ನೋಟು ಬದಲಿಸಲು ಅಕ್ಟೋಬರ್ 7 ರವರೆಗೆ ಅವಕಾಶ

ನೋಟು ಬದಲಿಸಲು  ಅಕ್ಟೋಬರ್  7 ರವರೆಗೆ ಅವಕಾಶ

ಮುಂಬೈ,ಸೆ.30 : ರೂ.2 ಸಾವಿರ ಮುಖಬೆಲೆಯ ನೋಟುಗಳನ್ನು ಬದಲಾಯಿಸಿಕೊಳ್ಳಲು ಅಥವಾ ಠೇವಣಿ ಇಡಲು ನೀಡಿದ್ದ ಗಡುವನ್ನು ಅಕ್ಟೋಬರ್ 7ರವರೆಗೆ ವಿಸ್ತರಿಸಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಈ ಹಿಂದಿನ ಆದೇಶದಲ್ಲಿ ಸೆಪ್ಟೆಂಬರ್ 30 (ಶನಿವಾರ) ಕಡೆಯ ದಿನ ಎಂದು ಹೇಳಿತ್ತು. 

ಈ ಲಿಂಕ್ ಅನ್ನು ಕ್ಲಿಕ್ ಮಾಡಿ  http://www.krantideepa.com/

ಮೇ 19 ರಿಂದ ಈವರೆಗೆ ರೂ.2 ಸಾವಿರ ಮುಖ ಬೆಲೆಯ ಒಟ್ಟು ರೂ.3.42 ಲಕ್ಷ ಕೋಟಿ ಮೌಲ್ಯದ ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿವೆ ಎಂದು ಆರ್ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಅ. 7 ರ ನಂತರವು ಈ ನೋಟುಗಳ ಕಾನೂನು ಮಾನ್ಯತೆಯು ಮುಂದುವರಿಯಲಿದೆ. ಆದರೆ, ಬ್ಯಾಂಕ್ ಶಾಖೆಗಳಲ್ಲಿ ಬೇರೆ ಮುಖಬೆಲೆಯ ನೋಟು ಗಳೊಂದಿಗೆ ಬದಲಿಸಿಕೊಳ್ಳಲು ಅಥವಾ ಠೇವಣಿ ಇಡಲು ಆಗುವುದಿಲ್ಲ. ಆರ್‌ಬಿಐ ಕಚೇರಿಗಳಲ್ಲಿ ಮಾತ್ರವೇ ಬದಲಾಯಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿದೆ.