ಸಿಕ್ಕಿದ ಮಾಂಗಲ್ಯ ಸರ ಮರಳಿಸಿದ ಯುವಕ

ಸಿಕ್ಕಿದ ಮಾಂಗಲ್ಯ ಸರ ಮರಳಿಸಿದ ಯುವಕ

ಶಿವಮೊಗ್ಗ: ಇಲ್ಲಿನ ವಿನೋಬನಗರ ವಾಸಿ ಚಿತ್ರಾ ಎನ್ನುವವರು ತಮ್ಮ ಮಾಂಗಲ್ಯ ಸರವನ್ನು ದರಿಯಲ್ಲಿ ಕಳೆದುಕೊಂಡಿದ್ದು, ಮಂಗಳವಾರ ಅದು ಪತ್ತೆಯಾಗಿ ಮರಳಿ ಅವರ ಕೈಸೇರಿದೆ. 

ಸರ ಕಳೆದುಹೋದ ಬಗ್ಗೆ ವಿನೋಬನಗರ ಪೊಲೀಸರಿಗೆ ದೂರು ನೀಡಿದ್ದರು. ಈ ನಡುವೆ ಸಂತೃಪ್ತ್ ಎನ್ನುವವರು ವಿನೋಬನಗರ ಠಾಣೆ ಗೆ ಬಂದು ತಮಗೊಂದು ಸರ ಸಿಕ್ಕಿದೆ. ಅದು ಯಾರದ್ದು ನೋಡಿ, ಅವರಿಗೆ ತಲುಪಿಸಿ ಎಂದಿದ್ದಾರೆ. 

ಕೈಗೆ ಸಿಕ್ಕ ಚಿನ್ನ ಜೇಬಿಗಿಳಿಸದೆ ವ್ಯಕ್ತಿ ನೇರವಾಗಿ ಸ್ಟೇಷನ್‌ಗೆ ತಂದುಕೊಟ್ಟಿದ್ದನ್ನು ನೋಡಿದ ಪೊಲೀಸರು ಅವರನ್ನು ಸನ್ಮಾನಿಸಿದ್ದಾರೆ. ಚಿತ್ರಾ ಅವರನ್ನು ಠಾಣೆಗೆ ಕರೆಯಿಸಿ ಸಂತೃಪ್ತ್ ಅವರ ಕೈಯಿಂದಲೇ ಮಾಂಗಲ್ಯ ಸರವನ್ನು  ನೀಡಿದ್ದಾರೆ.