ನಿಸ್ವಾರ್ಥ ಸೇವೆಯು ಆತ್ಮತೃಪ್ತಿಯ ಮಾರ್ಗ :ವೈದ್ಯಡಾ. ಧನಂಜಯ ಸರ್ಜಿ

ನಿಸ್ವಾರ್ಥ ಸೇವೆಯು ಆತ್ಮತೃಪ್ತಿಯ ಮಾರ್ಗ :ವೈದ್ಯಡಾ. ಧನಂಜಯ ಸರ್ಜಿ

ಶಿವಮೊಗ್ಗ: ಸಮಾಜದ ಪ್ರತಿಯೊಬ್ಬರು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ನಿಸ್ವಾರ್ಥ ಸೇವೆಯು ಆತ್ಮತೃಪ್ತಿಯನು ಒದಗಿಸುವ ಮಾರ್ಗ ಆಗಿದೆ ಎಂದು ಸರ್ಜಿ ಸಮೂಹ ಸಂಸ್ಥೆಯ ಡಾ|| ಧನಂಜಯ ಸರ್ಜಿಹೇಳಿದರು.

ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ವತಿಯಿಂದ ೧೪ರ ಸಂಭ್ರಮದ "ಸಹ್ಯಾದ್ರಿ ಉತ್ಸವ" ಹಾಗೂ ಜೆಸಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಸಂಘ ಸಂಸ್ಥೆಗಳಲ್ಲಿ ಭಾಗಿ ಆಗುವುದರಿಂದ ಸೇವಾ ಮನೋಭಾವ ಬೆಳೆಯುತ್ತದೆ. ಅನ್ನದಾನ, ವಿದ್ಯಾದಾನ, ರಕ್ತದಾನ ಪ್ರಮುಖ ಸೇವೆಗಳಾಗಿವೆ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚಿಕ್ಕಮಗಳೂರಿನ ಕಾಫಿನಾಡು ಚಂದು, ಜೀವನದಲ್ಲಿ ಏನೇ ಕಷ್ಟ ಬಂದರೂ ಛಲದಿಂದ ಬದುಕುವ ಮನೋಭಾವ ಬೆಳೆಸಿಕೊಳ್ಳಬೇಕು. ಅವಮಾನ, ನೋವು ಎದುರಾದರೂ ಮುಂದೆ ಗೆಲುವು ಸಿಕ್ಕೇ ಸಿಗುತ್ತದೆ.ಶ್ರಮ ವಹಿಸಿ ಬದುಕಿದರೆ ಒಳ್ಳೆಯದಾಗುತ್ತದೆ ಎಂದು ಹೇಳಿದರು.

ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷ ಸತೀಶ್‌ಚಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾವಂತ ಯುವ ಸಮುದಾಯ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಮಾಜದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕು. ಸಾರ್ವಜನಿಕ ಸೇವೆ ಸಲ್ಲಿಸಲು ಅವಕಾಶ ಇರುವ ರಾಜಕೀಯ ಕ್ಷೇತ್ರಕ್ಕೆ ವಿದ್ಯಾವಂತ ಯುವ ಸಮುದಾಯ ಬರುವುದರ ಮೂಲಕ ದೇಶದ ಸರ್ವತೋಮುಖ ಅಭಿವೃದ್ಧಿಗೆ ಭಾಗವಾಗಬೇಕು ಎಂದು ಹೇಳಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಪವಿತ್ರಕುಮಾರ, ಕಿಶೋರ್‌ಕುಮಾರ್, ಪ್ರಕಾಶ್ ಬೈಂದೂರ್, ಕಿರಣ್.ಕೆ.ಅವರಿಗೆ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ವತಿಯಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಯೂರಿ ನೃತ್ಯ ಕಲಾ ಕೇಂದ್ರ ವಿದುಷಿ ಶ್ವೇತಾ ಪ್ರಕಾಶ್‌ಅವರಿಂದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ನಡೆಯಿತು.

ವಲಯ ನಿರ್ದೇಶಕ ಅನೂಶ್‌ಗೌಡ, ಜೆಸಿ ವೀಕ್‌ಕೋಆರ್ಡಿನೇಟರ್ ಚಂದ್ರಹಾಸ ಶೆಟ್ಟಿ, ರೋಟರಿ ಮಾಜಿ ಸಹಾಯಕಗವರ್ನರ್ ಜಿ.ವಿಜಯ್‌ಕುಮಾರ್, ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಸಂಸ್ಥಾಪಕ ಅಧ್ಯಕ್ಷ ಹರೀಶ್, ಕಾರ್ಯದರ್ಶಿ ಸಂತೋಷ್‌ಕುಮಾರ್.ಬಿ.ಎನ್., ಕಾರ್ಯಕ್ರಮ ನಿರ್ದೇಶಕಿಡಾ. ಅಖಿಲಾ ಡಿ., ಮತ್ತಿತರರು ಉಪಸ್ಥಿತರಿದ್ದರು.