ಮಕ್ಕಳ ಭವಿಷ್ಯ ಉಜ್ವಲವಾದಾಗ ಪೋಷಕರಿಗೆ ನೆಮ್ಮದಿ

ಮಕ್ಕಳ ಭವಿಷ್ಯ ಉಜ್ವಲವಾದಾಗ ಪೋಷಕರಿಗೆ ನೆಮ್ಮದಿ

ಶಿವಮೊಗ್ಗ : ಸೆ. 10 : ಮಕ್ಕಳ ಭವಿಷ್ಯ ಉಜ್ವಲವಾದಾಗ ಕುಟುಂಬ ಜೀವನ ಸಹಜವಾಗಿ ನೆಮ್ಮದಿಯಿಂದ ಕೂಡಿರುತ್ತದೆ ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಹೇಳಿದರು.

ಅವರು ನಗರದ ಹೊರ ವಲಯದಲ್ಲಿರುವ  ಪೇಸ್ ಕಾಲೇಜಿನ ಜಯಲಕ್ಷ್ಮಿ ಈಶ್ವರಪ್ಪ ಸಭಾಂಗಣದಲ್ಲಿ ಏರ್ಪಡಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಂಘ, ಸೌಹಾರ್ದ ಮತ್ತು ಗೃಹ ನಿರ್ಮಾಣ ಸಹಕಾರ ಸಂಘಗಳ  ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

 ನೌಕರರ ಸಂಘವು ತನ್ನ ಸದಸ್ಯರು ಮಾತ್ರವಲ್ಲದೆ ನೌಕರರ ಕುಟುಂಬ ವರ್ಗ ಹಾಗೂ ಅವರ ಪ್ರತಿಭಾವಂತ ಮಕ್ಕಳ ಭವಿಷ್ಯದ ಬಗ್ಗೆಯೂ ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರೋತ್ಸಾಹಿಸುಸುತ್ತಿರುವುದು ವಿಶೇಷ ಎನಿಸಿದೆ. ಪೋಷಕರು ತಮ್ಮ ಮಕ್ಕಳ ಅಗತ್ಯಗಳನ್ನು ಪೂರೈಸಲು ಮಾತ್ರವಲ್ಲ ಅವರ ಚಲನವಲನಗಳ ಬಗ್ಗೆಯೂ ಗಮನಹರಿಸಬೇಕು. ಮಕ್ಕಳೂ ಕೂಡ ಪೋಷಕರ ಆಸೆ-ನಿರೀಕ್ಷೆ ಗಳಿಗೆ ಪೂರಕವಾಗಿ ನಡೆದುಕೊಳ್ಳಬೇಕು ಎಂದು  ತಿಳಿಸಿದರು.

ಮಕ್ಕಳ ಕುರಿತು ಪೋಷಕರಲ್ಲಿ ನಿರೀಕ್ಷೆಗಳು ಹೆ ಹೆಚ್ಚಾಗಿವೆ. ವಿದ್ಯಾರ್ಥಿಗಳು ದೇಶದ ಮಾದರಿ ಪ್ರಜೆಗಳಾಗಿ ಗುರುತಿಸಿಕೊಳ್ಳಬೇಕು ಎಂದರು.

ಜಿಪಂ ಸಿಇಓ ಸ್ನೇಹಲ್ ಸುಧಾಕರ್ ಲೋಖಂಡೆ  ಮಾತನಾಡಿ, ಮಕ್ಕಳು ನಿರೀಕ್ಷಿತ ಗುರಿ ತಲುಪಲು ಸತತ ಪರಿಶ್ರಮ ಅಗತ್ಯ ಎಂದರು.

 ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ  ಮಾತನಾಡಿ, ರಾಜ್ಯದಲ್ಲಿ ಸರ್ಕಾರಿ ನೌಕರರ  ಸುಮಾರು ೭೦೦೦ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ, ಗೌರವಿಸಲಾಗುತ್ತಿದೆ. ಈ ರೀತಿ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಗೌರವಿಸುವ ರಾಜ್ಯದ ಏಕೈಕ ದೊಡ್ಡ ಸಂಘ ಇದಾಗಿದೆ. ವಿದ್ಯಾರ್ಥಿಗಳು ಕೂಡ ಪೋಷಕರಿಗೆ ಹೊರೆ ಆಗದಂತೆ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.