ಸುಲಿಗೆ: ಅಪ್ರಾಪ್ತ ಸಹಿತ ಇಬ್ಬರ ಸೆರೆ

ಸುಲಿಗೆ: ಅಪ್ರಾಪ್ತ ಸಹಿತ ಇಬ್ಬರ ಸೆರೆ

ಶಿವಮೊಗ್ಗ : ನಗರದ ಚನ್ನಪ್ಪ ಲೇಔಟ್ ಮುಖ್ಯ ರಸ್ತೆಯಲ್ಲಿ ಶರತ್ ಎಂಬುವವರ ಮೊಬೈಲ್ ಫೋನ್ ಅನ್ನು ನ. ೫ರಂದು ಕಿತ್ತುಕೊಂಡು ಹೋದ ಬಗ್ಗೆ ಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. 

ಕಾಶಿಪುರದ ಪ್ರಜ್ವಲ್ ಆರ್ ಅಲಿಯಾಸ್ ಪ್ರಜ್ಜು (21) ಮತ್ತು ಇನ್ನೊಬ್ಬ ಕಾನೂನು ಸಂಘರ್ಷಕ್ಕೊಳಪಟ್ಟ ಬಾಲಕ. 

 ಜಯನಗರ ಪೊಲೀಸ್ ಠಾಣೆಯ ಪಿಎಸ್‌ಐ ಮತ್ತು ಸಿಬ್ಬಂದಿಗಳ ತಂಡವು ಪ್ರಕರಣದ ತನಿಖೆ ಕೈಗೊಂಡು ಇವರಿಬ್ಬರನ್ನು ಬಂಧಿಸಿದೆ.

 ಆರೋಪಿತರಿಂದ ಜಯನಗರ ಪೊಲೀಸ್ ಠಾಣೆಯ 1 ಸುಲಿಗೆ, 1 ಮೊಬೈಲ್ ಕಳ್ಳತನ ಮತ್ತು 2 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳು ಸೇರಿ ಒಟ್ಟು 4 ಪ್ರಕರಣಗಳಿಗೆ ಸಂಬಂಧಿಸಿದ ರೂ 1,71,000/-   ಮೌಲ್ಯದ 7 ಮೊಬೈಲ್ ಮತ್ತು 3 ದ್ವಿ ಚಕ್ರ ವಾಹನಗಳನ್ನು ಅಮಾನತುಪಡಿಸಿಕೊಂಡಿದೆ.