ಶಾಸಕ ಕುಮಾರ್ ವಿರುದ್ಧ ಬಾಲಿಶ ಹೇಳಿಕೆ: ಅಭಿಮಾನಿಗಳ ಆಕ್ರೋಶ

ಶಾಸಕ ಕುಮಾರ್  ವಿರುದ್ಧ ಬಾಲಿಶ ಹೇಳಿಕೆ: ಅಭಿಮಾನಿಗಳ ಆಕ್ರೋಶ

ಸೊರಬ :  ಶಾಸಕ ಕುಮಾರ ಬಂಗಾರಪ್ಪ ವಿರುದ್ದ ಇಲ್ಲಸಲ್ಲದ ಬಾಲಿಶ ಆರೋಪಗಳನ್ನು ಎಂಎಡಿಬಿ ಮಾಜಿ ಅಧ್ಯಕ್ಷ ಪದ್ಮನಾಭ ಭಟ್ಟ  ಮಾಡಿರುವುದು ಅವರ ವಯಸ್ಸಿನ ಘನತೆಗೆ ತಕ್ಕುದಲ್ಲ ಎಂದು ಕುಮಾರ ಬಂಗಾರಪ್ಪ ಅಭಿಮಾನಿಗಳ ಬಳಗ ಹೇಳಿದೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕ ಕುಮಾರ ಬಂಗಾರಪ್ಪನವರ ಅಭಿಮಾನಿ ಬಳಗದವರಿಂದ ಕರೆದಿದ್ದ 

ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಪಂ‌ ಸದಸ್ಯ  ಎಂ. ಡಿ. ಉಮೇಶ್, ಭಟ್ ಅವರು ಮುಂದಿನ ದಿನಗಳಲ್ಲಿ ಮಾತಿನಲ್ಲಿ ಹಿಡಿತ ಸಾಧಿಸದಿದ್ದರೆ ಅಭಿಮಾನಿಗಳ ಬಳಗದಿಂದ ಅವರ ಮನೆಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.

ಶಿಕಾರಿಪುರ ಪುರಸಭೆಯಿಂದ ನಾಲ್ಕು ಬಾರಿ ಹಾಗೂ ಒಂದು ಬಾರಿ ಜಿ.ಪಂ. ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಲಾಗದ  ಭಟ್ಟರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಕೃಪೆಯಿಂದ ಎಂ.ಎ.ಡಿ.ಬಿ. ಅಧ್ಯಕ್ಷರಾಗಿದ್ದರೆ ಹೊರತು ವೈಯಕ್ತಿಕ ವರ್ಚಸ್ಸಿನಿಂದಲ್ಲ. 

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನಾಚರಣೆಯಂದು ನಮೋ ವೇದಿಕೆಯನ್ನು ಹುಟ್ಟು ಹಾಕಿ  ಕುಮಾರ ಬಂಗಾರಪ್ಪನವರ ಅಭಿವೃದ್ಧಿ ಮತ್ತು ಅಭಿವೃದ್ಧಿಪರ ಚಿಂತನೆಗಳನ್ನು ಸಹಿಸದ ಕೆಲವರು ಪದ್ಮನಾಭ ಭಟ್ಟರನ್ನು ಬಳಸಿಕೊಂಡು ಹಣಿಯಲು ಪ್ರಯತ್ನಿಸುತ್ತಿದ್ದಾರೆ.  ಎಂದರು. 

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೇಟ್ ನೀಡಬೇಡಿ ಎನ್ನುವುದಕ್ಕೆ ಪದ್ಮನಾಭ ಭಟ್ಟರು 

ಹೈಕಮಾಂಡ್ ಅಲ್ಲ. ನಾಲ್ಕು ಬಾರಿ ಶಾಸಕರಾಗಿ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಕುಮಾರ ಬಂಗಾರಪ್ಪನವರ 

ವಿರುದ್ಧ ಹಿರಿಯರಾದ ಭಟ್ಟರು ಹೀಗೆಲ್ಲ ಮಾತನಾಡಬಾರದು  ಎಂದರು. 

ತಂದೆ-ತಾಯಿಯನ್ನು ಮಧ್ಯರಾತ್ರಿ ಮನೆಯಿಂದ ಹೊರಹಾಕಿದವರು ಜನರ ರಕ್ಷಣೆ ನೀಡಲು ಹೇಗೆ ಸಾಧ್ಯ ಎಂದು 

ಕುಮಾರ ಬಂಗಾರಪ್ಪ ಕುಟುಂಬದ ವೈಯಕ್ತಿಕ ವಿಚಾರವನ್ನು ವೇದಿಕೆಯಲ್ಲಿ ಬಳಸಿಕೊಳ್ಳುವುದು ಅಕ್ಷಮ್ಯವಾಗಿದ್ದು, 

ಮಧ್ಯರಾತ್ರಿ ಎಸ್.ಬಂಗಾರಪ್ಪನವರ ಮನೆಗೆ ಪದ್ಮನಾಭ ಭಟ್ಟರು ಏಕೆ ಹೋಗಿದ್ದರು ಎಂದು ಪ್ರಶ್ನಿಸಿದ ಅವರು, ಇಂಥ ಬಾಲಿಶ 

ಹೇಳಿಕೆಗಳು ಮತ್ತು ಜನರಿಗೆ ತಪ್ಪು ಸಂದೇಶ ನೀಡಲು ಯತ್ನಿಸುವುದು ಹಿರಿಯರಾದವರಿಗೆ ಶೋಭೆ ತರುವುದಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಪುರಸಭೆ ಸದಸ್ಯ ಪ್ರಭು ಮೇಸ್ತ್ರಿ, ಗ್ರಾಮ ಪಂಚಾಯಿತಿ ಸದಸ್ಯರಾದ ಲೋಕೇಶ ಚಂದ್ರಗುತ್ತಿ, 

ಕನಕದಾಸ ಕಲ್ಲಂಬಿ, ಮಾಜಿ ಉಪಾಧ್ಯಕ್ಷ ಕೃಷ್ಣಮೂರ್ತಿ ಕೊಡಕಣಿ, ಕುಮಾರ ಬಂಗಾರಪ್ಪನವರ ಅಭಿಮಾನಿ 

ಬಳಗದವರಾದ ರಮೇಶ ಕೊರಕೋಡು, ಗುರುಮೂರ್ತಿ ಹಿರೇಶಕುನ, ಫಕೀರಪ್ಪ ಚಂದ್ರಗುತ್ತಿ ಹಾಜರಿದ್ದರು.