ಶಿವಮೂರ್ತಿ ಶರಣರ ಪ್ರತಿಮೆ ಧ್ವಂಸ

ಶಿವಮೂರ್ತಿ ಶರಣರ ಪ್ರತಿಮೆ ಧ್ವಂಸ

 ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದಲ್ಲಿ ನಿರ್ಮಿಸಲಾಗಿದ್ದ ಮುರುಘಾಶರಣರ ಪ್ರತಿಮೆಯನ್ನು  ಗ್ರಾಮಸ್ಥರು ಧ್ವಂಸ ಮಾಡಿದ್ದಾರೆ.

 ಮಲ್ಲಾಡಿಹಳ್ಲಿ, ಕೆಂಗುಂಟೆ, ದುಮ್ಮಿ, ರಾಮಘಟ್ಟ ಮೊದಲಾದ ಹಳ್ಳಿಗಳ ಯುವಕರ ಗುಂಪು ಆಶ್ರಮ ಪ್ರವೇಶಿಸಿ ಶಿವಮೂರ್ತಿ ಶರಣರ ಫೋಟೊಗಳನ್ನು ಹೊರತಂದು  ಶವಯಾತ್ರೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ಗ್ರಾಮದ ಮುಖ್ಯವೃತ್ತದಲ್ಲಿ ಶಿವಮೂರ್ತಿ ಶರಣರ ಫೋಟೋಗಳನ್ನು ಸುಟ್ಟುಹಾಕಿದರು.

 ಕಳಂಕ ಹೊತ್ತಿರುವ ಸ್ವಾಮೀಜಿಯನ್ನು ಕೂಡಲೇ ಪೊಲೀಸರು ಬಂಧಿಸಬೇಕು. ಅನಾಥಾಶ್ರಮಕ್ಕೆ 9 ಕೋಟಿಯಷ್ಟು ವಾರ್ಷಿಕ ಆದಾಯ ಬರುತ್ತಿದೆ. ಆದರೆ ಏನೂ ಅಭಿವೃದ್ಧಿ ಮಾಡದೆ  ದುರುಪಯೋಗ ಹಣ ಮಾಡಲಾಗಿದೆ ಎಂದು ದೂರಿದರು.