ಸಾಮಾನ್ಯ ಕಂಪ್ಯೂಟರ್ ಅಧ್ಯಯನಾ ಪುಸ್ತಕ ಬಿಡುಗಡೆ

ಅಧ್ಯಯನ ಅನುಭವವಿಲ್ಲದ ಮಾತು ಅರ್ಥಹೀನ : ಜಿ.ಎಸ್.ನಾರಾಯಣರಾವ್

ಸಾಮಾನ್ಯ ಕಂಪ್ಯೂಟರ್ ಅಧ್ಯಯನಾ ಪುಸ್ತಕ ಬಿಡುಗಡೆ

ಶಿವಮೊಗ್ಗ : ಬದುಕಿನಲ್ಲಿ ಅಧ್ಯಯನ ಮತ್ತು ಅನುಭವಿಲ್ಲದ‌ ಮಾತುಗಳು ಅರ್ಥಹೀನ ಎಂದು ರಾಷ್ಟ್ರೀಯ ಶಿಕ್ಷಣ ‌ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್ ಅಭಿಪ್ರಾಯಪಟ್ಟರು.

ಗುರುವಾರ ನಗರದ ಕಸ್ತೂರ ಬಾಲಿಕ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಕಿ ಜ್ಯೋತಿ ರಚಿಸಿರುವ ಸಾಮಾನ್ಯ ಕಂಪ್ಯೂಟರ್ ಅಧ್ಯಯನಾ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಜ್ಞಾನ ಪಡೆಯುವುದರ ಜೊತೆಗೆ ಸಮಾಜಕ್ಕೆ ಒಳಿತಾಗುವಂತಹ ಕಾರ್ಯ ನಡೆಯಬೇಕು. ಸಮಾಜದ ಒಳಿತಿಗಾಗಿ ನಮ್ಮ ಜ್ಞಾನ ಮೀಸಲಾಗಬೇಕು‌. ಅಂತಹ ಜ್ಞಾನವಂತರ ಸಮಾಜಕ್ಕೆ ನೀಡಿದ ಮಾರ್ಗದರ್ಶಕ ಕೊಡುಗೆಯೇ ಪುಸ್ತಕಗಳು. ಕಂಪ್ಯೂಟರ್ ಕಲಿಕೆ ಬದುಕಿನ ಅತಿ ಅವಶ್ಯಕ ವಿಚಾರವಾಗಿದ್ದು, ಅಂತಹ ಕಲಿಕೆಗೆ ಇಂತಹ ಪುಸ್ತಕಗಳು ಪೂರಕವಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಮಾಹಿತಿ ತಂತ್ರಜ್ಞಾನ ಯುಗದಲ್ಲಿ ನಾವಿದ್ದೇವೆ. ಯಾರಲ್ಲಿ ಅತಿ ಹೆಚ್ಚು ಜ್ಞಾನ ಮಾಹಿತಿ ಇದೆಯೊ ಅವರೇ ನಿಜವಾದ ಶ್ರೀಮಂತ. ತಂತ್ರಜ್ಞಾನದ ಕಲಿಕೆಗೆ ಯಾವುದೇ ಸೀಮಿತತೆ ಇಲ್ಲ. ಲ್ಯಾಟಿನ್ ಭಾಷೆಯಲ್ಲಿ ಕಂಪ್ಯೂಟರ್ ಎಂದರೇ ಯೋಚಿಸಿ ಕೆಲಸ ಮಾಡುವುದು ಎಂದರ್ಥ. ಅದರೇ ಇಂದು ಕಂಪ್ಯೂಟರ್ ಅನೇಕ ಯೋಚಿತ ತಾಂತ್ರಿಕ ಬದಲಾವಣೆಗಳಿಗೆ ಕಾರಣವಾಗಿದೆ. ನಾವು ಕಲಿಯುವ ಎಕ್ಸೆಲ್, ವರ್ಡ್ ಮೂಲಕ ಉನ್ನತ ಉದ್ಯೋಗವಕಾಶ ಪಡೆಯಲು ಸಾಧ್ಯ.

ಪುಸ್ತಕದ ಲೇಖಕಿ ಜ್ಯೋತಿ ಮಾತನಾಡಿ, ಇದು ವೈಯಕ್ತಿಕ ಸಾಧನೆಯಲ್ಲಾ , ಸಂಸ್ಥೆಯ ಸಾಧನೆಗೆ. ಆಸಕ್ತಿಯುತ ಅಧ್ಯಯನ ನಡೆಸಿದಾಗ ಮಾತ್ರ ಇಂತಹ ಅಧ್ಯಯನ ಸಾಮಾಗ್ರಿಗಳ ಆಶಯ ಪರಿಪೂರ್ಣತೆ ಹೊಂದಲು ಸಾಧ್ಯ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ರಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ನೀಡಲಾಯಿತು.