ಶಾಲಾ-ಕಾಲೇಜಿನಲ್ಲಿ ಕಳ್ಳತನ: ಕೊನೆಗೂ ಸಿಕ್ಕಿಬಿದ್ದರು ಇಬ್ಬರು ಕುಖ್ಯಾತರು

ಶಾಲಾ-ಕಾಲೇಜಿನಲ್ಲಿ ಕಳ್ಳತನ: ಕೊನೆಗೂ  ಸಿಕ್ಕಿಬಿದ್ದರು ಇಬ್ಬರು ಕುಖ್ಯಾತರು

ಉಡುಪಿ: ಜಿಲ್ಲೆಯಲ್ಲಿ ಕಳೆದ 5-6 ತಿಂಗಳಿನಿಂದ ರಾತ್ರಿ ಸಮಯ ಶಾಲಾ- ಕಾಲೇಜುಗಳಿಗೆ ನುಗ್ಗಿ ಬೀಗ ಮುರಿದು ಹಣ ಹಾಗೂ ಬೆಲೆಬಾಳುವ ಸೊತ್ತುಗಳು ಕಳ್ಳತನವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲೂ ಇವರು ಶಾಲಾ-ಕಾಲೇಜು ಕಳ್ಳತನ ಮಾಡಿದ್ದ ಹಿನ್ನೆಲೆಯಲ್ಲಿ  ಉಡುಪಿ ಎಸ್ ಪಿ ಅಕ್ಷಯ ಎಂ. ಹೆಚ್ ವಿಶೇಷ ತಂಡವನ್ನು ರಚಿಸಿ ಇವರನ್ನು ಬಂಧಿಸಿದ್ದಾರೆ.

 ಎಲ್ಲ ಶಾಲಾ ಕಾಲೇಜುಗಳ ಮಾಹಿತಿ , ಅಪರಾಧ ನಡೆದ ದಿನಾಂಕ ಹಾಗೂ ಇನ್ನಿತರ ಮಾಹಿತಿಯನ್ನು ಆಧರಿಸಿ, ಸಿಸಿ ಕ್ಯಾಮೇರಾಗಳ ಪರಿಶೀಲನೆ, ಲಾಡ್ಜ್ ಪರಿಶೀಲನೆ, ಜೈಲಿನಿಂದ ಬಿಡುಗಡೆಯಾದ ಕಳ್ಳತನ ಪ್ರಕರಣದ ಆರೋಪಿಗಳ ಮಾಹಿತಿ, ತಾಂತ್ರಿಕ ಮಾಹಿತಿಯನ್ನು ಕಲೆಹಾಕಿ ಹೊರ ರಾಜ್ಯ ಹಾಗೂ ಹೊರಜಿಲ್ಲೆಯಿಂದ ಬರುವ ವ್ಯಕ್ತಿಗಳು ಹಾಗೂ ವಾಹನದ ಮಾಹಿತಿ ಬಗ್ಗೆ ನಿಗಾವಹಿಸಿದ್ದರು.

ಉಡುಪಿ ಜಿಲ್ಲೆ ಕೋಟ ಠಾಣಾ ಸರಹದ್ದಿನ ಆವರ್ಸೆ ಗ್ರಾಮದ ಬಳಿ ಬೈಕ್‌ನಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಇವರು ಸಿಕ್ಕಿಬಿದ್ದಿದ್ದಾರೆ. 

ಒಬ್ಬ ಆರೋಪಿ  ಕುಮಾರಸ್ವಾಮಿ (59 ) ತಂದೆ ಮುರಗೇಶ ವಾಸ ಕಲ್ಲುಕುಡಚೀ, ಸೇಲಂ, ತಮಿಳುನಾಡು. ಈತನನ್ನು  ವಿಚಾರಿಸಲಾಗಿ ಈತನ ಮೇಲೆ ಈ ಹಿಂದೆ ಭಟ್ಕಳ ನಗರ ಠಾಣೆಯಲ್ಲಿ 5 ಮನೆ ಕಳ್ಳತನ ಪ್ರಕರಣ, ಹೊನ್ನಾವರ ಠಾಣೆಯಲ್ಲಿ 4 ಮನೆ ಕಳ್ಳತನ ಪ್ರಕರಣ ಹಾಸನ ಜಿಲ್ಲೆ ಬೇಲೂರು ಠಾಣೆಯಲ್ಲಿ 4 ಮನೆ ಕಳ್ಳತನ ಪ್ರಕರಣದಲ್ಲಿ ಹಳೆ ಆರೋಪಿಯಾಗಿದ್ದಾನೆ.  2018 ರಿಂದ 2021 ರವರೆಗೆ ಸುಮಾರು 7 ವರ್ಷಗಳ ಕಾಲ ಕಾರವಾರ ಜೈಲ್‌ನಲ್ಲಿದ್ದು ಶಿಕ್ಷೆಯನ್ನು ಅನುಭವಿಸಿದ್ದಾನೆ.

ಎರಡನೆಯ ಆರೋಪಿ ಜಾಹೀದ ಸಿನಾನ್ (32 ) ತಂದೆ: ಮಹಮ್ಮದ್, ವಾಸ 525(ಎ), ಹೆಚ್ ಕೆ ಮಂಜೀಲ್, ಎಸ್.ಎಸ್ ರೋಡ್ ಹೆಜಮಾಡಿ ಗ್ರಾಮ, ಕಾಪು ತಾಲೂಕು ಉಡುಪಿ. ಈತನು ಕಳ್ಳತನ ನಡೆಸಲು ಸಂತೆಕಟ್ಟೆ ಉಡುಪಿ ಬಳಿ ಬಾಡಿಗೆ ಮನೆಯನ್ನು ಮಾಡಿಕೊಂಡಿದ್ದು ಇನ್ನೊಬ್ಬ ತಮಿಳುನಾಡಿನ ಆರೋಪಿ ಕುಮಾರ ಸ್ವಾಮಿಯನ್ನು ಕರೆಯಿಸಿಕೊಂಡು ಕಳ್ಳತನವನ್ನು ಮಾಡುತ್ತಿದ್ದನು.

ಉಡುಪಿ ಜಿಲ್ಲೆಯಲ್ಲಿ 27, ಉತ್ತರ ಕನ್ನಡದಲ್ಲಿ ಮುರ್ಡೇಶ್ವರದಲ್ಲಿ 2,, ಶಿವಮೊಗ್ಗದಲ್ಲಿ 6, ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 37 ಕಡೆ ರಾತ್ರಿ ಸಮಯ ಶಾಲಾ- ಕಾಲೇಜಿನ ಬೀಗ ಮುರಿದು ಕಳ್ಳತನ ಮಾಡಿರುತ್ತಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ 6 ಕಳ್ಳತನ ಪ್ರಕರಣ:

ಈ ಆರೋಪಿಗಳಿಂದ 1 ಬೈಕು 2 ಮೊಬೈಲ್ ಪೋನ್ ಹಾಗೂ 10,000 ನಗದನ್ನು ವಶಪಡಿಸಿಕೊಂಡಿದ್ದು ತನಿಖೆ ಮುಂದುವರಿಸಲಾಗಿದೆ.