ಭ್ರಷ್ಟಾಚಾರಕ್ಕೆ ಅಂತ್ಯ ಹಾಡದಿದ್ದರೆ ಉಪವಾಸ ಸತ್ಯಾಗ್ರಹ

ಭ್ರಷ್ಟಾಚಾರಕ್ಕೆ ಅಂತ್ಯ ಹಾಡದಿದ್ದರೆ ಉಪವಾಸ ಸತ್ಯಾಗ್ರಹ

ಸಾಗರ, ಸೆ.17:- ಪ್ರಸ್ತುತ ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರ ಒಳಗುದ್ದಿನಂತೆ ವ್ಯಾಪಿಸಿದೆ. ಇದನ್ನು ಆಡಳಿತದ ಮುಖ್ಯಮಂತ್ರಿ ಅಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಮೂಲಕ ಅಂತ್ಯ ಹಾಡದಿದ್ದರೇ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ ಎಂದು ಪ್ರಸಿದ್ಧ ರಂಗಕರ್ಮಿ ಚರಕ ಪ್ರಸನ್ನ ಆಗ್ರಹಿಸಿ ಎಚ್ಚರಿಕೆ ನೀಡಿದರು. 

ಸಾಗರದ ಪ್ರೆಸ್‌ಟ್ರಸ್ಟ್ ಆಫ್ ಸಾಗರ ಮತ್ತು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶನಿವಾರ ಏರ್ಪಡಿಸಿದ್ದ ಪ್ರಸ್ತುತ ವ್ಯವಸ್ಥೆಯ ವೈಪರೀತ್ಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೈಗಾರಿಕೆ ಅವಸಾನಕ್ಕೆ ತಿರುಗುವ ಕ್ಷೇತ್ರಗಳು ಎಂಬ ಮನಸ್ಥಿತಿ ಆಕಾರಿಗಳಿಗೆ ಮತ್ತು ಆರ್ಥಿಕ ತಜ್ಞರಿಗೆ ಇತ್ತು. ಇದರಿಂದ ಈ ಕ್ಷೇತ್ರಗಳು ನಿರ್ಲಕ್ಷ್ಯಕ್ಕೊಳ ಗಾದವು. ನಮ್ಮ ದೇಶದ ಆರ್ಥಿಕತೆಯ ಬಹುದೊಡ್ಡ ಪಾಲಾದ ಇಡೀ ಗ್ರಾಮೀಣ ಕ್ಷೇತ್ರಕ್ಕೆ, ಸಣ್ಣ ಕೈಗಾರಿಕೆಗಳ ಕ್ಷೇತ್ರಕ್ಕೆ ಸರ್ಕಾರ ಸಬ್ಸಿಡಿ ಕೊಡುತ್ತಿದ್ದೇವೆ ಎಂದು ಹೇಳುತ್ತಿವೆ. ಇದು ಆರ್ಥಿಕತೆಯನ್ನು ಬೆಳೆಸುವುದಕ್ಕಿಂತ ಹೆಚ್ಚಾಗಿ ನಮ್ಮ ದೇಶವನ್ನು ಅಧೋಗತಿಗೆ ತೆಗೆದುಕೊಂಡು ಹೋಗುವ ಕ್ರಮವಾಗಿದೆ. ಕಳೆದ 25 ವರ್ಷಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿದ್ದ ಶ್ರೀಮಂತರಲ್ಲಿ, ಇವತ್ತು ನಾಲ್ಕಾರು ಮಂದಿ ಇದ್ದಾರೆ. ಈ ರೀತಿಯ ವಿಪರೀತ ವ್ಯತ್ಯಾಸವನ್ನು ಈಗ ಕಾಣುತ್ತಿದ್ದೇವೆ ಎಂದು ಅವರು ವಿಶ್ಲೇಷಿಸಿದರು. 

ನಾಡಿನ ಗ್ರಾಮೀಣ ಕುಶಲ ಕ್ಷೇತ್ರಗಳನ್ನು ಈ ರೀತಿ ನಿರ್ಲಕ್ಷ್ಯಿಸುತ್ತಿರುವುದು ತಪ್ಪಾಗುತ್ತದೆ.  ನಮ್ಮ ಕರ್ನಾಟಕ ಸರ್ಕಾರದೊಳಗೇ ಇರುವ ಭ್ರಷ್ಟಾ ಚಾರಕ್ಕೆ ಪ್ರಚೋದನೆ ಮಾಡಬಲ್ಲ ಕೆಲವು ಸಂಗತಿಗಳನ್ನು ಅವರು ಉಲ್ಲೇಖಿಸಿದರು. 

