ಬೈಕ್ ಬ್ಯಾಗ್ ನಲ್ಲಿಟ್ಟ ಹಣ ದೋಚಿದ ಖದೀಮ...!

ಬೈಕ್ ಬ್ಯಾಗ್ ನಲ್ಲಿಟ್ಟ ಹಣ ದೋಚಿದ ಖದೀಮ...!
ದಾವಣಗೆರೆ: ಬೈಕ್  ಬ್ಯಾಗ್ ನಲ್ಲಿ ಇಟ್ಟಿದ್ದ  4.5 ಲಕ್ಷ ರೂಪಾಯಿ ಹಣವನ್ನು ಹಾಡಹಗಲೇ ನೋಡು ನೋಡುತಿದ್ದಂತೆ ದೋಚಿ ಪರಾರಿಯಾಗಿರುವ ಘಟನೆ ಜಗಳೂರು ಪಟ್ಟಣದ ಕೆನರಾ ಬ್ಯಾಂಕ್ ಬಳಿ ನಡೆದಿದೆ. 
ಹನುಮಂತಪುರ ಗ್ರಾಮದ ಕೋಟ್ರಶ್ ಎಂಬವವರೇ ಹಣ ಕಳೆದುಕೊಂಡ ವ್ಯಕ್ತಿ. ಬ್ಯಾಂಕ್ ನಲ್ಲಿ ಲೋನ್ ಕಟ್ಟಲು 4.5. ಲಕ್ಷ ರೂಪಾಯಿ ಹಣ ತಂದಿದ್ದರು. ಆದ್ರೆ, 5 ಲಕ್ಷ ರೂಪಾಯಿ ಸಾಲ ಇದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ. 
ಆಗ 50 ಸಾವಿರ ರೂ. ಕಡಿಮೆಯಿದೆ. ಮನೆಗೆ ಹೋಗಿ ತರುತ್ತೇನೆ ಎಂದು ತನ್ನ ಬೈಕ್ ನ ಬ್ಯಾಗ್ ನಲ್ಲಿ  4.5 ಲಕ್ಷ ರೂಪಾಯಿ ಹಣ ಇಟ್ಟು ಬೈಕ್ ಹತ್ತುವ ವೇಳೆ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿ ಕ್ಷಣಾರ್ಧದಲ್ಲಿ ಹಣ ದೋಚಿ ಪರಾರಿಯಾಗಿದ್ದನೆ. 
ಈ‌ ದೃಶ್ಯ ಸಿಸಿ ಟಿವಿ ಕ್ಯಾಮರದಲ್ಲಿ ಸೆರೆಯಾಗಿದೆ. ಕಳೆದ ನಾಲ್ಕು ತಿಂಗಳ ಹಿಂದೆ ಇದೇ ರೀತಿ ಘಟನೆ ನಡೆದಿದ್ದು, ಮತ್ತೆ ನಡೆದಿರುವುದು ಜನರಲ್ಲಿ ಭೀತಿ ಹುಟ್ಟಿಸಿದೆ. 
ಜಗಳೂರು ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.