ಸಂಸತ್ ಭವನದಲ್ಲಿ ನೆಹರೂ ಬಗ್ಗೆ ಭಾಷಣ ಮಾಡಿದ ಸುಪ್ರದಾ

ಸಂಸತ್ ಭವನದಲ್ಲಿ ನೆಹರೂ ಬಗ್ಗೆ ಭಾಷಣ ಮಾಡಿದ ಸುಪ್ರದಾ

ಶಿವಮೊಗ್ಗ,ನ.17: ಭಾರತ ಸರ್ಕಾರ,ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ನವೆಂಬರ್ 14 ರಂದು ದೆಹಲಿಯ ಸಂಸತ್ತಿನಲ್ಲಿ "ರಾಷ್ಟ್ರೀಯ ನಾಯಕರಿಗೆ ಗೌರವ ಸಲ್ಲಿಸುವ" ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರದ ವತಿಯಿಂದ ನಮ್ಮ ಕರ್ನಾಟಕ ರಾಜ್ಯದ ಪ್ರತಿನಿಧಿಯಾಗಿ  ಶಿವಮೊಗ್ಗ ಜಿಲ್ಲೆಯ ಎನ್ ಇ.ಎಸ್ ಕಾಲೇಜಿನ ವಿದ್ಯಾರ್ಥಿನಿಯಾದ  ಕು. ಸುಪ್ರದಾ ಎ.ಆರ್  ರವರು   ಭಾಗವಹಿಸಿರುತ್ತಾರೆ.

ಈ ಆಯ್ಕೆ ಪ್ರಕ್ರಿಯು 2021-22 ರಲ್ಲಿ  ರಾಷ್ಟೀಯ ಯುವ ಸಂಸತ್ತು-2022 ಪ್ರಯುಕ್ತ ನಡೆಸಿದ ಜಿಲ್ಲಾ ಮಟ್ಟದ ಭಾಷಣ ಸ್ಪಧೆ೯ಯಲ್ಲಿ  ಆಯ್ಕೆಯಾದವರು, ರಾಜ್ಯ ಮಟ್ಟದಲ್ಲಿ ಸ್ಪರ್ಧಿಸಿ  ವಿಜೇತರಾಗಿರುತ್ತಾರೆ.
 ಪ್ರತಿ ರಾಜ್ಯದಿಂದ ವಿಜೇತರಾದ  ಅಭ್ಯರ್ಥಿಗಳು ರಾಷ್ಟ್ರಮಟ್ಟದಲ್ಲಿ ಭಾಗವಹಿಸಲು ಆಯ್ಕೆಯಾಗುತ್ತಾರೆ. ಆಯ್ಕೆಯಾದ 20 ಅಭ್ಯರ್ಥಿಗಳಲ್ಲಿ ನೆಹರು ಯುವ ಕೇಂದ್ರದ ವತಿಯಿಂದ ನಮ್ಮ ಕರ್ನಾಟಕ ರಾಜ್ಯದ ಶಿವಮೊಗ್ಗದ ಕು. ಸುಪ್ರದಾ ಎ.ಆರ್  ರವರು ಒಬ್ಬರು.  ಕು. ಸುಪ್ರಧರವರು ದೆಹಲಿ ಸಂಸತ್ತಿನ ಕೇಂದ್ರ ಸಭಾಂಗಣದಲ್ಲಿ    ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಮತ್ತು  ಸೋನಿಯಾ ಗಾಂಧಿಯವರ ಉಪಸ್ಥಿತಿಯಲ್ಲಿ  ಜವಹರಲಾಲ್  ನೆಹರುರವರು ದೇಶದ ಅಭಿವೃದ್ದಿಗಾಗಿ ವಹಿಸಿದ ಯೋಜನೆಯ ಬಗ್ಗೆ,ಅವರು ಕೈಗೊಂಡ ಚಳುವಳಿಗಳು  ಮತ್ತು  ಅವರಿಗೆ ಮಕ್ಕಳೆಂದರೆ ಬಲು ಪ್ರೀತಿ ಈ ಪ್ರೀತಿಯ ಸಂಕೇತವಾಗಿ ಅವರ ಹುಟ್ಟುಹಬ್ಬದ ದಿನವನ್ನು “ಮಕ್ಕಳ ದಿನಾಚರಣೆ"ಯನ್ನಾಗಿ ಆಚರಿಸುತ್ತಾರೆ.

ಮಕ್ಕಳು ಇವರನ್ನು ಪ್ರೀತಿಯಿಂದ ಚಾಚಾ ಎಂದು ಕರೆಯುತ್ತಿದ್ದರು ಹಾಗೂ ಅವರ ವ್ಯಕ್ತಿತ್ವದ ಬಗ್ಗೆ ಮಾತನಾಡಿದರು.
ಈ ಕಾರ್ಯಕ್ರಮದ ನಂತರ ಎಲ್ಲಾ ಅಭ್ಯರ್ಥಿಗಳಿಗೆ ರಾಜ್ಯಸಭಾ ಮತ್ತು ಲೋಕಸಭಾ  ವೀಕ್ಷಣೆಗೆ  ಅವಕಾಶ ನೀಡಲಾಗಿತ್ತು.