ಅ. 2,3 : ಬೆಳಗಾವಿಯಲ್ಲಿ ಶೆಫರ್ಡ್ ಇಂಡಿಯಾ ಸಮಾವೇಶ

ಅ. 2,3 : ಬೆಳಗಾವಿಯಲ್ಲಿ ಶೆಫರ್ಡ್ ಇಂಡಿಯಾ  ಸಮಾವೇಶ

ಶಿವಮೊಗ್ಗ: ಕುರುಬ ಸಮಾಜವನ್ನು ಸಂಘಟಿಸುವ ಉದ್ದೇಶದಿಂದ ಬೆಳಗಾವಿಯಲ್ಲಿ ಅ.2 ಮತ್ತು 3 ರಂದು ಶೆಫರ್ಡ್ ಇಂಡಿಯಾ ಇಂಟರ್‌ನ್ಯಾಷನಲ್  ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು  ಮಾಜಿ ಸಚಿವ ಎಚ್. ಎಂ. ರೇವಣ್ಣ ತಿಳಿಸಿದರು. ನಗರದ ಕುರುಬರ ಹಾಸ್ಟೆಲ್‌ನಲ್ಲಿ ಈ ಸಂಬಂಧ ಪೂರ್ವಭಾವಿ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
 ವಿಶ್ವದಲ್ಲಿ 12 ಕೋಟಿಗೂ ಮೀರಿ ಕುರುಬ ಸಮಾಜವಿದೆ. ವಿವಿಧ ಹೆಸರಿನಲ್ಲಿದೆ. ರಾಜ್ಯದಲ್ಲಿ ಕುರುಬ ಎಂಬ ಹೆಸರಿನಲ್ಲಿ ಗುರುತಿಸಲ್ಪಟ್ಟರೆ ತಮಿಳುನಾಡಿನಲ್ಲಿ  ಕುರುಮ, ಮಧ್ಯಪ್ರದೇಶದಲ್ಲಿ ಧನಗರ್, ಫಾಲ್ ಸಮಾಜ್, ದೇವಾಸಿ ಹೀಗೆ ಕಾಶ್ಮೀರದಿಂದ ಕನ್ಯಕುಮಾರಿಯ ವರೆಗೂ ಸಮಾಜ ವಿವಿಧ ಹೆಸರಿನಲ್ಲಿ ಕರೆಯಲ್ಪಡುತ್ತಿದೆ ಎಂದರು.
2014 ರಲ್ಲಿ ಅ.2 ರಂದು ಮಾಜಿ ಸಚಿವ ಎಚ್. ವಿಶ್ವನಾಥ್ ಸಂಘಟನೆಯನ್ನು ಅಸ್ತಿತ್ವಕ್ಕೆ ತಂದಿದ್ದಾರೆ. ಸಭೆ ಆರಂಭಗೊಂಡು ಇದುವರೆಗೂ  9 ನೇ ಸಮಾವೇಶ ಮುಗಿಸಲಾಗಿದೆ. ಬೆಳಗಾವಿಯಲ್ಲಿ  ಅ.2 ರಂದು  ಸಮಾವೇಶ ನಡೆಯಲಿದ್ದು, . 3 ರಂದು ಸಿಎಂ ಸಿದ್ದರಾಮಯ್ಯನವರಿಗೆ ಸನ್ಮಾನ ನಡೆಯಲಿದೆ ಎಂದರು.
ಶೆಫರ್ಡ್ ಇಂಡಿಯಾ ಇಂಟರ್ ನ್ಯಾಷನಲ್ ಸಮಾವೇಶ ಕುರುಬರ ರಾಷ್ಟ್ರಾದ್ಯಂತ ಬೇಡಿಕೆಗಳನ್ನು ಅಖಿಲ ಭಾರತ ಕುರುಬರ ಸಮಾಜದಲ್ಲಿ ಚರ್ಚಿಸಲಾಗುವುದು. ಕನಕ ಜಯಂತಿ, ಸಂಗೊಳ್ಳಿ ರಾಯಣ್ಣ ಜಯಂತಿ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಸಮಾವೇಶದಲ್ಲಿ ಕೇಂದ್ರ,ದ ಆರೋಗ್ಯ ಸಚಿವ ಉಷಾ ಶಿವಚರಣ್, ಗೋವಾದ ಕೆಲವು ಮಂತ್ರಿಗಳು ಭಾಗಿಯಾಗಲಿದ್ದಾರೆ. ಇಡೀ ಸಮಾಜ ಎಸ್ಟಿ ಗೆ ಸೇರಿಸಬೇಕೆಂದು ನಿರಂಜನಾನಂದ ಪುರಿ ಶ್ರೀಗಳ ನೇತೃತ್ವದಲ್ಲಿ ಹೋರಾಟ ನಡೆದಿದೆ. ಸಮಾಜದ ಏಳಿಗೆಗೆ  ರಾಷ್ಡ್ರೀಯ ಮಟ್ಟದಲ್ಲಿ ಕಟ್ಟಲು ಚಿಂತಿಸಲಾಗುವುದು ಎಂದರು.

ರಾಜ್ಯದಲ್ಲಿ ಅತಿಹೆಚ್ಚು ಕುರುಬರ ಜನಸಂಖ್ಯೆ ಬೆಳಗಾವಿಯಲ್ಲಿದೆ. ಹಾಗಾಗಿ ಬೆಳಗಾವಿಯಲ್ಲೇ ಈ ಬಾರಿ ಸಮಾವೇಶ ನಡೆಸಲಾಗುವುದು. ಸುಮಾರು ನಾಲ್ಕೈದು ಲಕ್ಷ ಜನ  ಸೇರುವ ನಿರೀಕ್ಷೆ ಇದೆ. ಕುರಿಗಾಹಿಗಳಿಗೆ ನೌಕರಿ ಸಿಗಬೇಕು. ವಿದ್ಯಾಭ್ಯಾಸ ಸಿಗಬೇಕು ಮೊದಲಾದ ಬೇಡಿಕೆಗಳನ್ನು ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು. ನಮ್ಮ ರಾಜ್ಯವಲ್ಲದೆ ಗೋವಾ ಮತ್ತು ತಮಿಳಿನಾಡಿನಲ್ಲಿ ಕುರುಬರನ್ನು ಕೇಂದ್ರದ ಎಸ್ಟಿ ಪಟ್ಟಿಗೆ  ಸೇರಿಸಬೇಕೆಂದು ಶಿಫಾರಸು ಮಾಡಿದೆ.
- ರೇವಣ್ಣ