ಸಿನಿಮಾಗಳು ಗೆಲ್ಲಲು ಚಲನಚಿತ್ರಮಂದಿರ ಅವಶ್ಯ

ದಸರಾ ಚಲನಚಿತ್ರೋತ್ಸವ ಉದ್ಘಾಟಿಸಿದ ಚಿತ್ರ ನಿರ್ಮಾಪಕ, ನಿರ್ದೇಶಕ ಪನ್ನಗಾಭರಣ

ಸಿನಿಮಾಗಳು ಗೆಲ್ಲಲು ಚಲನಚಿತ್ರಮಂದಿರ ಅವಶ್ಯ

ಶಿವಮೊಗ್ಗ,ಅ.16 : ಸಿನಿಮಾಗಳು ಗೆಲ್ಲಬೇಕಾ ದರೆ ಅವು ಚಲನಚಿತ್ರಮಂದಿರಗಳಲ್ಲಿ ಓಡ ಬೇಕು. ಇದರಿಂದ ಹೆಚ್ಚು  ಪ್ರೇಕ್ಷಕರು ಸಾಮೂಹಿಕ ವಾಗಿ ಕುಳಿತು ಆನಂದಿಸಲು ಸಾಧ್ಯವಾಗುತ್ತದೆ ಎಂದು  ಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಪನ್ನಗಾಭರಣ ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿನ ಮಲ್ಲಿಕಾರ್ಜುನ  ಚಿತ್ರಮಂದಿರದಲ್ಲಿ ದಸರಾ ಚಲನಚಿತ್ರೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು,  ಸಿನಿಮಾ ಕ್ಷೇತ್ರ ಇತ್ತೀಚೆಗೆ ಬದಲಾಗುತ್ತಿದೆ.  ನಾನು ಮನೆಯಲ್ಲೇ ಕುಳಿತು ಸಿನಿಮಾ ನೋಡುತ್ತೇನೆ ಎನ್ನುವಂತಾಗಿದೆ. ಮೊದಲು ಸಾಮಾಜಿಕವಾಗಿದ್ದ  ಸಿನಿಮಾ ವೀಕ್ಷಣೆ ಈಗ ವ್ಯಕ್ತಿಗತವಾಗಿದೆ. ಮೊಬೈಲ್ ಇದ್ದರೆ ಒಬ್ಬೊಬ್ಬರು ಒಂದೊಂದು ಸಿನಿಮಾ ನೋಡ ಬಹುದಾಗಿದೆ. ಎಲ್ಲರೂ ಸೇರಿ ನೋಡುವ ಕಾಲ ದೂರಸರಿಯುತ್ತಿದೆ ಎಂದು ವಿಷಾದಿಸಿದರು.

  ಎಲ್ಲರೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ. ಇದರಿಂದ ಸಿನಿಮಾ ಕ್ಷೇತ್ರ ಉಳಿಯುತ್ತದೆ. ಚಿತ್ರ ನಿರ್ದೇಶಕನಿಂದ ಹಿಡಿದು ಕಲಾವಿದರು, ತಂತ್ರಜ್ಞರು ಎಲ್ಲರೂ ಬದುಕಲು ಸಾಧ್ಯವಾಗುತ್ತದೆ. ಮೊಬೈಲ್, ಡಿಜಿಟಲ್, ಯು ಟ್ಯೂಬ್, ಅಮೆಜಾನ್ ಪ್ರೈಮ್,  ಓಟಿಟಿಯಿಂದ ಹೊರಬರಬೇಕಿದೆ. ಇದರಿಂದ ಎಲ್ಲರನ್ನೂ ಉಳಿಸಿ ಎಂದು ಕರೆ ನೀಡಿದ ಅವರು, ಒಂದು ವಾರಗಳ ಕಾಲ ದಸರಾ ಚಲನಚಿತ್ರೋತ್ಸವ ಮತ್ತೆ ನಡೆಯುವಂತಾಗಲಿ ಎಂದರು.

ಈ ಲಿಂಕ್ ಅನ್ನು ಕ್ಲಿಕ್ ಮಾಡಿ  http://www.krantideepa.com/

ಬೆಂಗಳೂರು ದೂರದರ್ಶನ ಕಾರ್‍ಯಕ್ರಮ ನಿರೂಪಕಿ ಸಂಧ್ಯಾ ಭಟ್ ಮಾತನಾಡಿ, ಕನ್ನಡವನ್ನು ಮೊದಲು ಉಳಿಸಿ, ಬೆಳೆಸಬೇಕಿದೆ.  ಸ್ಪಷ್ಟವಾಗಿ ಮಾತನಾಡಬೇಕಿದೆ. ಇಂಗ್ಲೀಷ್  ಓದು  ಖಂಡಿತ ಬೇಕು. ಆದರೆ ಮನೆಯಲ್ಲಿ ಕನ್ನಡ ಮಾತನಾಡಿ ಉಳಿಸಬೇಕೆಂದ ಅವರು,  ಚಲನಚಿತ್ರಮಂದಿರಕ್ಕೆ ಹೋಗಿ ದುಬಾರಿ ಹಣ ತೆತ್ತು ಏಕೆ ನೋಡಬೇಕೆಂಬ ಮನೋಭಾವ ಬೆಳೆಯುತ್ತಿದೆ. ಮನೆಯಲ್ಲೇ ಎಲ್ಲರೂ ಒಂದೊಂ ದು ಮೊಬೈಲಿನಲ್ಲಿ ಒಂದೊಂದು ಸಿನಿಮಾ ನೋಡುವಂತಾಗಿದೆ. ಇದನ್ನು ಬಿಟ್ಟು ಕಲಾದವಿ ದರನ್ನು ಉಳಿಸಬೇಕಿದೆ. ಅವರು ಉಳಿದರೆ ಕಲೆ ಉಳಿಯುತ್ತದೆ. ಇಂತಹ ಒಂದು ಕೊಂಡಿಯನ್ನು ನಾವು ಕಾಪಾಡಬೇಕಿದೆ ಎಂದರು.

   ಭದ್ರಾವತಿಯವರಾದ ಧಾರಾವಾಹಿ ಮತ್ತು ಚಿತ್ರ ನಟಿ ರೂಪಿಕಾ ಮಾತನಾಡಿ, ಪ್ರೀತಿ ಮತ್ತು ಅಕ್ಕರೆಯಲ್ಲಿ ಶಿವಮೊಗ್ಗ ಎತ್ತಿದ ಕೈ. ಕಲೆ, ಸಿನಿಮಾ, ಕ್ರೀಡೆ, ಸಾಹಿತ್ಯ ಎಲ್ಲದರಲ್ಲೂ ಸದಾ ಮುಂದಿದೆ. ಮಲೆನಾಡಿನಲ್ಲಿ ಚಿತ್ರ ನಿರ್ಮಿಸು ವುದು ಒಂದು ಸಂತಸದ ಸಂಗತಿ ಎಂದರು.  

ಅಧ್ಯಕ್ಷತೆಯನ್ನು ಚಲನಚಿತ್ರ ದಸರಾ ಸಮಿತಿ ಅಧ್ಯಕ್ಷೆ ಸುವರ್ಣಾ ಶಂಕರ್ ವಹಿಸಿದ್ದರು. ಶಾಸಕ ಚನ್ನಬಸಪ್ಪ, ಎಚ್.ಸಿ.ಯೋಗೇಶ್, ಸುರೇಖಾ ಮುರುಳೀಧರ್ ಮೊದಲಾದವರು ಹಾಜರಿದ್ದು ಮಾತನಾಡಿದರು. ನಂತರ ಪನ್ನಗಾಭರಣ ನಿರ್ದೇಶನದ ತತ್ಸಮ ತದ್ಭವ ಸಿನಿಮಾ ಪ್ರದರ್ಶನ ನಡೆಯಿತು.  

ಬ್ಯಾಂಕಿನವರು ಕಲಾವಿದರು ಎಂದರೆ ಸಾಲ ಕೊಡುತ್ತಿಲ್ಲ, ಅವರ ಕರೆಯನ್ನೇ ಕಟ್ ಮಾಡುತ್ತಾರೆ. ಅಂದರೆ ಕಲಾವಿದರಿಗೆ ಭದ್ರತೆ ಇಲ್ಲ. ಸರಕಾರ ಇದರ ಬಗ್ಗೆ ಗಮನಹರಿಸಬೇಕು. ಕಲಾವಿದರಿಗೆ sದ್ರತೆ ಕೊಡಲು ಯೋಜನೆ ರೂಪಿಸಬೇಕು. ಕಲಾವಿದರಿಗೆ ಆದಾಯ ತರುವಂತಹ ಉದ್ಯಮ ಆರಂಭಿಸಲು ನೆರವಾಗಬೇಕು.  

-ಚಿತ್ರ ನಟಿ ರೂಪಿಕಾ