ನ. 28: ರಂಗಮಂದಿರದಲ್ಲಿ ಭಗವಾನ್ ಬಿರ್ಸಾ ಮುಂಡಾ ಜನ್ಮದಿನ

ನ. 28: ರಂಗಮಂದಿರದಲ್ಲಿ ಭಗವಾನ್ ಬಿರ್ಸಾ ಮುಂಡಾ ಜನ್ಮದಿನ

ಶಿವಮೊಗ್ಗ , ನ. 22 : ಕರ್ನಾಟಕ ಅಲೆಮಾರಿ ಹಕ್ಕಿಪಿಕ್ಕಿ ಬುಡಕಟ್ಟು ಸಂರಕ್ಷಣಾ ಸಮಿತಿಯ ಜಿಲ್ಲಾ ಶಾಖೆ ವತಿಯಿಂದ ನ. 28 ರಂದು ಕುವೆಂಪು ರಂಗಮಂದಿರದಲ್ಲಿ ಭಗವಾನ್ ಬಿರ್ಸಾ ಮುಂಡಾರವರ 147 ನೇ ಜನ್ಮದಿನ ಆಚರಿಸಲಾಗುವುದು ಎಂದು ಸಮಿತಿಯ ರಾಜ್ಯಾಧ್ಯಕ್ಷ ಜಗ್ಗು ಹೇಳಿದರು.

ಅವರು ಇಂದು ಪ್ರೆಸ್ ಟ್ರಸ್ಟ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿರ್ಸಾ ಮುಂಡಾ ಅವರು ಬ್ರಿಟೀಷರ ವಿರುದ್ಧ ಹೋರಾಡಿದ ವೀರರು.

ಅಂದಿನ ಬಂಗಾಳ ಪ್ರೆಸಿಡೆನ್ಸಿ ಭಾಗದಲ್ಲಿ ಬುಡಕಟ್ಟು ಸಮುದಾಯದ ಪರವಾಗಿ ಬ್ರಿಟೀಷರ ವಿರುದ್ಧ ದಂಗೆ ಎದ್ದವರು. ಇವರ ಪ್ರತಿರೋಧವನ್ನು ಬ್ರಿಟೀಷರು ತಾಳದೇ ಅವರನ್ನು ಬಂಧಿಸಿ ರಾಂಚಿಯಲ್ಲಿ ಹತ್ಯೆ ಮಾಡಿದರು. ಆಗ ಅವರಿಗೆ ಕೇವಲ 25 ವರ್ಷವಾಗಿತ್ತು.

ಅವರು ಬದುಕಿರುವವರೆಗೂ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದರು. ಬುಡಕಟ್ಟು ಸಮುದಾಯದ ಇಂತಹ ದಾರ್ಶನಿಕ ವ್ಯಕ್ತಿಯ ಜನ್ಮದಿನವನ್ನು ನಾವು ಅಲೆಮಾರಿ ಬುಡಕಟ್ಟು ಸಮುದಾಯದ ಸ್ವಾಭಿಮಾನದ ದಿನವಾಗಿ ಆಚರಿಸುತ್ತಿದ್ದೇವೆ ಎಂದರು.

ನ. 28 ರಂದು ಬೆಳಗ್ಗೆ 11 ಗಂಟೆಗೆ ಸೈನ್ಸ್ ಮೈದಾನದಿಂದ ಕುವೆಂಪು ರಂಗಮಂದಿರದವರೆಗೆ ಮೆರವಣಿಗೆ ನಡೆಯಲಿದೆ.

ಈ ಮೆರವಣಿಗೆಯಲ್ಲಿ ಬುಡಕಟ್ಟು ಸಮುದಾಯವಾದ ಹಕ್ಕಿಪಿಕ್ಕಿಯ ಸಾವಿರಾರು ಜನ ಭಾಗವಹಿಸಲಿದ್ದಾರೆ. ನಂತರ ಮಧ್ಯಾಹ್ನ 12 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಸಭಾ ಕಾರ್ಯಕ್ರಮ ಹಾಗೂ ಜನ್ಮದಿನ ಆಚರಿಸಲಾಗುವುದು ಎಂದರು.

  ಕಾರ್ಯಕ್ರಮದಲ್ಲಿ ಶಿವಮೊಗ್ಗದ ಮಾಜಿ ಶಾಸಕ ಕೆ. ಬಿ. ಪ್ರಸನ್ನಕುಮಾರ್, ಜಿಲ್ಲಾಧಿಕಾರಿ ಸೆಲ್ವಮಣಿ. ಎಸ್ ಪಿ ಮಿಥುನಕುಮಾರ್, ದಸಂಸ ರಾಜ್ಯ ನಾಯಕ ಮಾವಳ್ಳಿ ಶಂಕರ್, ಜಿಲ್ಲಾ ದಸಂಸದ ನಾಯಕ ಹಾಲೇಶಪ್ಪ ಮೊದಲಾದವರು ಪಾಲ್ಗೊಳ್ಳ್ಲುವರು  ಎಂದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಅಂಜನಪ್ಪ, ಶಿವರಾಜ್, ಪ್ರಕಾಶ್, ರಾಜವೇಲು, ಸಂಜೀಲಾ, ಮೀಣು ಮೊದಲಾದವರಿದ್ದರು.