ರಿಪ್ಪನ್‌ಪೇಟೆಯಲ್ಲಿ ರೈತ ಆತ್ಮಹತ್ಯೆ

ಶಿವಮೊಗ್ಗ : ಹೊಸನಗರದ ರಿಪ್ಪನ್ ಪೇಟೆಯ  ಗೌಡಕೊಪ್ಪ ಗ್ರಾಮದ ರೈತನೊಬ್ಬ ಸಾಲಭಾದೆಗೆ ತತ್ತರಿಸಿ ವಿಷ ಸೇವಿಸಿ  ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರೈತ ಮಂಜಪ್ಪ ಆತ್ಮಹತ್ಯೆ ಮಾಡಿಕೊಂಡವರು.

ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ಬೆಳೆ ನಷ್ಟ ಉಂಟಾಗಿ ತತ್ತರಿಸಿ ಹೋಗಿದ್ದ ಇವರು  ಸಾಲದ ತೀರುವಳಿ ನೋಟೀಸ್ ಬಂದ ಹಿನ್ನೆಲೆಯಲ್ಲಿ ನೊಂದು  ಬೆಳಗ್ಗೆ ತಮ್ಮ ಹೊಲದಲ್ಲಿ ವಿಷ ಸೇವಿಸಿದ್ದರು. ತತಕ್ಷಣ ಕುಟುಂಬಸ್ಥರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲು ಮಾಡಿದ್ದರು .ಆದರೆ ಚಿಕಿತ್ಸೆ ಫಲಕಾರಿಯಾಗದೆ  ಮೃತಪಟ್ಟಿದ್ದಾರೆ.