ಪ್ರವಾಸಕ್ಕೆಂದು ಕರೆತಂದು ಬಾಲಕಿ ಮೇಲೆರಗಿದ ಯುವಕರು

ಶಿವಮೊಗ್ಗ,ಆ.22 :  ಸಾಗರದ ಯುವಕರಿಬ್ಬರು ಬಾಲಕಿಯನ್ನು ಪ್ರವಾಸದ ನೆಪ ದಲ್ಲಿ ಶಿವಮೊಗ್ಗಕ್ಕೆ ಕರೆತಂದು ಇಲ್ಲಿ ಅಲೆದಾಡಿಸಿ ಕೊನೆಗೆ ಮತ್ತು ಬರುವ  ಔಷಧ ನೀಡಿ ಅತ್ಯಾಚಾರ ಎಸಗಿದ ಘಟನೆ ರದಿಯಾಗಿದೆ. 

ಅಜಯ್ (32 ) ಮತ್ತು ಶಹಬಾಜ್ (26 ) ಅತ್ಯಾಚಾರ ಮಾಡಿದವರು. ಇವರಿಬ್ಬರ ಮೇಲೆ ಪೊಸ್ಕೊ  ಮತ್ತು ಅಟ್ರಾಸಿಟಿ ಪ್ರಕರಣ ದಾಖಲಾಗಿದ್ದು, ಇಬ್ಬರೂ ನಾಪತ್ತೆ ಯಾಗಿದ್ದಾರೆ.ಪರಿಶಿಷ್ಟ ಕುಟುಂಬಕ್ಕೆ ಸೇರಿದ, ಶಾಲೆಗೆ ಹೋಗುವ  ಬಾಲಕಿಯನ್ನು ಇವರಿಬ್ಬರು ಪರಿಚಯ ಮಾಡಿಕೊಂಡಿದ್ದರು. ಆಕೆಯು ಅಣ್ಣ ಎಂಬ ನೆಲೆಯಲ್ಲಿ ಇವರ ಸ್ನೇಹ ಬೆಳೆಸಿಕೊಂಡಿದ್ದಳು. ಇದನ್ನೇ ಬಳಸಿಕೊಂಡ ಇವರು  ಆ. 19 ರಂದು ಶಿವಮೊಗ್ಗ ಸುತ್ತಮುತ್ತದ ಪ್ರದೇಶಕ್ಕೆ ಪ್ರವಾಸಕ್ಕೆಂದು ಬಾಲಕಿಯನ್ನು ಕರೆತಂದು ಸುತ್ತಾಡಿಸಿ ಮತ್ತು ಬರಿಸಿ ಕೊನೆಗೆ ಸುರಕ್ಷಿತ ಜಾಗದಲ್ಲಿ ಈಕೆಯ ಮೇಲೆರಗಿದ್ದಾರೆ.  

ನಿದ್ದೆಯ ಮಂಪರಿನಿಂದ ಹೊರಬಂದ ಬಾಲಕಿಗೆ ನೋವು ಶುರುವಾದಾಗ  ಕಣ್ಣೀರು ಹಾಕಿ ಯಾಕೆ ಹೀಗೆ ಮಾಡಿದ್ದೆಂದು ಪ್ರಶ್ನಿಸಿದ್ದಾಳೆ. ಅವಳನ್ನು ಸಂತೈಸಿ ನಂತರ  ಊರಿಗೆ ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ. ಯಾವ ಕಾರಣಕ್ಕೂ ವಿಷಯವನ್ನು ತಿಳಿಸಬಾರದೆಂದು ತಾಕೀತು ಮಾಡಿದ್ದರು. ಆದರೆ  ಬಾಲಕಿಗೆ ನೋವು ಹೆಚ್ಚಾಗಿದ್ದರಿಂದ ಆಕೆಯ ಚಲನವಲನವನ್ನು ಮನೆಯವರು ಗಮನಿಸಿ ವಿಚಾರಿಸಿದಾಗ  ನಿಜ ವಿಷಯ ಬಾಯ್ಬಿಟ್ಟಿದ್ದಾಳೆ. ಬಳಿಕ ಸೋಮವಾರ ಸಂಜೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಮಧ್ಯೆ ಇಬ್ಬರೂ ನಾಪತ್ತೆಯಾಗಿದ್ದು, ಆರೋಪಿಗಳ ಪತ್ತೆಗೆ ತಂಡ ರಚಿಸಲಾಗಿದೆ.