ಪಡಿತರ ಅಕ್ಕಿ ಅಕ್ರಮ ಸಾಗಣೆ : 6 ಜನರ ಸೆರೆ,168 ಕ್ವಿಂಟಾಲ್ ಅಕ್ಕಿ ವಶ

ಪಡಿತರ ಅಕ್ಕಿ ಅಕ್ರಮ ಸಾಗಣೆ : 6 ಜನರ ಸೆರೆ,168  ಕ್ವಿಂಟಾಲ್ ಅಕ್ಕಿ ವಶ

ಶಿವಮೊಗ್ಗ: ಇಲ್ಲಿನ ಗಾಡಿಕೊಪ್ಪದಲ್ಲಿ ಖಾಸಗಿಯವರಿಗೆ  ಸೇರಿದ ಗೋದಾಮಿನಿಂದ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ  ಮಾರಾಟ ಮಾಡಲು ಅನಧಿಕೃತವಾಗಿ ಸಂಗ್ರಹಣೆ ಮಾಡಿ ಲಾರಿಗಳಲ್ಲಿ ಸಾಗಾಣಿಕೆ ಮಾಡಲು ಯತ್ನಿಸುತ್ತಿದ್ದ ವೇಳೆ ತುಂಗಾನಗರ ಪೊಲೀಸರು ದಾಳಿ ನಡೆಸಿ 6 ಜನರನ್ನು ಬಂಧಿಸಿದ್ದಾರೆ. 

 168 ಕ್ವಿಂಟಾಲ್ ಅಕ್ಕಿಯನ್ನು ಈ ವೇಳೆ  ವಶಕ್ಕೆ ಪಡೆಯಲಾಗಿದೆ.

  ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ಆಹಾರ ನಿರೀಕ್ಷಕರೊಂದಿಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು. ಆರೋಪಿಗಳಾದ  ಕಸ್ತೂರ ಬಾ ರಸ್ತೆಯ ಕಾರ್ತಿಕೇಯನ್ ಅಲಿಯಾಸ್  ಕಾರ್ತಿಕ (53 ),  ಕಾಚಿನಕಟ್ಟೆ ನಿವಾಸಿ ಗೋಪಿ (23 ), ಸೀತಾರಾಮ (40 ),  ಮತ್ತಿಘಟ್ಟದ ಕಾಂತರಾಜ (32 ),  ನ್ಯೂಮಂಡ್ಲಿಯ ಯುವರಾಜ (28 ), ಭದ್ರಾವತಿಯ ದೇವರನರಸೀಪುರ ನಿವಾಸಿಯ ಶ್ರೀನಿಧಿ (20 ) ಅವರನ್ನು ದಸ್ತಗಿರಿ ಮಾಡಿದ್ದಾರೆ. 

ಆರೋಪಿತರಿಂದ ಅಂದಾಜು ಮೌಲ್ಯ 3,70,000/-  ರೂ ಗಳ ಒಟ್ಟು 338 ಚೀಲಗಳಲ್ಲಿ ತುಂಬಿದ್ದ 168 ಕ್ವಿಂಟಾಲ್ ತೂಕದ ಅಕ್ಕಿ, 2 ಕ್ಯಾಂಟರ್ ವಾಹನಗಳು, 2 ಎಲೆಕ್ಟ್ರಾನಿಕ್ ತೂಕ ಮಾಡುವ ಯಂತ್ರ ಮತ್ತು ೧ ಚೀಲಗಳನ್ನು ಹೊಲಿಗೆ ಯಂತ್ರ ವನ್ನು ಅಮಾನತುಪಡಿಸಿಕೊಳ್ಳಲಾಗಿದೆ.