ಪೋಕ್ಸೋ ಆರೋಪಿಯ ಮೇಲೆ ಅತ್ಯಾಚಾರದ ಆರೋಪ

ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣು

ಪೋಕ್ಸೋ ಆರೋಪಿಯ ಮೇಲೆ ಅತ್ಯಾಚಾರದ ಆರೋಪ

ಶಿಕಾರಿಪುರ: ಸುಳ್ಳು ಪ್ರಕರಣ ದಾಖಲಿಸಿ ತನಗೆ ವಿನಾಕಾರಣ ಕಿರುಕುಳ ಕೊಡುತ್ತಿದ್ದಾರೆ ಎಂದು ಡೆಟ್‌ನೋಟ್ ಬರೆದಿಟ್ಟು ಯುವಕನೋರ್ವ ಆತ್ಮಹತ್ಯೆಗೆ ಮಾಡಿಕೊಂಡ ಘಟನೆ ತಾಲೂಕಿನ ಹಿತ್ತಲ ಸಮೀಪದ ಹುಣಸೇಕೊಪ್ಪ ಗ್ರಾಮದಲ್ಲಿ ಗುರುವಾರ ನಡೆದಿದೆ.

ಎಸ್.ವಿ.ಮದನ್‌ಕುಮಾರ್ (24) ಆತ್ಮಹತ್ಯೆ ಮಾಡಿಕೊಂಡ ಯುವಕ. ಗ್ರಾಮದ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಜಮೀನಿಗೆ ತೆರಳುವ ಸಾರ್ವಜನಿಕರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ಸಮಕ್ಷಮದಲ್ಲಿ ಮಹಜರು ನಡೆಸುವಾಗ ಡೆತ್‌ನೋಟ್ ಪತ್ತೆಯಾಗಿದೆ ಅದನ್ನು ಜನರ ಎದುರೆ ಓದಿ ಹೇಳುವಂತೆ ಒತ್ತಡ ಹೇರಿದ ಪರಿಣಾಮ ಪೊಲೀಸರು ಬಹಿರಂಗವಾಗಿ ಓದಿದ್ದಾರೆ. ಡೆತ್‌ನೋಟ್‌ನಲ್ಲಿ ಹೆಸರಿಸಿರುವ ವ್ಯಕ್ತಿಗಳ ಬಂಧಿಸಬೇಕು ನಂತರವೆ ಶವಸಂಸ್ಕಾರ ಮಾಡುತ್ತೇವೆ ಎಂದು ಒತ್ತಾಯಿಸಿ ಗ್ರಾಮಸ್ಥರು ಗ್ರಾಮಾಂತರ ಪೊಲೀಸ್ ಠಾಣೆ ಎದುರು ಜಮಾವಣೆಗೊಂಡಿದ್ದರು. ಆತ್ಮಹತ್ಯೆಗೆ ಪ್ರಚೋದನೆ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಭರವಸೆ ನೀಡಿದ ನಂತರ ಜನರು ಗ್ರಾಮಕ್ಕೆ ತೆರಳಿದರು.

ಡೆತ್‌ನೋಟ್:

ಹಿತ್ತಲ ಗ್ರಾಮದ ಪಿ.ಆರ್.ಮಂಜಪ್ಪ ಪತ್ನಿ ಗೀತಮ್ಮ ಸೇರಿಕೊಂಡು ಅವರ ಮಗಳು ಕರಿಬಸಮ್ಮ ಮೇಲೆ ತಾನು ಅತ್ಯಾಚಾರ ಮಾಡಿರುವುದಾಗಿ ಸುಳ್ಳು ಪ್ರಕರಣ ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ೨೫ ಲಕ್ಷ ರೂ. ಹಣ ನೀಡಬೇಕು ಎಂದು ಆಗಾಗ್ಗೆ ಒತ್ತಾಯಿಸುತ್ತಿದ್ದರು. ಗುರುರಾಜ್, ಕಿರಣ, ಶಿವಪ್ಪ ಎಂಬುವರು ನನ್ನ ಅಪಹರಣ ಮಾಡಿ ಕೊಲೆಗೆ ಯತ್ನಿಸಿದ್ದರು. ಮನೆಯ ಹತ್ತಿರ ಆಗಮಿಸಿ ಮಗಳಿಗೆ ಕಿರುಕುಳ ನೀಡುತ್ತಿದ್ದಾನೆ ಮತ್ತು ಜಾತಿ ನಿಂದನೆ ಮಾಡುತ್ತಿದ್ದಾನೆ ಎಂದು ಪುನಃ ಪ್ರಕರಣ ದಾಖಲಿಸುತ್ತೇನೆ ಎಂದು ಹೆದರಿಸುತ್ತಿದ್ದರು. ನನ್ನ ಎಲ್ಲ ಆರೋಪಕ್ಕೆ ಕಾಲ್ ರೆಕಾರ್ಡ್ ಮೊಬೈಲ್‌ನಲ್ಲಿ ಇದೆ. ನನ್ನ ಸಾವಿಗೆ ಕಾರಣರಾದವರ ವಿರುದ್ಧ ಶಿಕ್ಷೆ ನೀಡಬೇಕು ಎಂದು ಪತ್ರದಲ್ಲಿ ಬರೆಯಲಾಗಿದೆ.

ಪ್ರಕರಣ:

ಆತ್ಮಹತ್ಯೆ ಮಾಡಿಕೊಂಡ ಯುವಕನ ವಿರುದ್ಧ ೨೦೧೯ರಲ್ಲಿ ಫೋಕ್ಸೊ ಪ್ರಕರಣ ದಾಖಲಾಗಿದ್ದು ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಪೂರ್ಣಗೊಂಡಿದ್ದು ತೀರ್ಪು ಹೊರಬರಬೇಕಿದೆ. ಈ ಹಂತದಲ್ಲಿ ಯುವಕ ಆತ್ಮಹತ್ನೆಗೆ ಶರಣಾಗಿದ್ದು ಪ್ರಕರಣ ಯಾವ ತಿರುವು ಪಡೆದುಕೊಳ್ಳುತ್ತದೆ ಎನ್ನುವ ಕುತೂಹಲ ಜನರಲ್ಲಿದೆ.