ಹಿರಿಯ ವಿಜ್ಞಾನಿ ಡಾ || ಸುಂದ್ರೇಶ್ ನಿಧನ

ಹಿರಿಯ ವಿಜ್ಞಾನಿ ಡಾ || ಸುಂದ್ರೇಶ್  ನಿಧನ

ಭದ್ರಾವತಿ.ಸೆ.20:ಇಲ್ಲಿಗೆ ಸಮೀಪದ ಅತ್ತಿಗುಂದ ಗ್ರಾಮದ ಡಾ ||ಸುಂದ್ರೇಶ್  ಎಸ್. ಹಿಮಾಚಲ್ ಪ್ರದೇಶದ ಸೀಮ್ಲಾದಲ್ಲಿ ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಅತ್ತಿಗುಂದ ಗ್ರಾಮದ ಸಿದ್ದಪ್ಪ ನವರು ಶಿವಮೊಗ್ಗದ ಪಿ ಅಂಡ್ ಟಿ ಕಾಲೋನಿಯಲ್ಲಿ ವಾಸವಾಗಿದ್ದು,ಅವರ ಪುತ್ರ ಡಾ || ಸುಂದ್ರೇಶ್ ಸೀಮ್ಲಾದಲ್ಲಿನ ಸೆಂಟ್ರಲ್ ಫೋಟೇಟೋ ರಿಸರ್ಚ್ ಇನ್ಸ್ಟಿಟ್ಯೂಟ್‌ನಲ್ಲಿ ಸೀನಿಯರ್ ವಿಜಾನಿಯಾಗಿ ಕಾರ್‍ಯನಿರ್ವಹಿಸುತ್ತಿದ್ದರು.

ಸೋಮವಾರ ಲ್ಯಾಬ್‌ನಲ್ಲಿ ಕಾರ್‍ಯನಿರ್ವಹಿಸುತ್ತಿದ್ದಾಗ ಎದೆನೋವು ಕಾಣಿಸಿ ಕೊಂಡಿದ್ದು, ತಕ್ಷಣವೇ  ಸಹೋದ್ಯೋಗಿ ಅವರನ್ನು ಅಸ್ಪತ್ರೆಗೆ ಕಾರಿನಲ್ಲಿ ಕರೆದ್ಯೋಯುತ್ತಿದ್ದಾಗಲೇ ನಿಧನರಾಗಿದ್ದಾರೆ.

ವಿಮಾನದ ಮೂಲಕ ಪಾರ್ಥಿವ ಶರೀರವನ್ನು ಇಂದು ಬೆಳಿಗ್ಗೆ ಬೆಂಗಳೂರಿಗೆ ತಂದಿದ್ದು.ಅಲ್ಲಿಂದ ಅಂಬ್ಯುಲೆನ್ಸ್ ಮೂಲಕ ಮಧ್ಯಾಹ್ನ ಅವರ ಹುಟ್ಟೂರಾದ ಅತ್ತಿಗುಂದ ಅವರ ತೋಟದಲ್ಲಿ ಮಧ್ಯಾಹ್ನ ಅಂತ್ಯ ಸಂಸ್ಕಾರ ನಡೆಸಲಾಯಿತು.

ಮೃತರು ತಂದೆ-ತಾಯಿ, ಸೋದರಿ ಸೇರಿದಂತೆ ಅಪಾರ ಬಂಧುಬಳಗವನ್ನು ಬಿಟ್ಟಗಲಿದ್ದಾರೆ. ಮೃತರ ನಿಧನ ಜಾತ್ಯಾತೀತ ಜನತಾದಳ ಮುಖಂಡ ಜಿ.ಚಿದಾನಂದ ತೀವ್ರ ಸಂತಾಪ ಸೂಚಿಸಿದ್ದಾರೆ.