ಬಂಧಿತ ಶಂಕಿತ ಉಗ್ರರಿಂದ ಸಾಕಷ್ಟು ಸಾಕ್ಷ್ಯ ಲಭ್ಯ: ಎಸ್ ಪಿ

ಬಂಧಿತ ಶಂಕಿತ ಉಗ್ರರಿಂದ ಸಾಕಷ್ಟು ಸಾಕ್ಷ್ಯ ಲಭ್ಯ: ಎಸ್ ಪಿ
ಬಂಧಿತ ಶಂಕಿತ ಉಗ್ರರಿಂದ ಸಾಕಷ್ಟು ಸಾಕ್ಷ್ಯ ಲಭ್ಯ: ಎಸ್ ಪಿ
ಬಂಧಿತ ಶಂಕಿತ ಉಗ್ರರಿಂದ ಸಾಕಷ್ಟು ಸಾಕ್ಷ್ಯ ಲಭ್ಯ: ಎಸ್ ಪಿ
ಬಂಧಿತ ಶಂಕಿತ ಉಗ್ರರಿಂದ ಸಾಕಷ್ಟು ಸಾಕ್ಷ್ಯ ಲಭ್ಯ: ಎಸ್ ಪಿ
ಶಿವಮೊಗ್ಗ: ಐಎಸ್ಐಎಸ್ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇರೆಗೆ ಬಂಧಿತರಾಗಿರುವ  ತೀರ್ಥಹಳ್ಳಿಯ ಸೊಪ್ಪು ಗುಡ್ಡೆಯ ಶಾರೀಕ್, ಮಂಗಳೂರಿನ ಮಾಜ್ ಮುನೀರ್ ಮತ್ತು ಶಿವಮೊಗ್ಗದ ಸಯ್ಯದ್ ಯಾಸೀನ್ ಅವರು ನೀಡಿದ ಮಾಹಿತಿ‌ ಮೇರೆಗೆ ೧೧ ಸ್ಥಳ ಗಳಲ್ಲಿ ಏಕಕಾಲಕ್ಕೆ ದಾಳಿ‌ ನಡೆಸಿ  ಹಲವಾರು ಸಾಕ್ಷ್ಯ ಸಂಗ್ರಹಿಸಲಾಗಿದೆ.  ಬಂಧಿತರನ್ನು 7 ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆದಿದ್ದು ವಿಚಾರಣೆ ಮುಂದುವರೆಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಬಿ. ಎಂ. ಲಕ್ಷ್ಮೀ ಪ್ರಸಾದ್ ಹೇಳಿ ದರು.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದ ಅವರು,  ಒಟ್ಟು 14 ಮೊಬೈಲ್‌ಗಳು ಮತ್ತು 1 ಡಾಂಗಲ್,  2  ಲ್ಯಾಪ್‌ಟಾಪ್‌ಗಳು, 1 ಪೆನ್‌ಡ್ರೈವ್ ಹಾಗೂ ಇತರೆ ಎಲೆಕ್ಟ್ರಾನಿಕ್ಸ್ ಗ್ಯಾಜೆಟ್ಸ್‌ಗಳು,
ಬಾಂಬ್ ಸ್ಫೋಟ ಮಾಡಿದ ಸ್ಥಳದಲ್ಲಿ ದೊರಕಿದ ಛಿದ್ರಗೊಂಡ ಬಾಂಬ್‌ನ ಅವಶೇಷಗಳು ,
ಬಾಂಬ್ ತಯಾರಿಸಲು
ವೈರ್‌ಗಳು, ಬ್ಯಾಟರಿಗಳು, ಸ್ಫೋಟಕ ವಸ್ತುಗಳು ಇತ್ಯಾದಿ , ಅರೆಬರೆ ಬೇಕಾದ ಸಾಮಗ್ರಿಗಳು - ರಿಲೆ ಸರ್ಕಿಟ್, ಬಲ್ಬಗಳು, ಮ್ಯಾಚ್ ಬಾಕ್ಸ್‌ಗಳು,
ಸುಟ್ಟಿರುವ ಭಾರತದ ತ್ರಿವರ್ಣ ರಾಷ್ಟ್ರ ಧ್ವಜ,
ಪ್ರಮುಖ ದಸ್ತಾವೇಜುಗಳು ಮತ್ತು ದಾಖಲಾತಿಗಳು ,
 ಆರೋಪಿತ ಶಾರೀಕ್ ಈತನು ಕೃತ್ಯಕ್ಕೆ ಬಳಸಿದ್ದ ಒಂದು ಮಾರುತಿ ರಿಡ್ಜ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ವಿದ್ಯಾಭ್ಯಾಸ ಮಾಡುವಾಗಲೇ ಇವರೆಲ್ಲರೂ ಪರಿಚಿತರಾಗಿದ್ದರು. ನಿಜವಾದ ಸ್ವಾತಂತ್ರ್ಯ ಸಿಗಬೇಕೆಂದರೆ  ಭಾರತದ ಈಗಿನ ವ್ಯವಸ್ಥೆಯ ವಿರುದ್ಧ ಖಿಲಾಪತ್ ಸ್ಥಾಪಿಸಬೇಕೆಂದು ಯೋಚಿಸಿದ್ದರು.  ಐಎಸ್ ಐಎಸ್ ಇದೇ ವಿಚಾರಧಾರೆಯಲ್ಲಿ ಕೆಲಸ ನಿರ್ವಹಿಸುತ್ತಿರುವುದರಿಂದ  ಅದನ್ನು ಬೆಂಬಲಿಸಿದ್ದರು ಎಂದರು. 
ಖಾಫೀರ್ ಗಳ ವಿರುದ್ಧ ಜಿಹಾದ್ ಕೆಲಸವನ್ನು ಮಾಡಲು ಇಚ್ಚಿಸಿದ್ದರು.  ಅದಕ್ಕೋಸ್ಕರ ಸ್ಫೋಟಕ ತಯಾರಿಸಲು ಸಾಮಗ್ರಿಗಳು ಸಂಗ್ರಹಿಸಿಟ್ಟುಕೊಂಡಿದ್ದರು. ವಿವಿದ ಆ್ಯಪ್ ಮತ್ತು ಚಾನಲ್ ಮೂಲಕ ಪ್ರಚಾರ ಸಾಮಗ್ರಿ ಸ್ವೀಕರಿಸಿದ್ದರು ಎಂದರು. 
ಶಿವಮೊಗ್ಗದ ತುಂಗೆಯ ದಡದಲ್ಲಿರುವ ಕೆಮ್ಮಣ್ಣಗುಂಡಿ ಎಂಬಲ್ಲಿ ಬಾಂಬನ್ನು ಪ್ರಾಯೋಗಿಕವಾಗಿ ತಯಾರಿಸಿ ಸ್ಪೋಟಕ ಸಿದ್ದರು.  ಮುಂದಿನ ದಿನಗಳಲ್ಲಿ ಜಿಹಾದ್ ಮಾಡಲು ತಯಾರಾಗಿದ್ದರು ಎಂದರು.