32 ವರ್ಷ ಬಿಜೆಪಿಗೆ ದುಡಿದ ನಿಷ್ಠಾವಂತ ಕಾರ್ಯಕರ್ತನಿಗೆ ಸಿಕ್ತು ದೂಡಾ ಅಧ್ಯಕ್ಷಗಿರಿ

32 ವರ್ಷ ಬಿಜೆಪಿಗೆ ದುಡಿದ ನಿಷ್ಠಾವಂತ ಕಾರ್ಯಕರ್ತನಿಗೆ ಸಿಕ್ತು ದೂಡಾ ಅಧ್ಯಕ್ಷಗಿರಿ
32 ವರ್ಷ ಬಿಜೆಪಿಗೆ ದುಡಿದ ನಿಷ್ಠಾವಂತ ಕಾರ್ಯಕರ್ತನಿಗೆ ಸಿಕ್ತು ದೂಡಾ ಅಧ್ಯಕ್ಷಗಿರಿ
32 ವರ್ಷ ಬಿಜೆಪಿಗೆ ದುಡಿದ ನಿಷ್ಠಾವಂತ ಕಾರ್ಯಕರ್ತನಿಗೆ ಸಿಕ್ತು ದೂಡಾ ಅಧ್ಯಕ್ಷಗಿರಿ
ದಾವಣಗೆರೆ: ಬಿಜೆಪಿ ಪಕ್ಷಕ್ಕಾಗಿ ಸತತ 32 ವರ್ಷಗಳಿಂದ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿದ ವಕೀಲ, ಬಿಜೆಪಿ ಮುಖಂಡ, ಉಪ್ಪಾರ ಸಮಾಜದ ನಾಯಕರಾದ ಎ. ವೈ. ಪ್ರಕಾಶ್ ಅವರಿಗೆ ದಾವಣಗೆರೆ - ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಟ್ಟ ಸಿಕ್ಕಿದೆ. 
ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಮೂರು ವರ್ಷದ ಅವಧಿಯವರೆಗೆ ಹಾಗೂ ಸರ್ಕಾರದ ಮುಂದಿನ ಆದೇಶ ಬರುವವರೆಗೆ ದಾವಣಗೆರೆ - ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸತೀಶ್ ಕಬಾಡಿ ಅಧಿಸೂಚನೆ ಹೊರಡಿಸಿದ್ದಾರೆ.
ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಹುದ್ದೆ ನೀಡಬೇಕೆಂಬ ಚರ್ಚೆ ಬಿಜೆಪಿ ಪಕ್ಷದಲ್ಲಿ ಈಗಾಗಲೇ ಆಗಿತ್ತು. ಕೇಂದ್ರ, ರಾಜ್ಯ ಮಟ್ಟದಲ್ಲಿಯೂ ಸುದೀರ್ಘವಾಗಿ ಚರ್ಚೆ ನಡೆದಿದೆ. ಇದರ ಆಧಾರದ ಮೇಲೆ ಬಿಜೆಪಿಗೆ ದುಡಿದಿರುವ ಪ್ರಕಾಶ್ ಅವರ ಹೆಸರು ದೂಡಾ ಅಧ್ಯಕ್ಷ ಸ್ಥಾನಕ್ಕೆ ಪ್ರಮುಖವಾಗಿ ಕೇಳಿ ಬಂದಿತ್ತು.
1990ರಿಂದಲೂ ಅಂದರೆ 32 ವರ್ಷಗಳಿಂದ ಬಿಜೆಪಿ ಪಕ್ಷ ಸಂಘಟನೆಗೆ ಹಗಲಿರುಳು ಶ್ರಮಿಸಿದ್ದಾರೆ. ಬಿಜೆಪಿ ರಾಜ್ಯದಲ್ಲಿ ಬಲಿಷ್ಠವಾಗಿರದಂತಹ ವೇಳೆಯಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಪ್ರಕಾಶ್ ಹಗಲಿರುಳು ಶ್ರಮಿಸಿ ಸಂಘಟನೆ ಮಾಡಿದ್ದವರಲ್ಲಿ ಪ್ರಮುಖರು. ನಿಟುವಳ್ಳಿಯಲ್ಲಿ ಬಿಜೆಪಿ ಇಂದಿಗೂ ಬಲಿಷ್ಠವಾಗಿರಲು ಪ್ರಮುಖ ಕಾರಣ ಇದೇ ಪ್ರಕಾಶ್. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ನಿಟುವಳ್ಳಿಯಲ್ಲಿ ಪ್ರಕಾಶ್ ಮನೆ ಮೇಲೆ ಬಿಜೆಪಿ ಬಾವುಟ ಕಟ್ಟಿದ್ದಾಗ ಕಿಡಿಗೇಡಿಗಳು ಸುಟ್ಟು ಹಾಕಿದ್ದರು. ಆಗ ಪ್ರಕಾಶ್ ಅವರು ಸವಾಲೆಸೆದಿದ್ದರು. ಇಡೀ ಬಡಾವಣೆಯಲ್ಲಿ ಬಿಜೆಪಿ ಬಾವುಟ ಹಾರಿಸುತ್ತೇನೆ ಎಂಬ ಮಾತಿನಂತೆ ನಡೆದುಕೊಂಡಿದ್ದರು. ಪಕ್ಷಕ್ಕಾಗಿ ಕೇಸ್ ಹಾಕಿಸಿಕೊಂಡಿದ್ದರು. ಜೊತೆಗೆ ಬಿಜೆಪಿಗಾಗಿ ಬದುಕು ಸವೆಸಿದವರು. ಅಷ್ಟರ ಮಟ್ಟಿಗೆ ದುಡಿದ ಈ ನಾಯಕನಿಗೆ ಬಿಜೆಪಿ ಪಕ್ಷ ಈಗಲಾದರೂ ಉನ್ನತ ಹುದ್ದೆ ನೀಡಬೇಕೆಂಬ ಆಗ್ರಹ ಅವರ ಅಭಿಮಾನಿಗಳು ಹಾಗೂ ನಿಷ್ಠಾವಂತ ಕಾರ್ಯಕರ್ತರದ್ದು.
