ಶ್ರದ್ದೆಯೊಂದಿಗೆ ಭಕ್ತಿ ಜೊತೆಯಾದರೆ ಸಾಧನೆ

ರಾಮಕೃಷ್ಣ ವಿದ್ಯಾನಿಕೇತನದ ವಾರ್ಷಿಕೋತ್ಸವದಲ್ಲಿ ವಿನಯಾನಂದಜಿ

ಶ್ರದ್ದೆಯೊಂದಿಗೆ ಭಕ್ತಿ ಜೊತೆಯಾದರೆ ಸಾಧನೆ

ಶಿವಮೊಗ್ಗ, ನ.24: ಶ್ರದ್ದೆ, ವಿನಯ, ಸೃಜನಶೀಲತೆಯ ಜೊತೆಗೆ ಭಕ್ತಿಯನ್ನು ರೂಢಿಸಿಕೊಂಡಾಗ ಎಂತಹ ಸಾಧನೆಯನ್ನಾದರೂ ಮಾಡಬಹುದು. ಆ ಮೂಲಕ ಯಶಸ್ಸುಗಳಿಸಬಹುದು ಎಂದು ಕಲ್ಲುಗಂಗೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ವಿನಯಾನಂದ ಸರಸ್ವತಿ ಮಹರಾಜ್ ತಿಳಿಸಿದರು.

ಅವರು ಗುರುವಾರ  ಗೋಪಾಲ ಗೌಡ ಬಡಾವಣೆಯ  ರಾಮಕೃಷ್ಣ ವಿದ್ಯಾನಿಕೇತನ ವಸತಿ ವಿದ್ಯಾಲಯವು ಇಂದಿನಿಂದ ಎರಡು ದಿನಗಳ ಕಾಲ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿರುವ ಶಾಲಾ ವಾರ್ಷಿಕೋತ್ಸವ, ಹಾಗೂ ಚಿನ್ನದ ಮಗುವಿಗೆ ಅಂದದ ಕೊಡುಗೆ, ಚಿನ್ನರ ಚಿಲುಮೆ ಹಾಗೂ ರಂಗೋತ್ಸೋವದ ಪ್ರಾರಂಭೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಅಭ್ಯಾಸ ಮತ್ತು ವೈರಾಗ್ಯ ಜೀವನದ ಅತಿಮುಖ್ಯ ಅಂಶಗಳು ನಿರಂತರ ಅಭ್ಯಾಸ ದಿಂದ ಅಸಾಧ್ಯವಾದುದನ್ನು ಸಾಧಿಸಬಹುದು. ಬೇಡವಾದದ್ದನ್ನು ವೈರಾಗ್ಯ ಮಾಡಿದಾಗ ಎಂತಹ ಸಾಧನೆಯನ್ನಾದರೂ ಮಾಡಬ ಹುದು. ನಮ್ಮ ಸಾಧನೆ ಹಾಗೂ ಯಶಸ್ಸಿಗೆ ಪೂರಕವಾಗಿ ಭಕ್ತಿ ಇರಬೇಕು. ದೇವರ ಕೃಪೆ ಇರಬೇಕು ಎಂದು ಹೇಳಿದರು.

 2019-2022 ಹಾಗೂ 2020-21 ರ ಸಾಲಿನ ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ಮಕ್ಕಳಿಗೆ ನಗದು ಬಹುಮಾನದ ಮೂಲಕ ಅವಾರ್ಡ್ ನೀಡಲಾಯಿತು.

  ಅಧ್ಯಕ್ಷತೆಯನ್ನು  ರಾಮಕೃಷ್ಣ ವಿದ್ಯಾ ನಿಕೇತನದ ಅಧ್ಯಕ್ಷ ಡಾ|| ಡಿ.ಆರ್. ನಾಗೇಶ್ ವಹಿಸಿದ್ದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯದರ್ಶಿ ಶೋಭಾ ವೆಂಕಟರಮಣ ಅವರು ರಾಮಕೃಷ್ಣ ವಿದ್ಯಾಸಂಸ್ಥೆ ಶಾಲೆಗಳ ಸಾಧನೆಗಳು ಹಾಗೂ ವಸತಿ ವಿದ್ಯಾಲಯಗಳ ಮಕ್ಕಳ ಸಾಧನೆಗಳ ಬಗ್ಗೆ ವಿವರಣೆ ನೀಡಿದರು.

  ವಿದ್ಯಾನಿಕೇತನದ ಅರುಣ್, ತೀರ್ಥೇಶ್, ಗಜೇಂದ್ರನಾಥ್ ಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು.