ಮಲೆನಾಡು ಕರ್ನಾಟಕ ರೂಪುರೇಷೆ, ಹೋರಾಟ ಕುರಿತು ಬೆಂಗಳೂರಿನಲ್ಲಿ ಸಮಾಲೋಚನಾ ಸಭೆ

ಮಲೆನಾಡು ಕರ್ನಾಟಕ ರೂಪುರೇಷೆ, ಹೋರಾಟ ಕುರಿತು ಬೆಂಗಳೂರಿನಲ್ಲಿ ಸಮಾಲೋಚನಾ ಸಭೆ

ಶಿವಮೊಗ್ಗ,ಅ.17 : ಮಲೆನಾಡು ಹಾಗೂ ಕರಾವಳಿ ಭಾಗದ ಜ್ವಲಂತ  ಸಮಸ್ಯೆಗಳ  ಬಗ್ಗೆ ಚರ್ಚಿಸಲು ಮತ್ತು ಅದಕ್ಕೆ ಪರಿಹಾರ ಕಂಡು ಹಿಡಿಯಲು ಮಾಡಬೇಕಾದ ಯೋಜನೆಗಳ ಬಗ್ಗೆ ಚರ್ಚಿಸಲು ಅ. 31 ರಂದು ಬೆಂಗಳೂರಿ ನಲ್ಲಿ ಮಲೆನಾಡು ಕರಾವಳಿ  ಜನಪರ ಒಕ್ಕೂ ಟದ ಸಮಾಲೋಚನಾ ಸಭೆ ಕರೆಯಲಾಗಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರ್‌ಕುಮಾರ್ ಮುರೊಳ್ಳಿ  ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ಬೆಂಗಳೂರಿನ ವಿಜಯನಗರದ ಆದಿಚುಂಚ ನಗಿರಿ ಸಭಾಂಗಣದಲ್ಲಿ ಜನಪರ ಒಕ್ಕೂಟದ ಈ ಸಮಾಲೋಚನಾ ಸಭೆ ಆಯೋಜಿಸಲಾಗಿದೆ. ಸಂಘ ಟನೆಯ ಹೋರಾಟದ ದಿಕ್ಕು ದೆಸೆಯ ಚರ್ಚೆ, ಧ್ವಜ ಮತ್ತು ಲೋಗೋ ಲೋಕಾರ್ಪಣೆ ನಡೆಯಲಿದೆ ಎಂದರು.

ಮಲೆನಾಡು ಕರಾವಳಿ ಜನಪರ ಒಕ್ಕೂ ಟದ ವತಿಯಿಂದ ನಮ್ಮನ್ನಾಳುವ ಸರ್ಕಾರಗಳನ್ನು ಎಚ್ಚರಿಸುವ ಸಂವಿಧಾನ ಬದ್ಧ ಹೋರಾ ಟವು ಸರ್ವ ಧರ್ಮ ಮನೋ ಭಾವದ ಚಿಂತನೆಯ ಅಡಿಗಲ್ಲು ಆಗಲಿದೆ.

ಉತ್ತರಕನ್ನಡ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ ಹಾಗೂ ಚಿಕ್ಕ ಮಗಳೂರು ಜಿಲ್ಲೆಗಳ ಸಮ ಸ್ಯೆಗಳು ಏಕರೂಪದಲ್ಲಿವೆ. ಮುಖ್ಯವಾಗಿ ಈ ಎಲ್ಲಾ ಜಿಲ್ಲೆಗಳಲ್ಲೂ ಭೂ ಹಕ್ಕು ಸಮಸ್ಯೆ ನಿರಂತರವಾಗಿದೆ. ಕಲ್ಯಾಣ ಕರ್ನಾಟದ ಸಮಸ್ಯೆಗಳ ಬಗ್ಗೆ  ಸರ್ಕಾರಗಳು ಎಚ್ಚೆತ್ತುಕೊಂಡಂತೆ ನಮ್ಮ ಮಲೆನಾಡು, ಕರಾವಳಿ ಭಾಗದ ಸಮಸ್ಯೆಗಳನ್ನು ಬಗೆಹರಿಸಿ ಸ್ಪಂದಿಸುವಂತೆ ಮಾಡುವುದು ಈ ಹೋರಾಟದ ಗುರಿ ಎಂದರು.