1990ರಿಂದ ಭಾರತೀಯ ಜನತಾ ಪಾರ್ಟಿಯ ನಿಷ್ಠಾವಂತ ಕಾರ್ಯಕರ್ತರು. ದಾವಣಗೆರೆ ನಗರ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯನಾಗಿ ಮೂರು ವರ್ಷ, ದಾವಣಗೆರೆ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನಾಗಿ ಆರು ವರ್ಷ, ದಾವಣಗೆರೆ- ಚಿತ್ರದುರ್ಗ, ತುಮಕೂರು ಜಿಲ್ಲೆಗಳನ್ನೊಳಗೊಂಡ ಬಿಜೆಪಿ ಕಾನೂನು ಮತ್ತು ಸಂಸದೀಯ ಪ್ರಕೋಷ್ಠದ ವಿಭಾಗೀಯ ಪ್ರಮುಖರಾಗಿ ಮೂರು ವರ್ಷ, ಬಿಜೆಪಿ ಜಿಲ್ಲಾ ಕಾರ್ಯದರ್ಶಿಯಾಗಿ ಮೂರು ವರ್ಷ ಮತ್ತು ಸದಸ್ಯತ್ವ ಅಭಿಯಾನದ ಪ್ರಮುಖನಾಗಿ ಹೀಗೆ ವಿವಿಧ ಸಮಯಗಳಲ್ಲಿ ಪಕ್ಷದ ಸಂಘಟನೆ ಮತ್ತು ಚುನಾವಣೆಗಳಲ್ಲಿ ಪಕ್ಷದ ಪರವಾಗಿ ನಿಷ್ಠೆಯಿಂದ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. 
ಇನ್ನು ಪ್ರಕಾಶ್ ಅವರ ಪರವಾಗಿ ಒಲವು ಹೆಚ್ಚಿತ್ತು. ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ ಹಾಗೂ ಹರಿಹರದ ಬಿಜೆಪಿ ಮುಖಂಡರು, ಕಾರ್ಯಕರ್ತರು ಪ್ರಕಾಶ್ ಅವರು ಅಧ್ಯಕ್ಷರಾಗಬೇಕೆಂಬ ಬಗ್ಗೆ ಬಹುಮತ ಇತ್ತು. 
ರಾಜನಹಳ್ಳಿ ಶಿವಕುಮಾರ್ ಅವರು ದೂಡಾ ಅಧ್ಯಕ್ಷರಾಗಿ ಕೆಳಗಿಳಿಯುವ ಮುಂಚೆ ಪ್ರಕಾಶ್ ಅವರಿಗೆ ನೀಡುವ ಭರವಸೆ ನೀಡಲಾಗಿತ್ತು‌. ಬದಲಾದ ರಾಜಕೀಯ ಸನ್ನಿವೇಶದಲ್ಲಿ ದೇವರಮನಿ ಶಿವಕುಮಾರ್ ಕಾಂಗ್ರೆಸ್ ಗೆ ಕೈಕೊಟ್ಟು ಬಿಜೆಪಿಗೆ ಸೇರ್ಪಡೆಯಾಗುವಾಗ ದೂಡಾ ಅಧ್ಯಕ್ಷ ಸ್ಥಾನ ನೀಡುವ ಭರವಸೆ ನೀಡಲಾಗಿತ್ತು‌. ಕಾಂಗ್ರೆಸ್ ಮೇಯರ್ ಅಭ್ಯರ್ಥಿಯಾಗಿದ್ದ ದೇವರಮನಿ ಶಿವಕುಮಾರ್ ಕೊನೆಹಂತದಲ್ಲಿ ಬಿಜೆಪಿ ಸೇರಿ ಅಚ್ಚರಿ ಮೂಡಿಸಿದ್ದರು. ನಿರೀಕ್ಷೆಯಂತೆ ದೂಡಾ ಅಧ್ಯಕ್ಷರಾದರು. ಬಳಿಕ ದೂಡಾ ಅಧ್ಯಕ್ಷರಾಗಿ ಕಳೆದ ಏಳು ತಿಂಗಳ ಹಿಂದೆಯಷ್ಟೇ ಕೆ. ಎಂ.‌ಸುರೇಶ್ ದೂಡಾ ಅಧ್ಯಕ್ಚರಾಗಿದ್ದರು. ಈಗ ಪ್ರಕಾಶ್ ಅವರಿಗೆ ದೂಡಾ ಅಧ್ಯಕ್ಷ ಸ್ಥಾನ ಲಭಿಸಿದೆ.‌
