ನ. 25 : ಸದ್ದು! ವಿಚಾರಣೆ ನಡೆಯುತ್ತಿದೆ” ಚಿತ್ರ ಬಿಡುಗಡೆ

ನ. 25 : ಸದ್ದು! ವಿಚಾರಣೆ ನಡೆಯುತ್ತಿದೆ” ಚಿತ್ರ ಬಿಡುಗಡೆ

ಶಿವಮೊಗ್ಗ:ಸದ್ದು! ವಿಚಾರಣೆ ನಡೆಯುತ್ತಿದೆ ಒಂದು ಸಸ್ಪೆನ್ಸ್ ಥ್ರಿಲ್ಲರ್ ಕನ್ನಡ ಸಿನಿಮಾ ನ. 25 ರಿಂದ ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ಬೆಂಗಳೂರಿನ ಎಂಎ. ಎಂ. ಸಿನಿಮಾದವರು ಇದನ್ನು ನಿರ್ಮಿಸಿದ್ದು, ಸುರಭಿ ಲಕ್ಷ್ಮಣ್ ನಿರ್ಮಾಪಕರಾಗಿದ್ದರೆ ಎಂದು ಸಿನಿಮಾ ನಟ ಶಿವಮೊಗ್ಗ ರಾಘು ಹೇಳಿದರು.

ಪ್ರೆಸ್ ಟ್ರಸ್ಟಿನಲ್ಲಿ  ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಡಿದ ಅವರು, “ಸಕಲೇಶಪುರದಲ್ಲಿ ಮಹಿಳಾ ಪೊಲೀಸಳೊಬ್ಬಳು ಪ್ರೇಮಿಯ ಜೊತೆ  ಕಾಣೆಯಾಗಿ ದೊಡ್ಡ ಸುದ್ದಿಯಾಗುತ್ತದೆ, ಪೊಲೀಸ್ ಇಲಾಖೆಯು ಈ ಕೇಸ್‌ನ್ನು ಪೃಥ್ವಿರಾಜ್ ಎಂಬ ದಕ್ಷ ಪೊಲೀಸ್ ಅಧಿಕಾರಿಗೆ ವಹಿಸುತ್ತದೆ.

ವಿಚಾರಣೆಯು ಅಂತ್ಯವಾಗುವ ಹೊತ್ತಿಗೆ ಕಥೆಯು ಅನೇಕ ತಿರುವುಗಳನ್ನು ಪಡೆಯುತ್ತದೆ, ನೈಜ ಘಟನೆಗಳಿಂದ ಸ್ಫೂರ್ತಿ ಪಡೆದು ಈ ಚಿತ್ರಕಥೆಯನ್ನು ಹೆಣೆಯಲಾಗಿದೆ” ಎಂದರು.

ಸಕಲೇಶಪುರ, ಮಂಗಳೂರು, ಬೆಂಗಳೂರು ಹಾಗೂ ಮೈಸೂರಿನ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಹಾಡುಗಳಿಗೆ ಪ್ರಮೋದ್ ಮರವಂತೆ, ಕಿನ್ನಾಳ್ ರಾಜ್, ಅಶ್ವಿನಿ ಕೆ ಎನ್ ಸಾಹಿತ್ಯ ಬರೆದಿದ್ದು, ಚಿತ್ರಕ್ಕೆ ರಘು ದೀಕ್ಷಿತ್, ರವಿ ಬಸ್ರೂರು, ಸಚಿನ್ ಬಸ್ರೂರು, ನವ್ಯಾ ಭಟ್, ಲೋಕನಾಥ್ ಸುಗುಮ್, ಪಂಚಮ್ ಜೀವ ಹಾಡಿದ್ದಾರೆ.

ಈಗಾಗಲೇ ನಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಜನಮೆಚ್ಚುಗೆ ಪಡೆದಿದೆ. ಟ್ರೇಲರ್ ಹಾಗೂ ಹಾಡುಗಳನ್ನು ಲಹರಿ ಮ್ಯೂಸಿಕ್ ಸಂಸ್ಥೆಯ ಯೂಟ್ಯೂಬ್ ಚಾನಲ್‌ನಲ್ಲಿ ನೋಡಬಹುದು ಎಂದರು.

 ಸಿನಿಮಾದ ನಿರ್ದೇಶಕರಾಗಿ ಭಾಸ್ಕರ್ ಆರ್. ನೀನಾಸಂ ಕೆಲಸ ಮಾಡಿದ್ದಾರೆ. ಛಾಯಾಗ್ರಹಣ ರಾಜ್‌ಕಾಂತ್ ಅವರದಾಗಿದ್ದು, ಸಂಗೀತ ಸಚಿನ್ ಬಸ್ರೂರ್ ಅವರು ನೀಡಿದ್ದಾರೆ. ತಾರಾಗಣದಲ್ಲಿ ಮಧುನಂದನ್, ರಾಕೇಶ್ ಮಯ್ಯ, ಪಾವನಾ ಗೌಡ, ಅಚ್ಯುತ್‌ಕುಮಾರ್, ಶಿವಮೊಗ್ಗ ರಾಘು, ಜಹಾಂಗೀರ್ ಅಭಿನಯಿಸಿದ್ದಾರೆ ಎಂದರು. 

 ಪತ್ರಿಕಾಗೋಷ್ಠಿಯಲ್ಲಿ ಮಧುನಂದನ್, ರಾಕೇಶ್ ಮಯ್ಯ ಹಾಜರಿದ್ದರು.