ಪೊಕ್ಸೋ ಆರೋಪಿಗೆ ಒಂದು ವರ್ಷ ಶಿಕ್ಷೆ

ಪೊಕ್ಸೋ ಆರೋಪಿಗೆ  ಒಂದು ವರ್ಷ ಶಿಕ್ಷೆ

ಶಿವಮೊಗ್ಗ:  ನಡೆದುಕೊಂಡು ಹೋಗುತ್ತಿದ್ದ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಗೆ 1 ವರ್ಷ ಸಾಧಾರಣ ಕಾರಾಗೃಹ ಶಿಕ್ಷೆ ಮತ್ತು 30,000  ರೂ ದಂಡ ವಿಧಿಸಿ ಜಿಲ್ಲಾ ಪೊಕ್ಸೊ ನ್ಯಾಯಾಲಯ ಆದೇಶಿಸಿದೆ.

 ಇದೇ ವರ್ಷದ ಎ. 28 ರಂದು  ಸಾಗರ ತಾಲ್ಲೂಕಿನ ಜೋಗದಲ್ಲಿ ಈ ಕೃತ್ಯವನ್ನು ಅಲ್ಲಿನ ವಾಸಿ  ವಿನೋದ್ (19 )  ನಡೆಸಿದ್ದನು. ಈ ಬಗ್ಗೆ ನೀಡಿದ ದೂರಿನ ಮೇರೆಗೆ ಜೋಗ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ತನಿಖಾಧಿಕಾರಿ ಎಸ್ ಐ ನಿರ್ಮಲಾ ತನಿಖೆಯನ್ನು ಕೈಗೊಂಡು ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶೆ ಲತಾ  ಶುಕ್ರವಾರ ತೀರ್ಪು ನೀಡಿದ್ದಾರೆ.

 ದಂಡವನ್ನು ಕಟ್ಟಲು ವಿಫಲನಾದರೆ ಹೆಚ್ಚುವರಿಯಾಗಿ ೧೦ ತಿಂಗಳ ಕಾಲ ಸಾದಾ ಕಾರಾವಾಸ ಶಿಕ್ಷೆ ಅನುಭವಿಸಲು ಸೂಚಿಸಿದ್ದಾರೆ.