*ಶಿಸ್ತು ಉಲ್ಲಂಘನೆ ಆರೋಪ: ಹರಿಪ್ರಸಾದ್‌ಗೆ ನೋಟೀಸ್*

*ಶಿಸ್ತು ಉಲ್ಲಂಘನೆ ಆರೋಪ:  ಹರಿಪ್ರಸಾದ್‌ಗೆ ನೋಟೀಸ್*

ಬೆಂಗಳೂರು,ಸೆ.12: ಎಐಸಿಸಿ ಕಾರ್ಯಕಾರಿ ಸಮಿತಿ ಖಾಯಂ ಸದಸ್ಯ ಹಾಗೂ ವಿಧಾನ ಪರಿಷತ್ ಸದಸ್ಯರೂ ಆದ ಬಿ.ಕೆ. ಹರಿಪ್ರಸಾದ್ ಅವರಿಗೆ ರಾಷ್ಟ್ರೀಯ ಕಾಂಗ್ರೆಸ್ ಶಿಸ್ತು ಸಮಿತಿ ನೊಟೀಸ್ ಜಾರಿ ಮಾಡಿದೆ.

ಹರಿಪ್ರಸಾದ್ ಅವರ ಮೇಲೆ ಪಕ್ಷದ ಶಿಸ್ತು ಉಲ್ಲಂಘನೆ ಆರೋಪ ಹೊರಿಸಿ ಈ ನೋಟೀಸ್ ನೀಡಲಾಗಿದ್ದು, 10 ದಿನದಲ್ಲಿ ಉತ್ತರಿಸುವಂತೆ ತಿಳಿಸಲಾಗಿದೆ.

ಸೆ.9 ರಂದು ಬೆಂಗಳೂರಿನಲ್ಲಿ ಅತೀ ಹಿಂದುಳಿದ ವರ್ಗಗಳ ಸಮಾನ ಮನಸ್ಕರ ಸಭೆಯಲ್ಲಿ ಭಾಗಿಯಾಗಿದ್ದ ಹರಿಪ್ರಸಾದ್ ಅವರು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು.