*ಮಗನಿಂದ ಓಮ್ನಿ ಚಾಲನೆ: ಅಪ್ಪನಿಗೆ 25 ಸಾವಿರ ರೂ. ದಂಡ*

ಶಿವಮೊಗ್ಗ: ನಗರದ ಕರ್ನಾಟಕ ಸಂಘದ ಹತ್ತಿರ 17 ರ ಬಾಲಕನೊಬ್ಬನು ವಾಹನ ಚಾಲನಾ ಪರವಾನಿಗೆ ಇಲ್ಲದೆ ಓಮಿನಿ ವಾಹನವನ್ನು ಚಾಲನೆ ಮಾಡಿ ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿದ್ದಕ್ಕೆ ವಾಹನದ ಮಾಲಕ, ಬಾಲಕನ ತಂದೆಗೆ ನ್ಯಾಯಾಲಯ 25 ಸಾವಿರ ರೂ. ದಂಡ ವಿಧಿಸಿದೆ.
ಸೆ. 9 ರಂದು ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಎಸ್ ಐ ಹೆಚ್. ಎಸ್. ಶಿವಣ್ಣವರ್ ವಾಹ ತಪಾಸಣೆ ಮಢುವಾಗ ಇದು ಪತ್ತೆಯಾಗಿತ್ತು.
ಅಪ್ರಾಪ್ತ ವಯಸ್ಸಿನ ಬಾಲಕನಿಗೆ ವಾಹನವನ್ನು ಚಾಲನೆ ಮಾಡಲು ಅವಕಾಶ ನೀಡಿದ ವಾಹನದ ಮಾಲೀಕ, ಬಾಲಕನ ತಂದೆ ಎನ್ ಆರ್ ಪುರದ ಇಲಿಯಾಸ್ (41 ) ವಿರುದ್ಧ ಶಿವಮೊಗ್ಗ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಲಘು ಪ್ರಕರಣವನ್ನು ದಾಖಲಿಸಿ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ವರದಿಯನ್ನು ಸಲ್ಲಿಸಲಾಗಿತ್ತು.
3 ನೇ ಎ.ಸಿ.ಜೆ & ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರು ಓಮಿನಿ ವಾಹನದ ಮಾಲೀಕನಿಗೆ ರೂ 25,000 ದಂಡ ವಿಧಿಸಿದ್ದಾರೆ.