ಭದ್ರಾವತಿ ಯುವಕರ ಗಲಾಟೆ ಪ್ರಕರಣ: 6 ಜನರ ಬಂಧನ

ಭದ್ರಾವತಿ ಯುವಕರ ಗಲಾಟೆ ಪ್ರಕರಣ: 6 ಜನರ ಬಂಧನ

ಶಿವಮೊಗ್ಗ: ಭದ್ರಾವತಿಯ ಜ್ಯೂನಿಯರ್ ಕಾಲೇಜ್ ಬಳಿ ನ. 13 ರ ಸಂಜೆ ನಡೆದ ಗಲಾಟೆಯ ಹಿನ್ನೆಲೆಯಲ್ಲಿ ಒಟ್ಟೂ ಆರು ಜನರನ್ನು ಬಂಧಿಸಲಾಲಾಗಿದೆ. 

 ಜಹೀರ್, ಅಸ್ಲಂ ಹಾಗೂ ಹರೀಶ್, ಗೌತಮ್ ಅಲಿಯಾಸ್ ಅಪ್ಪು ಮಧ್ಯೆ ನಡೆದ ಗಲಾಟೆಯ ಹಿನ್ನೆಲೆಯಲ್ಲಿ ಜಹೀರ್ ನೀಡಿದ ದೂರಿನ ಮೇರೆಗೆ ಹೊಸಮನೆ ಪೊಲೀಸರು ನೆಹರೂನಗರದ ಹರೀಶ್ (22 ) ಮತ್ತು  ಗೌತಮ್ ಅಲಿಯಾಸ್  ಅಪ್ಪು (22 )ಇವರನ್ನು ದಸ್ತಗಿರಿ ಮಾಡಿದ್ದಾರೆ.

ಇನ್ನೊಂದು ದೂರಿನನ್ವಯ (ಹರೀಶ್ ನೀಡಿದ ದೂರಿನ ಮೇರೆಗೆ) ಹಾಗೂ ಆಸ್ಪತ್ರೆಗೆ ದಾಖಲಾಗಿದ್ದ ಜಹೀರ್‌ನನ್ನು ನೋಡಲು ಹೋದಾಗ ಚಾಕುವಿನಿಂದ ಚುಚ್ಚಿ ರಕ್ತಗಾಯ ಪಡಿಸಿರುತ್ತಾರೆಂದು ದೂರಿದ್ದರ ಮೇರೆಗೆ ಭದ್ರಾವತಿ ಹಳೆ ನಗರ ಪೊಲೀಸರು ಸಿದ್ದಾಪುರ ಹೊಸೂರು ಗ್ರಾಮದ ಜಹೀರ್ (27) ಮತ್ತು ಎಕಿನ್ಸಾ ಕಾಲೋನಿಯ ಅಸ್ಲಾಂ ಅಲಿಯಾಸ್ ಅಸ್ಲಿ (29) ಅವರನ್ನು, ರಿಜ್ವಾನ್  ನೀಡಿದ ದೂರಿನ ಮೇರೆಗೆ ಹೊಸಮನೆಯ ಮಂಜುನಾಥ್ (24)  ಮತ್ತು ಅಶೋಕ್ (22) ಅವರನ್ನು ದಸ್ತಗಿರಿ ಮಾಡಿದ್ದಾರೆ.

 ಒಟ್ಟು 3 ಪ್ರಕರಣಗಳು ದಾಖಲಾಗಿವೆ.

  ಮೂರು ಪ್ರಕರಣಗಳಲ್ಲಿ ದಸ್ತಗಿರಿ ಮಾಡಲಾದ ಆರೋಪಿಗಳನ್ನು  ನ್ಯಾಯಾಂಗ ಬಂಧನಕ್ಕೆ ಹಾಜರ್‌ಪಡಿಸಲಾಗಿದೆ.