ಶಾಂತಮ್ಮ ಲೇಔಟ್, ಸಿದ್ದೇಶ್ವರ ನಗರದೊಳಕ್ಕೆ ನೀರು ನುಗ್ಗುವುದನ್ನು ತಪ್ಪಿಸಿ: ಜಿಲ್ಲ್ಲಾಧಿಕಾರಿಗೆ ಮನವಿ

ಶಾಂತಮ್ಮ ಲೇಔಟ್, ಸಿದ್ದೇಶ್ವರ ನಗರದೊಳಕ್ಕೆ ನೀರು  ನುಗ್ಗುವುದನ್ನು ತಪ್ಪಿಸಿ:  ಜಿಲ್ಲ್ಲಾಧಿಕಾರಿಗೆ ಮನವಿ

ಶಿವಮೊಗ್ಗ: ತುಂಗಾ ನಾಲೆಗೆ 2018  ರಲ್ಲಿ ನಿರ್ಮಿಸಿರುವ ತಡೆಗೋಡೆ ಅತ್ಯಂತ ಕಿರಿದಾಗಿದೆ. ಇಳಿಜಾರು ಇಲ್ಲದಿರುವುದು ಹಾಗೂ ಹರಿಗೆ ಕೆರೆ ಕೋಡಿಯಿಂದ ಬರುವಂತಹ ಹೆಚ್ಚುವರಿ ನೀರು ಕೂಡ ಸಂಪೂರ್ಣವಾಗಿ ರಾಜಕಾಲುವೆಗೆ ಸೇರುತ್ತಿದೆ. ಇದರಿಂದ ಪ್ರತಿ ಮಳೆಗಾಲದಲ್ಲಿ ಶಾಂತಮ್ಮ ಲೇಔಟ್ ನಾಗರಿಕರು ಪ್ರವಾಹ ಸ್ಥಿತಿ   ಅನುಭವಿಸುವಂತಾಗಿದೆ.  ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡು ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಅಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.

 ಮಂಗಳವಾರ ಆ ಭಾಗದ ಪಾಲಿಕೆ ಸದಸ್ಯೆ ಯಮುನಾ ರಂಗೇಗೌಡ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಈ ಸಂಬಂಧ  ಮನವಿ ಸಲ್ಲಿಸಿದರು.

ಸಂತೆಕಡೂರು ಸಹ್ಯಾದ್ರಿ ಕಾಲೇಜ್ ಮುಖಾಂತರವಾಗಿ ಹರಿದು ಬರುವ ತುಂಗಾ ನಾಲಾದ ಹೆಚ್ಚುವರಿ ನೀರು ವಾಸ್ತವವಾಗಿ ಗುರುಪುರ ನಾಲಾ ಮೂಲಕ ಸಾಗಿ ಪುರಲೆ ಕೆರೆಗೆ ಸೇರಬೇಕಾಗಿದೆ. ಆದರೆ ಪ್ರಸ್ತುತ 2018-2019 ರಲ್ಲಿ ಗುರುಪುರದಲ್ಲಿ 20 ಅಡಿ ಅಗಲ ಹೊಂದಿದ್ದ ನಾಲಾವನ್ನು ಕಿರಿದುಗೊಳಿಸಿ  8 ರಿಂದ 10 ಅಡಿ ಅಗಲಕ್ಕೆ ನಿರ್ಮಾಣ ಮಾಡಲಾಗಿದೆ. ಈ ಕಾರಣದಿಂದಾಗಿ ಪ್ರತಿ ಮಳೆಗಾಲದಲ್ಲಿ ಬಡಾವಣೆಗೆ ನೀಡು ತುಂಬುತ್ತಿದೆ ಎಂದು ವಿವರಿಸಿದರು.

 ತುಂಗಾ ನಾಲಾದ ನೀರು ಹೆಚ್ಚುವರಿಯಾಗಿ ಹರಿದು ಬರುವುದರಿಂದ ಹಾಗೂ ಆ ಸಮಯದಲ್ಲಿ ಹರಿಗೆ ಕೆರೆಯ ಕೋಡಿ ನೀರು ಕೂಡ ಇದೇ ನಾಲದ ಮೂಲಕ ಹರಿದು ಬರುತ್ತದೆ. ಇಷ್ಟು ಪ್ರಮಾಣದ ನೀರು ನಾಲಾ ಕಿರಿದಾಗಿರುವ ಹಾಗೂ ನೀರು ಹರಿದು ಹೋಗಲು ಆಗುತ್ತಿಲ್ಲ. ಸಾಕಷ್ಟು ಇಳಿಜಾರು ಇಲ್ಲದೆ ಆ ನಾಲದಲ್ಲಿ 4 ಅಡಿ ಮಟ್ಟದ ನೀರು ಶೇಖರಣೆಯಾಗಿ ಹರಿಗೆ ಕೆರೆ ಹಾಗೂ ತುಂಗಾ ನಾಲಾದಿಂದ ಹರಿದು ಬರುವ ನೀರನ್ನು ಸರಾಗವಾಗಿ ಹಾದು ಹೋಗಲು ಬಿಡುತ್ತಿಲ್ಲ. ಆಗ ಹೆಚ್ಚುವರಿ ಹರಿಯುತ್ತಿರುವ ನೀರು ಸಂಪೂರ್ಣವಾಗಿ ವಿದ್ಯಾನಗರದ ಶಾಂತಮ್ಮ ಲೇಔಟ್ ಮುಖಾಂತರ ಹಾದು ಹೋಗಿರುವ ರಾಜಾ ಕಾಲುವೆಗೆ ಹರಿದು ಬರುತ್ತಿದೆ. ಇದರಿಂದಾಗಿ ಸಿದ್ದೇಶ್ವರ ನಗರ 1 ನೇ ಮತ್ತು 2 ನೇ ಹಾಗೂ ೩ ನೇ ತಿರುವಿನ ಚರಂಡಿ ನೀರು ರಾಜ ಕಾಲುವ ನೀರಿನ ರಭಸಕ್ಕೆ ಮನೆಗಳಿಗೆ ವಾಪಾಸ್ ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗುತ್ತಿದೆ ಎಂದು ವಿವರಿಸಿದರು.

 ಈ ಪ್ರಮುಖ ಸಮಸ್ಯೆಗೆ ಸ್ಪಂದಿಸಿ ಶಾಶ್ವತ ಪರಿಹಾರ ಕಲ್ಪಿಸಿಕೊಡಬೇಕಾಗಿ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಜಿಲಾಧಿಕಾಕಾರಿ ಈ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿದರು.