ನೇಗಿಲೋಣಿ ಗುಂಡೇಟು ಪ್ರಕರಣ: ಇಬ್ಬರು ಸೆರೆ

ನೇಗಿಲೋಣಿ ಗುಂಡೇಟು ಪ್ರಕರಣ: ಇಬ್ಬರು ಸೆರೆ

ಶಿವಮೊಗ್ಗ: ಹೊಸನಗರ ತಾಲೂಕಿನ ನಗರ ಹೋಬಳಿ ವ್ಯಾಪ್ತಿಯ ನೇಗಿಲೋಣಿಯಲ್ಲಿ ನಡೆದ ಗುಂಡೇಟಿಗೆ ಬಲಿ ಪ್ರಕರಣಕ್ಕೆ ಇನ್ನೊಂದು ಮಹತ್ವದ ತಿರುವು ಸಿಕ್ಕಿದ್ದು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. 

ಅಂಡಗದೋದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೀರ್ತಿ ಹಾಗೂ ನಾಗರಾಜ್ ಎಂಬವವರನ್ನು ಪೊಲೀಸರು ಬಂಧಿಸಿದ್ದಾರೆ. ಇವರನ್ನು ಕೋರ್ಟ್​ಗೆ ಹಾಜರು ಮಾಡಿರುವ ಪೊಲೀಸರು, ನ್ಯಾಯಾಲಯದ ಸೂಚನೆಯಂತೆ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಈ ಪ್ರಕರಣದಲ್ಲಿ  ಮೃತ ಅಂಬರೀಷ ಬಂಡೆಯಿಂದ ಇಳಿಯುವಾಗ  ಬಂದೂಕಿನಿಂದ  ಗುಂಡು ಹಾರಿ ಆತ ಸಾವನ್ನಪ್ಪಿದ್ದ ಎಂದು  ಹೇಳಲಾಗಿತ್ತು. ಆನಂತರ ಅಲ್ಲಿಗೆ ರಾಜಕಾರಣಿಗಳ ಭೇಟಿ ನಿರಂತರವಾದ ಬೆನ್ನಲ್ಲೆ ಪ್ರಕರಣದ ಮೇಲೆ ಸಾಕಷ್ಟು ಅನುಮಾನ ಮೂಡಿದ್ದವು

 ಗೃಹಸಚಿವ ಆರಗ ಜ್ಞಾನೇಂದ್ರ  ಸಂತ್ರಸ್ತರ ಮನೆಗೆ ಹೋದಾಗ ತನಿಖೆಗೆ ಸಾರ್ವಜನಿಕರು ಆಗ್ರಿದಿದ್ದರು. ಅಲ್ಲಿಂದಲೇ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ, ಸ್ವಲ್ಪ ಗಮನ ಹರಿಸಬೇಕು. ಗಂಭೀರ  ವಿಚಾರ ಎಂದಿದ್ದರು. ಆನಂತರ ಇದೀಗ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂಬ ವಿಷಯ ಲಭ್ಯವಾಗಿದೆ.