ಶಿಕಾರಿಪುರದಲ್ಲಿ ಯುವಕನ ಕೊಲೆ

ಶಿಕಾರಿಪುರ: ಒಂದೆ ಸಮುದಾಯದ ಎರಡು ಯುವಕರ ಗುಂಪುಗಳ ನಡುವೆ ನಡೆದ ಮಾತಿನ ಚಕಮಕಿ ಯುವನೋರ್ವನ ಕೊಲೆಯಲ್ಲಿ ಅಂತ್ಯವಾದ ದಾರುಣ ಘಟನೆ ಪಟ್ಟಣದಲ್ಲಿ ಸೋಮವಾರ ನಡೆದಿದೆ.
ಜಾಫರ್(35) ಮೃತಪಟ್ಟ ಯುವಕ. ಈತ ಪಟ್ಟಣದ ಗಗ್ರಿ ಬಡಾವಣೆ ಜನ್ನತ್ ಗಲ್ಲಿ ನಿವಾಸಿ. ಈದ್ ಮಿಲಾದ್ ಹಬ್ಬಕ್ಕಾಗಿ ಕಮಿಟಿ ರಚಿಸುವ ಉದ್ದೇಶಕ್ಕಾಗಿ ಭಾನುವಾರ ಸಭೆ ಸೇರಿ ಮಾತುಕತೆ ನಡೆದಿತ್ತು ಆಗ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ ಅದೇ ವಿಷಯವಾಗಿ ಸೋಮವಾರ ಪುನಃ ಕೆಎಚ್‌ಬಿ ಬಡಾವಣೆಯಲ್ಲಿ ಮಾತುಕತೆಗಾಗಿ ಯುವಕರು ಸೇರಿದ್ದರು ಆಗ ಯುವಕನ ಕೊಲೆ ನಡೆದಿದೆ ಎಂದು ಹೇಳಲಾಗಿದೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳಿಗೆ ಹುಡುಕಾಟ ನಡೆಸಲಾಗಿದೆ.