ಈ ಲಿಂಕ್ ಅನ್ನು ಕ್ಲಿಕ್ ಮಾಡಿ  http://www.krantideepa.com/

ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶಗಳಿದ್ದರೂ ಅವು ಯಾವುವೂ ಜಾರಿಯಾಗುತ್ತಿಲ್ಲ.  ಪರಿಸರ ಕೇಂದ್ರಿತ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಮಲೆನಾಡಿನಲ್ಲಿ ಹೆಬ್ಬಾಗಿಲಿನಂತೆ ತೆರೆದಿದ್ದರೂ ಅದು ಬಳಕೆಯಾಗುತ್ತಿಲ್ಲ. ಒಬ್ಬ ಆಟೋ ಚಾಲಕನಿಂದ  ಹಿಡಿದು ರೈತರಾದಿಯಾಗಿ ಎಲ್ಲರಿಗೂ ಹಲವು ಸಮಸ್ಯೆಗಳಿವೆ.  ತಾಲೂಕು ಕೇಂದ್ರಗಳಲ್ಲಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆ, ಮಲೆನಾಡಿನ ತರಕಾರಿ ಬೆಳೆಗಳಿಗೆ ಜಾಗತಿಕ ಮನ್ನಣೆ, ಹೈಕೋರ್ಟ್ ಪೀಠ, ಮಲೆನಾಡಿನ ಪ್ರವಾಸೋದ್ಯಮ ಅಭಿವೃದ್ಧಿ, ಕೃಷಿ ಸಮಸ್ಯೆ, ಕಲ್ಯಾಣ ಕರ್ನಾಟಕದಂತೆ ಮಲೆನಾಡು ಕರ್ನಾಟಕ ರೂಪಿಸುವ ಬಗ್ಗೆ, ಮಲೆನಾಡಿನಲ್ಲಿ ವಿಶೇಷ ಕೃಷಿ ವಲಯ ಸೇರಿದಂತೆ ಹಲವು ವಿಚಾರಗಳ ಹಕ್ಕೊತ್ತಾಯ ನಮ್ಮ ಸಂಘ ಟನೆಯ ಹೋರಾಟವಾಗಲಿದೆ ಎಂದರು.

ಈ ಹೋರಾಟಕ್ಕೆ ಜನ ಕಲ್ಯಾಣವೇ ಮುಖ್ಯ ವಿಷಯವಾಗಿದ್ದು, ಜನಸಾಮಾನ್ಯರಾ ಗಲಿ, ಯಾವುದೇ ರಾಜಕೀಯ ಪಕ್ಷದವ ರಾಗಲಿ ಮುಕ್ತವಾಗಿ ಬರಬಹುದು, ಜಾತ್ಯತೀತ, ಧರ್ಮಾತೀತ ಮತ್ತು ಪಕ್ಷಾತೀತ ಹೋರಾಟ ಇದಾಗಿದೆ ಎಂದು ಹೇಳಿದರು.

ವಕೀಲ ಹಾಗೂ ಜನಪರ ಹೋರಾಟಗಾರ ಕೆ.ಪಿ. ಶ್ರೀಪಾಲ್, ಅನಿಲ್ ಹೊಸಕೊಪ್ಪ, ಫಾದರ್ ವೀರೇಶ್ ಮೊರಾಸ್, ನವೀನ್ ಕರುವಾನೆ, ಹಿಳ್ಳೋಡಿ ಕೃಷ್ಣಮೂರ್ತಿ, ಸುರೇಶ್ ಅರಸಾಳು, ಶ್ರೀಜಿತ್, ನಿವೃತ್ತ ಡಿಎಸ್ಪಿ ಪಿ.ಒ ಶಿವಕುಮಾರ್, ನಿವೃತ್ತ ಡಿಎಫ್ ಓ ರವಿಕುಮಾರ್ ಮತ್ತಿತರರಿದ್ದರು.