ಹೊನಲು ಬೆಳಕಿನ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿ

ಹೊನಲು ಬೆಳಕಿನ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿ

ಶಿಕಾರಿಪುರ, ನ.21: 67 ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಯುವಕ ಸಂಘದ ವತಿಯಿಂದ  ಮೊದಲನೇ ದಿನದ ಹೊನಲು ಬೆಳಕಿನ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಕನ್ನಡ ಯುವಕ ಸಂಘದ ಅದ್ಯಕ್ಷರಾದ ಉಳ್ಳಿ ದರ್ಶನ್ ರವರು ಹಾಗು ಪುರಸಭೆಯ ಮುಖ್ಯಾಧಿಕಾರಿಯಾದ ಭರತ್ ರವರು, ಕನ್ನಡ ಯುವಕ ಸಂಘದ ಮಾಜಿ ಅದ್ಯಕ್ಷರುಗಳು ಸೇರಿ ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಯುವಕ ಸಂಘದ ಅದ್ಯಕ್ಷರಾದ ಉಳ್ಳಿ ದರ್ಶನ್ ರವರು, ತಾಲ್ಲೂಕಿನ ಸಮಸ್ತ ಜನತೆಗೆ 67 ನೇ ಕನ್ನಡ ರಾಜ್ಯೋತ್ಸವ ಶುಭಾಶಯ ಕೋರಿ, ಸತತ 10 ದಿನ ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತಿದ್ದು, ಸಮಸ್ತ ತಾಲ್ಲೂಕಿನ ವರ್ತಕರು, ಉದ್ಯಮಿಗಳು, ಕನ್ನಡ ಯುವಕ ಸಂಘಕ್ಕೆ ಸಹಕರಿಸಬೇಕಾಗಿ ವಿನಂತಿಸಿದರು, ಹಾಗು ಮುಖ್ಯಾಧಿಕಾರಿಗಳಾದ ಭರತ ರವರು ಮಾತನಾಡಿ ಕ್ರೀಡಾ ಪಟುಗಳು ಯಾವುದೇ ಗೊಂದಲವಿಲ್ಲದೆ, ಸೋಲು-ಗೆಲುವನ್ನು ಸಮಾನಾಗಿ ಸ್ವೀಕರಿಸಬೇಕಾಗಿ ವಿನಂತಿಸಿದರು.

ಈ ಸಂದರ್ಭದಲ್ಲಿ ಕನ್ನಡ ಯುವಕ ಸಂಘದ ಮಾಜಿ ಅದ್ಯಕ್ಷರಾದ ಸ.ನಾ.ಮಂಜಪ್ಪನವರು, ತಟ್ಟೆಹಳ್ಳಿ ಸುರೇಶ್, ಸಂತೋಷ ಗುಡ್ಡಳ್ಳಿ, ನಗರದ ಮಾಲತೇಶ್, ರಾಜೀವ್, ಚೋರಡಿ ಗಿಡ್ಡೇಶ್, ಸುರೇಶ್ ಹೂವಿನಮಂಡಿ, ಚನ್ನಳ್ಳಿ ರಾಜಣ್ಣ, ಬಡಗಿ ಪ್ರದೀಪ್, ದಯಾನಂದ್ ಗಾಮ, ಎನ್.ಅರುಣ್ ಕುಮಾರ್, ಹುಲ್ಲಿನಕಟ್ಟೆ ಮಲ್ಲಿಕಾರ್ಜುನ್, ರಾಜು, ಸಂತೋಷ, ಸುಹಾಸ್, ಶಶಾಂಕ್ ಕಾಗಿನಲ್ಲಿ, ಮುಂತಾದ ಮುಖಂಡರು ಪಾಲ್ಗೊಂಡಿದ್ದರು.