ಮನೆಗಳ್ಳತನ: ಶಿವಮೊಗ್ಗದ ಮೂವರು ಹಣ್ಣಿನ ವ್ಯಾಪಾರಿಗಳ ಬಂಧನ

ಶಿವಮೊಗ್ಗ,ಆ.23: ಹರಿಹರ ತಾಲೂಕಿನ ನಂದಿತಾವರೆ ಗ್ರಾಮದ ಮನೆಯೊಂದರಲ್ಲಿ ಕಳ್ಳತನ ಮಾಡಿದ ಶಿವಮೊಗ್ಗದ ಮೂವರು ಆರೋಪಿಗಳನ್ನು ಪೊಲೀಸರು ಬಂಸಿದ್ದಾರೆ.

ಬಂತರೆಂದರೆ-  ಹಣ್ಣಿನ ವ್ಯಾಪಾರಿಗಳಾದ ಮಹಮ್ಮದ ಕರೀಂ ಅಲಿಯಾಸ್ ಕರೀಂ (22), ಮಹಮ್ಮದ್ ಹಬಾಜ್ ಅಲಿಯಾಸ್  ಶಾಬಾ (21) ಮತ್ತು  ತಬ್ರೇಜ್ ಅಹಮ್ಮದ್ (36) 

ಆರೋಪಿಗಳಿಂದ 38 ಗ್ರಾಂ ತೂಕದ ಸುಮಾರು 1,90,000 ಬೆಲೆ ಬಾಳುವ ಬಂಗಾರದ ಆಭರಣಗಳು, 3,000 -ರೂ ಬೆಲೆ ಬಾಳುವ ಬೆಳ್ಳಿಯ ಉಡುದಾರ ಮತ್ತು ಕೃತ್ಯಕ್ಕೆ ಉಪಯೋಗಿಸಿದ 2 ಆಟೋಗಳು, 2 ಮೊಬೈಲ್ ಗಳು ಹಾಗೂ ಕಬ್ಬಿಣದ ರಾಡನ್ನು ಅಮಾನತ್ತು ಪಡಿಸಿಕೊಂಡಿದ್ದು, ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆ.11 ರಂದು ರಾತ್ರಿ ಕಳ್ಳರು ಹರಿಹರ ತಾಲ್ಲೂಕಿನ ನಂದಿತಾವರೆ ಗ್ರಾಮದ ನಾಗಮ್ಮ ಮನೆ ಬೀಗವನ್ನು ಮುರಿದು ಒಳ ಪ್ರವೇಶ ಮಾಡಿ, ಮನೆಯಲ್ಲಿದ್ದ 10,000  ರೂ ನಗದು ಹಣ ಹಾಗೂ 2,16,000  ರೂ. ಬೆಲೆಯ ಬೆಳ್ಳಿ-ಬಂಗಾರದ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದರು.