು ಅನುಮೋದಿಸಿತು. 2022-23 ನೇ ಸಾಲಿನ ವೆಚ್ಚಗಳು, ನಿಗಳ ಬಳಕೆ ಹಾಗೂ ವಿವಿಧ ನಿಗಳನ್ನು ಸಹಕಾರ/ವಾಣಿಜ್ಯ ಬ್ಯಾಂಕ್‌ಗಳಲ್ಲಿ ತೊಡಗಿಸಿರುವು ದನ್ನು ಸಭೆಯು ಅನುಮೋದಿಸಿತು.
ಈ ಲಿಂಕ್ ಅನ್ನು ಕ್ಲಿಕ್ ಮಾಡಿ http://www.krantideepa.com/
ಒಕ್ಕೂಟದಲ್ಲಿ ಸೆ. 23 ರಂದು 7,00,802 ಕೆ.ಜಿ ಹಾಲಿನ ಶೇಖರಣೆಯಾಗಿದ್ದು, ಇಲ್ಲಿಯ ವರೆಗೆ ಒಕ್ಕೂಟವು ಶೇಖರಣೆ ಮಾಡಿರುವ ಅತೀ ಹೆಚ್ಚಿನ ದಾಖಲೆಯ ಪ್ರಮಾಣದ ಹಾಲು ಶೇಖರಣೆಯಾಗಿದೆ. ಶಿಮುಲ್‌ನ ಇತಿಹಾಸದಲ್ಲಿ ಇದೊಂದು ಮೈಲುಗಲ್ಲಾ ಗಿದೆ. ಎಂದು ಎಸ್.ಜಿ.ಶೇಖರ್ ಹೇಳಿದರು.
ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಟಿ.ಶಿವಶಂಕರಪ್ಪ ಸ್ವಾಗತಿಸಿದರು.
ಒಕ್ಕೂಟದ ಹಿರಿಯ ನಿರ್ದೇಶಕ ಬಿ.ಜಿ.ಬಸವರಾಜಪ್ಪ ವಂದಿಸಿದರು. ವ್ಯವಸ್ಥಾಪಕ (ಆಡಳಿತ) ಸುರೇಶ್ ಹುಳ್ಳಿ ನಿರೂಪಿಸಿದರು.