ಮನುಷ್ಯತ್ವವನ್ನು ಕಲಿಸದ ಓದಿನಿಂದ ಪ್ರಯೋಜನವಿಲ್ಲ

ಡಿವಿಎಸ್ ಸಂಯುಕ್ತ ಪಿಯು ಕಾಲೇಜಿನ ಪ್ರತಿಭಾ ಪುರಸ್ಕಾರದಲ್ಲಿ ಪ್ರೊ. ಜಿ. ಪ್ರಶಾಂತ್

ಮನುಷ್ಯತ್ವವನ್ನು ಕಲಿಸದ ಓದಿನಿಂದ ಪ್ರಯೋಜನವಿಲ್ಲ

ಶಿವಮೊಗ್ಗ: ಇಂದಿನ ಮಕ್ಕಳಲ್ಲಿ ನಾವು ಡಾಕ್ಟರ್ ಮತ್ತು ಇಂಜಿನಿಯರ್ ಗೀಳನ್ನು ಬಿತ್ತುವ ಮೂಲಕ ಆತಂಕ ಮತ್ತು ತಲ್ಲಣವನ್ನು ಸೃಷ್ಟಿಮಾಡಿದ್ದೇವೆ ಎಂದು ಕುವೆಂಪು  ವಿವಿ ಕನ್ನಡ ಭಾರತಿ ನಿರ್ದೇಶಕ ಪ್ರೊ. ಜಿ. ಪ್ರಶಾಂತ್ ನಾಯಕ್ ಹೇಳಿದರು.

ಗುರುವಾರ ಡಿವಿಎಸ್  ಸಂಯುಕ್ತ ಪದವಿಪೂರ್ವ ಕಾಲೇಜಿನ 2022 ರ ಸಾಲಿನ ಪ್ರತಿಭಾ ಪುರಸ್ಕಾರ  ಮತ್ತು ಸಾಂಸ್ಕೃತಿಕ ವೇದಿಕೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರ್‍ಯಾಂಕನ್ನು 1 ಅಥವಾ 2 ಪರ್ಸೆಂಟ್‌ನಷ್ಟು ಅಂಕ ಕಡಿಮೆ ಬಂದವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇದಕ್ಕೆ ನಾವೇ ಕಾರಣ. ಅವರಲ್ಲಿ ಅ ಂಕ ಮತ್ತು ರ್‍ಯಾಂಕ್‌ನ  ವಿಷಯ ತುಂಬುತ್ತಿದ್ದೇವೆ. ವಿದ್ಯಾರ್ಥಿಗಳು ಮಾಡಿಕೊಳ್ಳುವ ಈ ತಪ್ಪಿಗೆ ಯಾರಿಗೆ ಶಿಕ್ಷೆ ಕೊಡಬೇಕೆಂದು ಅವರು ಪ್ರಶ್ನಿಸಿದರಲ್ಲದೆ, ಮೊದಲು ಮನುಷ್ಯನಾಗು ಎನ್ನುವ ವಿಷಯವನ್ನು ವಿದ್ಯಾರ್ಥಿಗಳಲ್ಲಿ ಬಿತ್ತಬೇಕು. ಮಕ್ಕಳು ಅಪ್ಪನನ್ನು ಮತ್ತು ಶಿಷ್ಯರು ಗುರುಗಳನ್ನು ಮೀರಿ ಬೆಳೆದರೆ ಇದಕ್ಕಿಂತ ಸಂಭ್ರಮವನ್ನು ಯಾವ ಪಾಲಕರು, ಗುರುಗಳು ಕಾಣಲಾರರು ಎಂದು ಹೇಳಿದರು.

 ಪಾಲಕರು ತಮ್ಮ ಆಸ್ತಿಯನ್ನೆಲ್ಲಾ ಒತ್ತೆ ಇಟ್ಟು ಮೆಡಿಕಲ್, ಇಂಜಿನಿಯರಿಂಗ್ ಓದಿಸಿ ವಿದೇಶಕ್ಕೆ ಕಳುಹಿಸುತ್ತಾರೆ. ಆದರೆ ಇಲ್ಲಿ ಅಪ್ಪ- ಅಮ್ಮ ಸತ್ತಾಗಲೂ ಬಾರದಷ್ಟು ಹೃದಯಹೀನತೆ ಅವರಲ್ಲಿ ತುಂಬಿಕೊಳ್ಳುತ್ತದೆ. ಇಂತಹ ಓದು ಏಕೆ ಬೇಕು. ಮನುಷ್ಯತ್ವವನ್ನು ಕಲಿಸದ ಓದಿನಿಂದ ಪ್ರಯೋಜನವೇನು ಎಂದು ಪ್ರಶ್ನಿಸಿದರು.

 ಸಾಂಸ್ಕೃತಿಕ ವೇದಿಕೆ ಉದ್ಘಾಟಿಸಿದ ಪಿಯು ಮಂಡಳಿ ಉಪನಿರ್ದೇಶಕ ಬಿ. ಕೃಷ್ಣಪ್ಪ, ವಿದ್ಯಾರ್ಥಿಗಳ ಚಿಂತನೆ ಸಕಾರಾತ್ಮಕವಾಗಿದ್ದಾಗ ಅವರಿಂದ ಉತ್ತಮ ಸಾಧನೆ ಸಾಧ್ಯ. ಇಂತಹ ವಿದ್ಯಾರ್ಥಿಗಳಿಂದ ಸಂಸ್ಥೆಗೆ, ಕುಟುಂಬಕ್ಕೆ ಮತ್ತು ದೇಶಕ್ಕೆ ಒಳ್ಳೆಯ ಹೆಸರು ಬರುತ್ತದೆ. ಪುರಸ್ಕಾರ ಹೆಚ್ಚು ಮಕ್ಕಳಿಗೆ ಪ್ರೇರಣೆಯಾಗಬೇಕು. ಈ ಬರಿ ಪುರಸ್ಕರ ಬರಿದ್ದರೂ ಮ ಉದಂಇನ ವರ್ಷ ಅದನ್ನು ಪಡೆಯಬೇಕೆಂಬ ಛಲ ಬೆಳೆಸಿಕೊಂಡಾಗ ಓದಿನಲ್ಲಿ ಸಾಧನೆಯ ಮುನ್ನುಡಿ ಬರೆಯಲು ಸಾಧ್ಯ ಎಂದರು.

ಸಂಸ್ಥೆಯ ಕಾರ್‍ಯದರ್ಶಿ ಎಸ್. ರಾಜಶೇಖರ್ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರಿಂದ ಸ್ಥಾಪಿತವಾದ ಡಿವಿಎಸ್ ಸಂಸ್ಥೆ ಸಾಧನೆಯಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ. ನುರಿತ ಪ್ರಾಧ್ಯಾಪಕ ವೃಂದವದರಿಂದ ಉತ್ತಮ ಶಿಕ್ಷಣ ಕೊಡಲಾಗತ್ತಿದೆ. ವಿದ್ಯಾರ್ಥಿಗಳನ್ನು ಉತ್ತಮ ಓದಿಗೆ ಪ್ರೇರೇಪಿಸಲಾಗುತ್ತಿದೆ ಎಂದರು.

ಸಂಸ್ಥೆಯ ಖಜಾಂಚಿ ಡಾ. ಸತೀಶ್‌ಕುಮಾರ್ ಶೆಟ್ಟಿ, ಡಿವಿಎಸ್ ಸ್ವತಂತ್ರ ಪಿಯು ಕಾಲೇಜು ಪ್ರಾಚಾರ್‍ಯ ಎ. ಇ. ರಾಜಶೇಖರ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನದ ಮಾತುಗಳನ್ನಾಡಿ ಯಶಸ್ವಿ ವಿದ್ಯಾರ್ಥಿ ಆಗುವುದು ಹೇಗೆ ಎನ್ನುವುದನ್ನು ವಿವರಿಸಿದರು. 

ಸಂಸ್ಥೆಯ ಉಪಾಧ್ಯಕ್ಷ ಎಸ್. ಪಿ. ದಿನೇಶ್, ಕೋಶಾಧ್ಯಕ್ಷ ಬಿ. ಗೋಪಿನಾಥ ಉಪಸ್ಥಿತರಿದ್ದರು. ಪ್ರಾಚಾರ್‍ಯೆ ಆರ್. ಲಕ್ಷ್ಮೀದೇವಿ ಪ್ರಾಸ್ತಾವಿಕ ಮಾತನಾಡಿದರು. ಕನ್ನಡ ಉಪನ್ಯಾಸಕ ಸಂದೇಶ್ ನಾಡಿಗ್ ಕಾರ್‍ಯಕ್ರಮ ನಿರೂಪಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್‍ಯಕ್ರಮ ನಡೆಯಿತು. 

 ಮಕ್ಕಳಲ್ಲಿ ಮತ್ತು ಯುವಜನರಲ್ಲಿ  ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ, ಗುರುಹಿರಿಯರಿಗೆ ಗೌರವ  ದೂರವಾಗುತ್ತಿರುವ ಇಂದಿನ ದಿನಗಳಲ್ಲಿ ಎಲ್ಲವನ್ನೂ ಒಳಗೊಂಡ ಶಿಕ್ಷಣ ಕೊಡುತ್ತಿರುವ ಸಂಸ್ಥೆ ಡಿವಿಎಸ್ ಆಗಿದೆ.   ಸಂಸ್ಕಾರದೊಂದಿಗೆ ಬೆಳೆದಾಗ ಮಾತ್ರ ಮನುಷ್ಯ ಸುಸಂಸ್ಕೃತನಾಗುತ್ತಾನೆ. ಸ್ವಾತಂತ್ರ್ಯ ಹೋರಾಟಗಾರರು ಇದನ್ನೆಲ್ಲ ಗಮನದಲ್ಲಿಟ್ಟು ಕಟ್ಟಿದ ಈ ಸಂಸ್ಥೆ ಪರಂಪರೆಯಲ್ಲಿ ಇದನ್ನು ಮುಂದುವರೆಸಿಕೊಂಡು ಬಂದಿದೆ. ಪುರಸ್ಕಾರಕ್ಕೆ ಭಾಜನರಾದ ಒಳಗಾದ ಎಲ್ಲ ವಿದ್ಯಾರ್ಥಿಗಳಿಗೂ ಇದೇ ಕಾರಣಕ್ಕೆ ತಾನು ತಲೆ ಮೇಲೆ ಕೈ ಇಟ್ಟು ಆಶೀರ್ವಾದ ಮಾಡಿದ್ದೇನೆ.   

- ಸಂಸ್ಥೆಯ ಅಧ್ಯಕ್ಷ ರುದ್ರಪ್ಪ ಕೊಳಲೆ