ಕುರಿಸಾಕಾಣಿಕೆ ಲಾಭದಾಯಕ: ಶಾಸಕಿ ಶಾರದಾ ಪೂರ್ಯಾನಾಯ್ಕ್

ಶಿವಮೊಗ್ಗ,ಸೆ25 : ಕೃಷಿಕರು ಒಂದೇ ಬೆಳೆಯನ್ನು ನಂಬಿಕೊಂಡು ಕೂರದೇ ಉಪಕಸುಬುಗಳನ್ನು ಅಳವಡಿಸಿಕೊಳ್ಳಬೇಕು. ಕುರಿ ಸಾಕಣೆ ಒಂದು ಪ್ರಮುಖ ಉಪಕಸುಬಾಗಿದ್ದು, ವೈಜ್ಞಾನಿಕವಾಗಿ ಮಾಡಿದರೆ ಲಾಭದಾಯಕ ಉದ್ಯಮವೂ ಹೌದು ಎಂದು ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾಪೂರ್ಯಾನಾಯ್ಕ್ ಹೇಳಿದರು.
ಪತ್ರಿಕಾ ಭವನದಲ್ಲಿ ಶನಿವಾರ ಸಹ್ಯಾದ್ರಿ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಕುರಿ ಸಾಕಣೆ ಇಂದು ಒಂದು ಜಾತಿಗೆ ಸೀಮಿತವಾಗಿಲ್ಲ. ಸಣ್ಣಪುಟ್ಟ ರೈತರೂ ಕಸುಬನ್ನು ಅವಲಂಭಿಸಿದ್ದಾರೆ. ಮಲೆನಾಡಿನಲ್ಲಿ ಮೇವು ಚೆನ್ನಾಗಿ ಸಿಗುವುದರಿಂದ ಕುರಿ ಸಾಕುವುದನ್ನು ರೈತರು ರೂಡಿಸಿಕೊಳ್ಳಬೇಕು. ಕುರಿ ಸಾಕಣೆಯಿಂದ ಲಕ್ಷಾಂತರ ಹಣ ಗಳಿಸಿದವರನ್ನು ಕೇಳಿದ್ದೇವೆ. ಶ್ರಮ ಹಾಕಿ ಕೆಲಸ ಮಾಡಿದರೆ ಕುರಿ ಸಾಕಣೆ, ಹೈನುಗಾರಿಕೆಯಂತಹ ವೃತ್ತಿಯಲ್ಲಿ ತೊಡಗಿಸಿಕೊಳ್ಳಬಹುದು ಎಂದರು ಹೇಳಿದರು.
ಈ ಲಿಂಕ್ ಅನ್ನು ಕ್ಲಿಕ್ ಮಾಡಿ http://www.krantideepa.com/
ಕುರಿಗಾರರೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಳೆ, ಬಿಸಿಲು, ಮಿಂಚು ಸಿಡಿಲುಗಳಂತ ಪ್ರಾಕೃತಿಕ ವಿಪತ್ತುಗಳಿವೆ. ಕುರಿಗಾರರು ಹಾಗೂ ಕುರಿಗಳ ಅಕಾಲಿಕ ಮತ್ತು ಆಕಸ್ಮಿಕ ಸಾವಿನಂತಹ ಪ್ರಕರಣಗಳಲ್ಲಿ ಸರಕಾರದಿಂದ ಸಿಗಬಹದಾದ ಸೌಲಭ್ಯಗಳನ್ನು ಕೊಡಿಸಲು ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಶಾರದಾಪೂರ್ಯನಾಯ್ಕ್ ಹೇಳಿದರು. ಕಂಬಳಿ ಹೊದಿಸಿ ಅವರನ್ನು ಸನ್ಮಾನಿಸಲಾಯಿತು. . ಸಂಘದ ಅಧ್ಯಕ್ಷೆ ಚಿತ್ರಾ ಆರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಸ್.ಡಿ.ಮಂಜುನಾಥ್, ನಿರ್ದೇಶಕರುಗಳಾದ ಪಿ.ಬಾಲಪ್ಪ, ವಿಕ್ಟರ್ ಅರೋಜಾ, ರಾಮಣ್ಣ, ನಂಜುಂಡಪ್ಪ ಹೆಚ್.ಎಸ್, ರಮೇಶ್ ನಾಯ್ಕ್, ಶಾಂತಬಾಯಿ, ಎಸ್.ಎಸ್ ಶ್ರೀನಿವಾಸ್, ಹುಸೇನ್ ಸಾಬ್, ಶ್ರೀಧರ್, ನಾಗರಾಜ್ ಮತ್ತಿತರರು ಹಾಜರಿದ್ದರು. ಶ್ರೀಮತಿ ಉಷಾ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಹೆಚ್.ಎಸ್.ವಿಶ್ವನಾಥ್ ಸ್ವಾಗತಿಸಿದರು, ಪಿ.ಬಾಲಪ್ಪ ವಂದಿಸಿದರು.