2019ರಲ್ಲಿ ನಡೆದ ಮಹಾನಗರ ಪಾಲಿಕೆಯ 32ನೇ ವಾರ್ಡ್ ನಲ್ಲಿ ಪ್ರಕಾಶ್ ಅವರ ಪತ್ನಿ ಪಕ್ಷೇತರರಾಗಿ ವಾರ್ಡ್ ನ ಜನರ ಒತ್ತಾಸೆ ಮೇರೆಗೆ ಕಣಕ್ಕಿಳಿದು ಜಯಭೇರಿ ಬಾರಿಸಿದ್ದರು. ಸಂಸದ ಜಿ. ಎಂ. ಸಿದ್ದೇಶ್ವರ್ ಸೇರಿದಂತೆ ಬಿಜೆಪಿ ಮುಖಂಡರು ಉಮಾಪ್ರಕಾಶ್ ರ ಮನವೊಲಿಸಿ ಬಿಜೆಪಿ ಬೆಂಬಲಿಸುವಂತೆ ಕೋರಿದ್ದರು‌. ಇದರಂತೆಯೇ ಉಮಾಪ್ರಕಾಶ್ ಹಾಗೂ ಪ್ರಕಾಶ್ ನಡೆದುಕೊಂಡಿದ್ದರು. ಈ ವೇಳೆ ಪ್ರಕಾಶ್ ರಿಗೆ ದೂಡಾ ಅಧ್ಯಕ್ಷ ಸ್ಥಾನದ ಭರವಸೆ ನೀಡಲಾಗಿತ್ತು. ಅದರಂತೆ ವರಿಷ್ಠರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ.
 
ವಿಧಾನಸಭೆ ಚುನಾವಣೆಗೆ ಇನ್ನು ಕೇವಲ ಐದಾರು ತಿಂಗಳಿದೆ. ಪ್ರಕಾಶ್ ಅವರು ಬಿಜೆಪಿಗಾಗಿ 32 ವರ್ಷ ದುಡಿದಿದ್ದಾರೆ‌. ಪಕ್ಷದ ಹೆಸರಿಗೆ ಕಳಂಕ ತರುವ ಕೆಲಸ ಮಾಡಿಲ್ಲ‌. ಇವರನ್ನು ಆಯ್ಕೆ ಮಾಡಿದರೆ ಬಿಜೆಪಿಗೆ ಲಾಭ ಆಗುತ್ತೆ. ಒಬಿಸಿ ಮತಗಳು ಕೈತಪ್ಪುವುದಿಲ್ಲ ಎಂಬ ಕಾರಣಕ್ಕೆ ಕೊನೆಗೂ ಪ್ರಕಾಶ್ ಅವರಿಗೆ ಹುದ್ದೆ ನೀಡಿದೆ. 
ಇನ್ನು ದಾವಣಗೆರೆಯಲ್ಲಿ ನಡೆದಿದ್ದ ಬಿಜೆಪಿ ಕೋರ್ ಕಮಿಟಿಯಲ್ಲಿ ಈ ಬಗ್ಗೆ ಚರ್ಚೆ ನಡೆದಿತ್ತು. ಅಧಿಕಾರ ಬಿಟ್ಟುಕೊಡಲು ಸುರೇಶ್ ಅವರು ಒಪ್ಪಿದರು. ಒಟ್ಟಿನಲ್ಲಿ ಪ್ರಕಾಶ್ ಅವರಿಗೆ ದೂಡಾ ಅಧ್ಯಕ್ಷ ಸ್ಥಾನ ಒಲಿದಿದ್ದು, ಇದು ಪ್ರಾಮಾಣಿಕತೆ, ಪಕ್ಷ ನಿಷ್ಠೆಗೆ ಸಿಕ್ಕ ಗೌರವ. ಹಿರಿಯರು ನನ್ನ ಮೇಲಿಟ್ಟಿರುವ ನಂಬಿಕೆ ಹುಸಿಯಾಗದಂತೆ ಕಾರ್ಯನಿರ್ವಹಿಸುತ್ತೇನೆ ಎಂದು "ಕ್ರಾಂತಿದೀಪ'' ಪತ್ರಿಕೆಗೆ ಪ್ರತಿಕ್ರಿಯೆ ನೀಡಿದರು.