 ಚರಕ ಸಂಸ್ಥೆ ಇಡೀ ದೇಶದಲ್ಲಿ  ನೈಸರ್ಗಿಕ ಬಣ್ಣಗಾರಿಕೆಯಲ್ಲಿ ಹೆಸರುಪಡೆದಿದೆ. ಇದಕ್ಕೆ ಹೆಚ್ಚು ಪ್ರೋತ್ಸಾಹ ಕೊಡುತ್ತೇವೆ ಎಂದು ಆಗಿನ ಕಾರ್ಯದರ್ಶಿ ಅಮರನಾಥ್, ಅಡಿಕೆ ಚೊಗರಿ ನಿಂದ ನೀವು ಮಾಡುತ್ತಿದ್ದೀರಿ. ನಾವೂ ನಿಮಗೆ ಸಹಯೋಗ, ಸಹಾಯ  ಮಾಡುತ್ತೇವೆ. ಇದರ ಲಾಭ ಬೇರೆಯವರಿಗೂ ಸಿಗಲಿ ಎಂದು ಸಹಾಯಧನ ಮಂಜೂರು ಮಾಡಿದರು. ಆದರೆ ಇದು ಮಾರ್ಚ್ ಅಂತ್ಯಕ್ಕೆ ಪಾಸಾಗುತ್ತಿರಲಿಲ್ಲ. ಈ ರೀತಿ 5-6 ವರ್ಷ ನಡೆಯಿತು. ಕೊನೆಗೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ದ್ದಾಗ ಉಪವಾಸ ಸತ್ಯಾಗ್ರಹಕ್ಕೆ ಕುಳಿತೆ. ಮಂಜೂರು ಪತ್ರ ಬರುತ್ತದೆ. ಆದರೆ ಹಣ ಸಿಗುವುದಿಲ್ಲ. ಹಣ ಮಂಜೂರಾಗಿದೆ ಎಂದು ಕೆಲಸ ಮಾಡಿಸುತ್ತಿದ್ದೇವೆ. ಆದರೆ ನಿಮ್ಮಿಂದ ಹಣ ಬರುತ್ತಿಲ್ಲ ಎಂದು ಉಪವಾಸ ಮಾಡಿದೆ. ಆಗ ಯಡಿಯೂರಪ್ಪನವರು ಪರಿಹಾರ ಮಾಡುವ ಭರವಸೆ ನೀಡಿದರು. 

ನೈತಿಕ ಶಕ್ತಿಯಾಗಬೇಕು : 

ರಾಹುಲ್ ಗಾಂ ಹೆಸರಿನಲ್ಲಿ ಅವರು ರಾಹುಲ್ ತೆಗೆದು ಗಾಂಯಾಗಿ ರೂಪು ಗೊಳ್ಳಬೇಕು. ಧರ್ಮವನ್ನು ಬೇರೆ ರೀತಿಯಲ್ಲಿ ನೋಡಿದಾಗ ಭಾರತವನ್ನು ಜೋಡಿಸಲು ಸಾಧ್ಯ ಎಂದರು. 

ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎಚ್.ವಿ.ರಾಮ ಚಂದ್ರರಾವ್, ಕಾರ್ಯದರ್ಶಿ ಎಸ್.ವಿ.ಹಿತಕರ ಜೈನ್, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಮೇಶ್ ಹೆಗಡೆ ಗುಂಡೂಮನೆ, ಕಾರ್ಯದರ್ಶಿ ಗಣಪತಿ ಶಿರಳಗಿ, ಟ್ರಸ್ಟ್ ನ ಎ.ಡಿ.ರಾಮಚಂದ್ರ ಭಟ್, ಚರಕ ಸಂಸ್ಥೆಯ ಗೌರಮ್ಮ,ಪತ್ರಕರ್ತರುಗಳಾದ ಆರ್.ಎನ್. ವೆಂಕಟಗಿರಿ,ಯೋಗೀಶ್ ಜಿ.ಭಟ್,ಎಂ. ರಾಘವೇಂದ್ರ,ಧರ್ಮರಾಜ್,ರವಿ,ಎನ್.ರಮೇಶ್ ಮತ್ತಿತರರು ಹಾಜರಿದ್ದರು.