ಬದುಕಿಗೆ ಛಲ ಮುಖ್ಯ: ಸಾಧನೆಗೆ ಛಲವೇ ಅಡಿಪಾಯ

ಬದುಕಿಗೆ ಛಲ ಮುಖ್ಯ: ಸಾಧನೆಗೆ ಛಲವೇ ಅಡಿಪಾಯ

ಶಿವಮೊಗ್ಗ:   "ಜ್ಞಾನ ಅಥವಾ ತಿಳುವಳಿಕೆ ಎಂಬುದು ಈ ಕಾಲಕ್ಕೆ ಹೆಚ್ಚು ಪ್ರಚಲಿತವಾದ ಪದ. ನಿತ್ಯ ನೂತನವಾದುದು. ಜಗತ್ತು ವೇಗವಾಗಿ ಬದಲಾಗುತ್ತಿದೆ. ಈ ಬದಲಾವಣೆಗೆ ನಾವು ಬೌದ್ಧಿಕವಾಗಿ ಸಿದ್ಧರಾಗಬೇಕು.  ಪ್ರತಿ ದಿನವೂ ಹೊಸ ಹೊಸ ಜ್ಞಾನ ಸಾಧ್ಯತೆಗಳಿಗೆ ವಿದ್ಯಾರ್ಥಿಗಳು ತೆಗೆದುಕೊಳ್ಳಬೇಕು.  ಬದುಕಿಗೆ ಛಲ ಮುಖ್ಯ ; ಸಾಧನೆಗೆ ಛಲವೇ ಅಡಿಪಾಯ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿಯ ಕುಲಸಚಿವರಾದ ಪ್ರೊ.ಹೂವಯ್ಯ ಗೌಡ  ಹೇಳಿದರು.

     ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ 2021-22 ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ ಕಾರ್ಯಚಟುವಟಿಕೆಗಳ ಸಮಾರೋಪ ಸಮಾರಂಭ ನೇರವೇರಿತು. ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಮಾತನಾಡಿದರು.

ಮುಖ್ಯ ಅತಿಥಿಗಳಾಗಿದ್ದ ಪದ್ಮಶ್ರೀ ಪುರಸ್ಕೃತ ಅಂತರ ರಾಷ್ಟ್ರೀಯ ಕ್ರೀಡಾಪಟು ಕೆ.ವೈ ವೆಂಕಟೇಶ್ ಯತಿರಾಜ್  ಮಾತನಾಡಿ,   ಭಾರತೀಯರು ವಿಶ್ವಮಟ್ಟದಲ್ಲಿ ಉನ್ನತ ಸಾಧನೆ ಮಾಡುತ್ತಿದ್ದಾರೆ. ಸಾಧನೆಗೆ ಪರಿಶ್ರಮವೇ ಮುಖ್ಯ. ಅಂಗವೈಕಲ ಸಾಧನೆಗೆ ಅಡ್ಡಿ ಎಂದು ಭಾವಿಸಬಾರದು.   ಎಲ್ಲದಕ್ಕೂ ಆತ್ಮ ವಿಶ್ವಾಸ ಬೇಕು. ಅದಿಲ್ಲದ ಬದುಕು ಬರಡು" ಎಂದರು.

ಮಲೆನಾಡಿನ ಉದಯೋನ್ಮಖ ಪ್ರತಿಭಾವಂತ ಹಿರಿತೆರೆ ಹಾಗೂ ಕಿರುತೆರೆ ನಟಿಯಾಗಿರುವ ಕು.ಸಮೀಕ್ಷಾ ರಾಮ್ ಅವರು ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.  

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ. ಎಂ.ಕೆ.ವೀಣಾ  , "ಯಾವ ಸಾಧನೆಯು ಹೂವಿನ ಹಾಸಿಗೆಯಲ್ಲ. ಒಂದು ಸ್ಥಾನಕ್ಕೆ  ಬರಬೇಕಾದ ನಿರಂತರ ಪರಿಶ್ರಮಬೇಕು. ಬರೀ ಕನಸು ಕಾಣುವುದಲ್ಲ. ಹಗಲು ಕನಸುಗಳಿಂದ ಯಾವುದೇ ಕಾರ್ಯ ಸಾಧಿತವಾಗುವುದಿಲ್ಲ. ಅದನ್ನು ನನಸಾಗಿಸುವಲ್ಲಿ ಶ್ರಮ ಪಡಬೇಕು" ಎಂದು ನುಡಿದರು. 

  ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾದ ಡಾ. ರಾಜೇಶ್ವರಿ ಎನ್., ಕ್ರೀಡಾ ಸಮಿತಿ ಸಂಚಾಲಕ ಡಾ. ಕುಂದನ್ ಬಸವರಾಜ್, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಶಿವಮೂರ್ತಿ, ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ. ಗಿರಿಧರ ಕೆ.ವಿ., ವಿದ್ಯಾರ್ಥಿ ಪ್ರತಿನಿಧಿಗಳಾದ  ಪ್ರಜ್ವಲ್ ಎಚ್., ಲಂಕೇಶ್, ರುದ್ರೇಶ್ ಜಿ.ಬಿ, ರವಿ ಕಿರಣ್ ಕೆ., ಉಪಸ್ಥಿತರಿದ್ದರು.

 ಈ ಸಂದರ್ಭದಲ್ಲಿ ರ್‍ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ವಿವಿಧ ಕ್ರೀಡಾ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.