ರಾಜ್ಯದಲ್ಲಿ ಡಿಕೆಶಿ ಬ್ಯಾಂಕ್: ವಿಜಯೇಂದ್ರ

ರಾಜ್ಯದಲ್ಲಿ ಡಿಕೆಶಿ ಬ್ಯಾಂಕ್: ವಿಜಯೇಂದ್ರ

ಬೆಂಗಳೂರು,ಅ.16 : ಜನರನ್ನು ಲೂಟಿ ಮಾಡಲೆಂದು ಕರ್ನಾಟಕದಲ್ಲಿ ಕಾಂಗ್ರೆಸ್ ತನ್ನ ಎಸ್ಬಿಐ ಶಾಖೆಯನ್ನು ಸ್ಥಾಪಿಸಿದೆ ಎಂದು ಬಿಜೆಪಿ ಶಾಸಕ ಬಿವೈ ವಿಜಯೇಂದ್ರ ಸೋಮವಾರ ಕಿಡಿಕಾರಿದ್ದಾರೆ.

ದೇಶಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಇದೆ. ಕಾಂಗ್ರೆಸ್‌ಗೆ ಎಸ್‌ಬಿಐ ಆಗಿದೆ. ಎಸ್‌ಬಿಐ ಎಂದರೆ ಶಿವಕುಮಾರ್ ಬ್ಯಾಂಕ್ ಆಫ್ ಇಂಡಿಯಾ ಎಂದು ಅವರು ಹೇಳಿದರು.

ಕಾಂಗ್ರೆಸ್ ಬಿಬಿಎಂಪಿ ಮತ್ತು ಇತರೆ ಇಲಾಖೆಗಳಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮೂಲಕ ಹಣ ವಸೂಲಿ ಮಾಡಿಸಿ, ಬೇರೆ ರಾಜ್ಯಗಳಿಗೆ ಕಳುಹಿಸುತ್ತಿರುವುದು ಬೆಳಕಿಗೆ ಬಂದಿದೆ. ಕಾಂಗ್ರೆಸ್ ಸರ್ಕಾರದ ಸಚಿವರುಗಳು ಗುತ್ತಿಗೆದಾರರಿಂದ ಹಣ ಸಂಗ್ರಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.