ದಾವಣಗೆರೆ: ಸ್ವಲ್ಪ ಯಾಮಾರಿದ್ದರೂ ಜೀವ ಹೋಗುತಿತ್ತು. ಇದು ಗಟ್ಟಿ ಜೀವ. ರೈಲಿನ ಕೆಳಗೆ ಬಿದ್ದರೂ ಜೀವ ಬದುಕಿದ್ದು ನಿಜಕ್ಕೂ ರೋಚಕವೇ. ರೈಲ್ವೆ ಹಳಿಯೊಳಗೆ ಬಿದ್ದ ಶಿಕ್ಷಕರೊಬ್ಬರು ಪವಾಡಸದೃಶವಾಗಿ ಪಾರಾಗಿರುವಘಟನೆ ನಗರದಲ್ಲಿ ನಡೆದಿದೆ.
ದಾವಣಗೆರೆ ನಗರದ ರೈಲ್ವೆ ನಿಲ್ದಾಣದಲ್ಲಿ ಬಿ. ದುರ್ಗಕ್ಕೆ ಹೊರಟಿದ್ದ ಮುಖ್ಯ ಶಿಕ್ಷಕ ಶಿವಕುಮಾರ್ ಪ್ರಾಣಾಪಾಯದಿಂದ ಪಾರಾದವರು. ರೈಲ್ವೆ ನಿಲ್ದಾಣದ ಒಂದನೇ ಫ್ಲಾಟ್ ಫಾರಂನಿಂದ 2 ನೇ ಫ್ಲಾಟ್ ಫಾರಂ ಕಡೆಗೆ ರೈಲು ಹೊರಟಿತ್ತು. ಈ ವೇಳೆ ಏಕಾಏಕಿ ಗೂಡ್ಸ್ ರೈಲು ಬಂದಿದೆ. ರೈಲ್ವೆ ಟ್ರ್ಯಾಕ್ ದಾಟಲಾಗದೇ ಶಿಕ್ಷಕ ಶಿವಕುಮಾರ್ ಕೆಳಗಡೆ ಬಿದ್ದಿದ್ದಾರೆ. ಮೇಲೆ ಏಳಲು ಯತ್ನಿಸಿದರೂ ಸಾಧ್ಯವಾಗಲಿಲ್ಲ.
ಅಲ್ಲಿಂದ ತಪ್ಪಿಸಿಕೊಂಡು ಹೊರ ಬರಲು ಪರದಾಟ ನಡೆಸಿದ ವಿಡಿಯೋ ವೈರಲ್ ಆಗಿದೆ. ಹಳಿ ಮೇಲೆ ಬಿದ್ದಿದ್ದ ಶಿವಕುಮಾರ್ ಅವರು ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ವಿಡಿಯೋ ವೈರಲ್ ಆಗಿದೆ. ಬೆಳಿಗ್ಗೆ 8.30ಕ್ಕೆ ಬಿ. ದುರ್ಗಕ್ಕೆ ಹೋಗುವಾಗ ಈ ದುರ್ಘಟನೆ ನಡೆದಿದೆ.
ರೈಲ್ವೆ ನಿಲ್ದಾಣದಲ್ಲಿದ್ದ ಸ್ಥಳೀಯರು ಶಿವಕುಮಾರ್ ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಶಿವಕುಮಾರ್ ಗೆ ಸಣ್ಣಪುಟ್ಟ ತರಚಿದ ಗಾಯಗಳಾಗಿದ್ದು, ಪ್ರಕರಣ
ದಾಖಲಾಗಿಲ್ಲ.